ETV Bharat / sports

Virat Kohli: ಸಾವಿರ ಕೋಟಿಗೆ ಒಡೆಯ ವಿರಾಟ್​.. ಒಂದು ಇನ್​ಸ್ಟಾಗ್ರಾಮ್​​ ಪೋಸ್ಟ್​ನಿಂದ ಕೊಹ್ಲಿ ಎಷ್ಟು ಸಂಪಾದಿಸ್ತಾರೆ ಗೊತ್ತಾ?

author img

By

Published : Aug 11, 2023, 1:34 PM IST

Updated : Aug 12, 2023, 1:59 PM IST

Virat Kohli
Virat Kohli

Hopper Instagram Rich List: ಹಾಪರ್​ ಎಂಬ ಸಂಸ್ಥೆ ಇನ್​ಸ್ಟಾಗ್ರಾಮ್​ನ ಸಂಪಾದನೆಯ ಪಟ್ಟಿ ಬಿಡುಗಡೆ ಮಾಡಿದ್ದು, ಅದರ ಪ್ರಕಾರ ವಿರಾಟ್​ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ನವದೆಹಲಿ: ಭಾರತದಲ್ಲಿ ಕ್ರಿಕೆಟ್‌ ಮತ್ತು ಅದನ್ನು ಆಡುವ ಆಟಗಾರರ ಬಗ್ಗೆ ಜನರಿಗೆ ಎಲ್ಲಿಲ್ಲದ ಕ್ರೇಜ್​. ಇದರಿಂದಾಗಿ ಕ್ರಿಕೆಟ್​ ಆಟಗಾರರಿಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಹಿಂಬಾಲಕರಿದ್ದಾರೆ. ಭಾರತ ತಂಡದ ಸ್ಟಾರ್​ ಕ್ರಿಕೆಟಿಗರು ಕೋಟಿಗಟ್ಟಲೆ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ಇದರಿಂದ ಅವರು ಅಷ್ಟೇ ಸಂಪಾದನೆಯನ್ನೂ ಮಾಡುತ್ತಿದ್ದಾರೆ.

ಭಾರತ ತಂಡದ ಮಾಜಿ ನಾಯಕ, ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡದ ಆಟಗಾರ ವಿರಾಟ್​ ಕೊಹ್ಲಿಗೆ ಅಭಿಮಾನಿಗಳ ದಂಡೇ ಇದೆ. ಭಾರತದಲ್ಲಿ ಅಷ್ಟೇ ಅಲ್ಲದೇ ಹೊರ ರಾಷ್ಟ್ರಗಳಲ್ಲೂ ದೊಡ್ಡ ಫ್ಯಾನ್ಸ್​ ಫಾಲೋವರ್ಸ್​ ಇದೆ. ಅವರು ಕ್ರಿಡೆಯ ಜೊತೆಗೆ ಅವರ ಫಿಟ್​ನೆಸ್​​ ಹಾಗೂ ಅವರ ಮಾಡ್ರನ್​ ಲುಕ್​ನಿಂದ ಹೆಚ್ಚಿನವರಿಗೆ ಇಷ್ಟ ಆಗುತ್ತಾರೆ. ಇದರಿಂದ ಸೋಷಿಯಲ್​ ಮೀಡಿಯಾದಲ್ಲಿ ಮಿಲಿಯನ್​ ಗಟ್ಟಲೆ ಹಿಂಬಾಲಕರನ್ನೂ ಹೊಂದಿದ್ದಾರೆ. ಈ ಹಿಂಬಾಲಕ ಕಾರಣ ವಿರಾಟ್​ ಸಂಪಾದಿಸುವ ಹಣ ಕೇಳಿದರೆ ಕೆಲವರು ಬೆಚ್ಚಿ ಬೀಳುವುದಂತೂ ಖಂಡಿತ. ಅಷ್ಟು ಪ್ರಭಾವಿ ಈ ಆಟಗಾರ.

ಹೀಗಾಗಿ ಅವರು ಇನ್​ಸ್ಟಾಗ್ರಾಮ್​ನ ಒಂದು ಪೋಸ್ಟ್​ಗೆ ಕೋಟಿಗಟ್ಟಲೆ ಗಳಿಸುತ್ತಾರೆ ಎಂದು ಸೋಶಿಯಲ್​ ಮೀಡಿಯಾದಲ್ಲಿ ಸುದ್ದಿ ವೈರಲ್​ ಆಗುತ್ತಿದೆ.

ಭಾರತದ ಶ್ರೀಮಂತ ಕ್ರಿಕೆಟಿಗ ವಿರಾಟ್​ ಕೊಹ್ಲಿ. ಹಾಪರ್​ ಎಂಬ ಸಂಸ್ಥೆ ಇನ್​ಸ್ಟಾಗ್ರಾಮ್​ನ ಸಂಪಾದನೆಯ ಬಗ್ಗೆ ವರದಿಯೊಂದನ್ನು ಬಿಡುಗಡೆ ಮಾಡಿದೆ. 2021 ರಲ್ಲಿ ಕಿಂಗ್​​ ಕೊಹ್ಲಿ ಹಾಪರ್​ ಬಿಡುಗಡೆ ಮಾಡಿದ ಇನ್​ಸ್ಟಾಗ್ರಾಮ್​ ಶ್ರೀಮಂತರ ಪಟ್ಟಿಯಲ್ಲಿ ವಿಶ್ವದ 19 ನೇ ಸ್ಥಾನದಲ್ಲಿದ್ದರು. ಆಗ ವಿರಾಟ್ ಕೊಹ್ಲಿಯ ಇನ್​ಸ್ಟಾದ ಒಂದು ಪೋಸ್ಟ್‌ಗೆ $ 680,000 (ಸುಮಾರು 5 ಕೋಟಿ ರೂ.) ತೆಗೆದುಕೊಳ್ಳುತ್ತಿದ್ದರು. ಈಗ ಅವರ ಸಂಪಾದನೆ ಇನ್​​ಸ್ಟಾದಲ್ಲಿ ದುಪ್ಪಟ್ಟಾಗಿದೆ.

ಹಾಪರ್ ಇನ್‌ಸ್ಟಾಗ್ರಾಮ್ ರಿಚ್ ಲಿಸ್ಟ್‌ನ 2023ರ ವರದಿಯ ಪ್ರಕಾರ, ಈಗ ಅವರು 11.45 ಕೋಟಿ ಪಡೆಯುತ್ತಿದ್ದಾರೆ. ಕಳೆದ ಎರಡು ವರ್ಷದಲ್ಲಿ ಅವರು ಹೆಚ್ಚಿನ ಫಾಲೋವರ್ಸ್​ಗಳನ್ನು ಪಡೆದಿದ್ದು ಆಟಗಾರರ ಗಳಿಕೆಯ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಫುಟ್ಬಾಲ್​ ಆಟಗಾರರಾದ ಕ್ರಿಸ್ಟಿಯಾನೊ ರೊನಾಲ್ಡೊ ಒಂದು ಪೋಸ್ಟ್​ಗೆ 26.7 ಕೋಟಿ ಮತ್ತು ಲಿಯೊನೆಲ್‌ ಮೆಸ್ಸಿ 21.5 ಕೋಟಿ ಗಳಿಸುತ್ತಾರೆ ಅಂತಿದೆ ಸಾಮಾಜಿಕ ಜಾಲತಾಣದ ವರದಿಗಳು.

  • Top 3 athletes earnings per post on Instagram in 2023 (Hopper HQ):

    Cristiano Ronaldo - 26.7cr.

    Lionel Messi - 21.5cr.

    Virat Kohli - 11.45cr. pic.twitter.com/23tJCmARij

    — Mufaddal Vohra (@mufaddal_vohra) August 11, 2023 " class="align-text-top noRightClick twitterSection" data=" ">

ಇನ್​ಸ್ಟಾಗ್ರಾಮ್​ನಲ್ಲಿ ಆದಾಯ ಗಳಿಗೆಕೆ ಮುಖ್ಯವಾಗಿ ಫಾಲೋವರ್ಸ್​ ಕಾರಣರಾಗುತ್ತಾರೆ. ಹೆಚ್ಚು ಹಿಂಬಾಲಕರನ್ನು ಹೊಂದಿರುವವರು ಅಧಿಕ ಆದಾಯ ಗಳಿಸುತ್ತಾರೆ. ಒಂದು ಸಾಮಾನ್ಯ ಲೆಕ್ಕಚಾರದ ಪ್ರಕಾರ 1 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದರೆ, ನೀವು 2 ರಿಂದ 3 ಲಕ್ಷಗಳನ್ನು ಗಳಿಸಬಹುದು, ಹಾಗೇ 10 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದರೆ, ಸುಲಭವಾಗಿ 15 ರಿಂದ 20 ಲಕ್ಷಗಳನ್ನು ಗಳಿಸಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ.

ಇದನ್ನೂ ಓದಿ: ಏಕದಿನ ವಿಶ್ವಕಪ್​ಗೂ ಮುನ್ನ ತಂಡದಲ್ಲಿನ ಸಮಸ್ಯೆ ಬಗ್ಗೆ ನಾಯಕ ರೋಹಿತ್​ ಹೇಳಿದ್ದೇನು?

Last Updated :Aug 12, 2023, 1:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.