ETV Bharat / sports

ಸಿಎಂ ಸುಖ್ವಿಂದರ್​ ಸಿಂಗ್ ಸುಖು ಭೇಟಿ ಮಾಡಿದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ

author img

By ETV Bharat Karnataka Team

Published : Oct 25, 2023, 7:14 AM IST

Etv virat-kohli-meets-himachal-cm-sukhvinder-singh-sukhu-in-dharamshala
ಸಿಎಂ ಸುಖ್ವಿಂದರ್​ ಸಿಂಗ್ ಸುಖು ಭೇಟಿ ಮಾಡಿದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ

ಭಾರತ ತಂಡದ ಬ್ಯಾಟರ್​ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಹಿಮಾಚಲ ಮುಖ್ಯಮಂತ್ರಿ ಸುಖ್ವಿಂದರ್​ ಸಿಂಗ್​ ಸುಖು ಅವರನ್ನು ಭೇಟಿ ಮಾಡಿದರು.

ಧರ್ಮಶಾಲಾ(ಹಿಮಾಚಲ ಪ್ರದೇಶ): ಭಾರತ ತಂಡದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಅವರು ಹಿಮಾಚಲ ಮುಖ್ಯಮಂತ್ರಿ ಸುಖ್ವಿಂದರ್​ ಸಿಂಗ್​ ಸುಖು ಅವರನ್ನು ಭೇಟಿ ಮಾಡಿದರು. ಈ ಬಗ್ಗೆ ಎಕ್ಸ್​ನಲ್ಲಿ ಸುಖು ಅವರು ವಿರಾಟ್​ ಕೊಹ್ಲಿ ಜೊತೆ ಮಾತುಕತೆ ನಡೆಸುವ ಫೋಟೋವನ್ನು ಹಂಚಿಕೊಂಡಿದ್ದಾರೆ.

  • धर्मशाला में भारतीय क्रिकेट टीम के दिग्गज बल्लेबाज विराट कोहली से भेंट हुई। हमारे मध्य क्रिकेट को लेकर चर्चा हुई। विराट कोहली को न्यूजीलैंड के खिलाफ धर्मशाला क्रिकेट स्टेडियम में निर्णायक पारी खेलने के लिए बधाई। विश्व कप में भारतीय टीम के विजय अभियान को जारी रखने के लिए मैं,… pic.twitter.com/RTr4yi5IgI

    — Sukhvinder Singh Sukhu (@SukhuSukhvinder) October 24, 2023 " class="align-text-top noRightClick twitterSection" data=" ">

ಸಿಎಂ ಸುಖು ಎಕ್ಸ್​ನಲ್ಲಿ ಹಂಚಿಕೊಂಡಿರುವ ಪೋಸ್ಟ್​ನಲ್ಲಿ, ಭಾರತ ಕ್ರಿಕೆಟ್​ ತಂಡದ ಲೆಜೆಂಡರಿ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಅವರನ್ನು ಧರ್ಮಶಾಲಾದಲ್ಲಿ ಭೇಟಿ ಮಾಡಿದೆ. ಈ ವೇಳೆ ಕ್ರಿಕೆಟ್​ ಬಗ್ಗೆ ಚರ್ಚೆ ನಡೆಸಿದೆವು. ಧರ್ಮಶಾಲಾ ಕ್ರಿಕೆಟ್​ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ ನಿರ್ಣಾಯಕ ಇನ್ನಿಂಗ್ಸ್​ ಆಡಿದ ವಿರಾಟ್​ ಕೊಹ್ಲಿ ಅವರಿಗೆ ಅಭಿನಂದನೆಗಳು. ಈ ಸಂಬಂಧ ರಾಜ್ಯದ ಜನರ ಪರವಾಗಿ ಭಾರತದ ವಿಶ್ವಕಪ್​ ಗೆಲುವಿನ ಅಭಿಯಾನಕ್ಕೆ ಶುಭ ಕೋರುತ್ತೇನೆ ಎಂದು ಹೇಳಿದ್ದಾರೆ. ಈ ಸಂದರ್ಭ ಕಾಂಗ್ರೆಸ್​ ನಾಯಕರಾದ ರಾಜೀವ್​ ಶುಕ್ಲಾ, ತೇಜಿಂದರ್​ ಬಿಟ್ಟು,ಧರ್ಮಶಾಲಾ ಶಾಸಕ ಸುಧೀರ್​ ಶರ್ಮಾ, ಸಿಎಂ ರಾಜಕೀಯ ಸಲಹೆಗಾರ ಸುನಿಲ್​ ಶರ್ಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಚಿನ್ಮಯಾನಂದ ಆಶ್ರಮಕ್ಕೆ ಭೇಟಿ ನೀಡಿದ ಕೊಹ್ಲಿ : ಕಳೆದ ಭಾನುವಾರ ನಡೆದ ಭಾರತ ಮತ್ತು ನ್ಯೂಜಿಲೆಂಡ್​ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಎರಡು ದಿನಗಳ ಬಿಡುವಿನಲ್ಲಿ ಭಾರತ ತಂಡದ ಆಟಗಾರರು ಧರ್ಮಶಾಲಾದ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಈ ನಡುವೆ ವಿರಾಟ್​ ಕೊಹ್ಲಿ ಸಿದ್ಭಾದಿಯಲ್ಲಿರುವ ಸ್ವಾಮಿ ಚಿನ್ಮಯಾನಂದರ ಚಿನ್ಮಯ್ ತಪೋವನ್​ ಆಶ್ರಮಕ್ಕೆ ಭೇಟಿ ನೀಡಿದರು. ಈ ವೇಳೆ ಕೊಹ್ಲಿ ಆಶ್ರಮದಲ್ಲಿ ಕೆಲಕಾಲ ಕಳೆದರು. ಸಿಧ್​ಬರಿಯನ್ನು ಸಿದ್ಧರ ತಪೋವನ ಎಂದು ಪರಿಗಣಿಸಲಾಗಿದೆ. ಇಲ್ಲಿಯೇ ಚಿನ್ಮಯಾನಂದರ ಆಶ್ರಮವಿದೆ. ಈ ಆಶ್ರಮದಲ್ಲಿ ಭಗವದ್ಗೀತೆಯನ್ನು ಕಲಿಸಿಕೊಡಲಾಗುತ್ತದೆ. ಈ ಆಶ್ರಮದಿಂದ ಧವಳಧರ್​ ಪರ್ವತದ ಸುಂದರ ನೋಟ ಕಾಣಸಿಗುತ್ತದೆ.

ಭಾರತ ತಂಡವು ವಿಶ್ವಕಪ್​ ಟೂರ್ನಿಯಲ್ಲಿ ಆಡಿದ ಎಲ್ಲ ಐದು ಪಂದ್ಯಗಳಲ್ಲಿ ವಿರೋಚಿತ ಗೆಲುವು ಸಾಧಿಸಿದೆ. ಸದ್ಯ ಭಾರತ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದೆ. ಭಾರತ ಎಲ್ಲ ಪಂದ್ಯಗಳಲ್ಲಿ ಕಿಂಗ್ ಕೊಹ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಆದಿತ್ಯವಾರ ಇಲ್ಲಿನ ಧರ್ಮಶಾಲಾ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್​ ನಡುವಿನ ಪಂದ್ಯದಲ್ಲಿ 104 ಎಸೆತದಲ್ಲಿ 95 ರನ್​ ಗಳಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಇದಕ್ಕೂ ಮುನ್ನ ವಿರಾಟ್​ ಬಾಂಗ್ಲಾ ವಿರುದ್ಧ ತನ್ನ ಏಕದಿನ ಪಂದ್ಯಾಟದ 48ನೇ ಶತಕವನ್ನು ಪೂರೈಸಿದ್ದರು. ಸಚಿನ್​ ದಾಖಲೆ ಸರಿಗಟ್ಟಲು ವಿರಾಟ್​ ಕೊಹ್ಲಿಗೆ ಒಂದು ಶತಕದ ಅವಶ್ಯಕತೆ ಇದೆ. ವಿಶ್ವಕಪ್​ನಲ್ಲಿ ವಿರಾಟ್​​ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ತಾವು ಆಡಿರುವ ಪಂದ್ಯಗಳಿಂದ 354ರನ್​ ಗಳಿಸಿ ರನ್​ ಗಳಿಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇವರು ಆಡಿದ ಐದು ಇನ್ನಿಂಗ್ಸ್​ಗಳಲ್ಲಿ ಒಂದು ಶತಕ ಮತ್ತು 3 ಅರ್ಧ ಶತಕ ಹೊಂದಿದೆ. ಇಂದು ಭಾರತ ತಂಡವು ಲಖನೌಗೆ ಪ್ರಯಾಣ ಬೆಳೆಸಲಿದೆ.​

ಇದನ್ನೂ ಓದಿ : ಡಿಕಾಕ್, ಕ್ಲಾಸೆನ್‌ ಅಬ್ಬರಕ್ಕೆ ಮಣಿದ ಬಾಂಗ್ಲಾ; ಮಹಮದುಲ್ಲಾ ಏಕಾಂಗಿ ಹೋರಾಟ ವ್ಯರ್ಥ; ಪಾಯಿಂಟ್‌ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ದ.ಆಫ್ರಿಕಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.