ETV Bharat / sports

ಭಾರತ ನಾನು ಬರುತ್ತಿದ್ದೇನೆ ಎಂದು ಉತ್ಸಾಹದಲ್ಲಿ ಬರೆದುಕೊಂಡ ಉಸ್ಮಾನ್​, ನೇರ ಬೆಂಗಳೂರಿಗೆ ಪ್ರಯಾಣ!

author img

By

Published : Feb 3, 2023, 11:10 AM IST

Usman Khawaja as Australia gear up  Australia gear up for first Test of Border  Australia vs India first test  border gavaskar trophy  border gavaskar trophy 2023  ಉತ್ಸಾಹದಲ್ಲಿ ಬರೆದುಕೊಂಡ ಉಸ್ಮಾನ್  ಭಾರತ ನಾನು ಬರುತ್ತಿದ್ದೇನೆ  ಉಸ್ಮಾನ್ ಖವಾಜ ಸಾಮಾಜಿಕ ಜಾಲತಾಣ  ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ  ಆರಂಭಿಕ ಆಟಗಾರ ಉಸ್ಮಾನ್ ಖವಾಜ  ಉಸ್ಮಾನ್ ಖವಾಜಾಗೆ ವೀಸಾ ಲಭ್ಯ  ಭಾರತದ ವೀಸಾ ಏಕೆ ಲಭ್ಯವಾಗಿರಲಿಲ್ಲ  ಎರಡು ದಶಕದ ಬಳಿಕ ಭಾರತದಲ್ಲಿ ಟೆಸ್ಟ್‌ ಸರಣಿ  ಟೆಸ್ಟ್‌ ಸರಣಿ ಸಲುವಾಗಿ ಸಮರಾಭ್ಯಾಸ
ಭಾರತ ನಾನು ಬರುತ್ತಿದ್ದೇನೆ ಎಂದು ಉತ್ಸಾಹದಲ್ಲಿ ಬರೆದುಕೊಂಡ ಉಸ್ಮಾನ್

ವೀಸಾ ಸಮಸ್ಯೆಯಿಂದಾಗಿ ಭಾರತಕ್ಕೆ ಆಸ್ಟ್ರೇಲಿಯಾ ತಂಡದ ಜೊತೆಗೆ ಪ್ರಯಾಣಿಸಲು ಸಾಧ್ಯವಾಗದ ವಿಚಾರವನ್ನು ಸ್ವತಃ ಉಸ್ಮಾನ್ ಖವಾಜ ಸಾಮಾಜಿಕ ಜಾಲತಾಣದಲ್ಲಿ ತಮಾಷೆಯಾಗಿ ಹಂಚಿಕೊಂಡಿದ್ದರು. ಈಗ ಅವರಿಗೆ ವೀಸಾ ದೊರೆತ್ತಿದ್ದು, ಇಂದು ತಂಡವನ್ನು ಸೇರಲಿದ್ದಾರೆ.

ಬೆಂಗಳೂರು: ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಗಾಗಿ ಆಸ್ಟ್ರೇಲಿಯಾ ತಂಡದ ಆಟಗಾರರೆಲ್ಲರೂ ಭಾರತಕ್ಕೆ ಈಗಾಗಲೇ ಆಗಮಿಸಿದ್ದಾರೆ. ಆದರೆ, ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಉಸ್ಮಾನ್ ಖವಾಜ ಮಾತ್ರ ತಮ್ಮ ತಂಡದ ಜೊತೆಗೆ ಬರಲು ಸಾಧ್ಯವಾಗಿರಲಿಲ್ಲ. ಹೌದು, ಅವರು ವೀಸಾ ಸಮಸ್ಯೆಯಿಂದಾಗಿ ತಂಡದ ಜೊತೆಗೆ ಪ್ರಯಾಣಿಸಲು ಸಾಧ್ಯವಾಗದೇ ಆಸ್ಟ್ರೇಲಿಯಾದಲ್ಲಿಯೇ ಉಳಿದುಕೊಂಡಿದ್ದರು. ಆದರೆ, ಇದೀಗ ಉಸ್ಮಾನ್ ಖವಾಜಾಗೆ ವೀಸಾ ಲಭ್ಯವಾಗುವ ಮೂಲಕ ಈ ಗೊಂದಲ ಪರಿಹಾರವಾಗಿದೆ.

ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಉಸ್ಮಾನ್ ಖವಾಜಾ ಅಂತಿಮವಾಗಿ ಭಾರತದ ವೀಸಾವನ್ನು ಪಡೆದಿದ್ದು, ತಮ್ಮ ಟ್ವಿಟರ್ ಮೂಲಕ ಈ ಮಾಹಿತಿ ನೀಡಿದ್ದಾರೆ. ಉಸ್ಮಾನ್ ಖವಾಜಾ ಅವರ ವೀಸಾದ ಕಾರಣ ಆಸ್ಟ್ರೇಲಿಯಾ ತಂಡದೊಂದಿಗೆ ಭಾರತಕ್ಕೆ ಬರಲು ಸಾಧ್ಯವಾಗಲಿಲ್ಲ. ಬಾರ್ಡರ್ - ಗವಾಸ್ಕರ್ ಸರಣಿ ಆಡಲು ಆಸ್ಟ್ರೇಲಿಯಾ ತಂಡ ಬುಧವಾರ ಭಾರತಕ್ಕೆ ಆಗಮಿಸಿದ್ದಾರೆ. ಭಾರತ ಪ್ರವಾಸದಲ್ಲಿ ಇಬ್ಬರ ನಡುವೆ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ ಅಲ್ಲದೇ 3 ಏಕದಿನ ಪಂದ್ಯಗಳ ಸರಣಿಯೂ ನಡೆಯಲಿದೆ.

'ಭಾರತ.. ನಾನು ಬರುತ್ತಿದ್ದೇನೆ': ಉಸ್ಮಾನ್ ಭಾರತಕ್ಕೆ ಆಗಮಿಸಿರುವ ಬಗ್ಗೆ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ. ಅವರು ಗುರುವಾರ ಟ್ವೀಟ್‌ ಮಾಡಿ.. ‘ಭಾರತ.. ನಾನು ಬರುತ್ತಿದ್ದೇನೆ’ ಎಂದು ಉತ್ಸಾಹದಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ಅವರು ಭಾರತವನ್ನು ಎಷ್ಟು ಇಷ್ಟಪಡುತ್ತಿದ್ದಾರೆ ಎಂಬುದು ತಿಳಿದು ಬರುತ್ತಿದೆ. ವೀಸಾ ಸಿಗುವ ಮೊದಲು ಅವರು ಟ್ವೀಟ್ ಮಾಡಿ, ಭಾರತದ ವೀಸಾ ಪಡೆಯಲು ನಾನು ಈ ರೀತಿ ಕಾಯುತ್ತಿದ್ದೇನೆ ಎಂದು ಟ್ವೀಟ್‌ನಲ್ಲಿ ಬರೆದುಕೊಂಡು, ಮೆಮೆ ಫೋಟೋವನ್ನು ಸಹ ಹಂಚಿಕೊಂಡಿದ್ದರು.

ವಿಸಾ ಸಮಸ್ಯೆ ಬಗೆಹರಿದ ಕಾರಣ ಉಸ್ಮಾನ್ ಖವಾಜ ಫೆಬ್ರವರಿ 2ರಂದು ಭಾರತಕ್ಕೆ ಪ್ರಯಾಣ ಆರಂಭಿಸಿದ್ದು, ಇಂದು ಆಸಿಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಆಸ್ಟ್ರೇಲಿಯಾ ತಂಡದ ಇತರ ಸದಸ್ಯರು ಎರಡು ಗುಂಪುಗಳಾಗಿ ಭಾರತಕ್ಕೆ ಪ್ರಯಾಣಿಸಿದ್ದಾರೆ. ಹೀಗಾಗಿ ಉಸ್ಮಾನ್ ಖವಾಜ ನೇರವಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಭಾರತದ ವೀಸಾ ಏಕೆ ಲಭ್ಯವಾಗಿರಲಿಲ್ಲ?: ಉಸ್ಮಾನ್ ಪಾಕಿಸ್ತಾನಿ ಮೂಲದವರಾಗಿದ್ದು, ಭಾರತದ ವೀಸಾ ಪಡೆಯುವಲ್ಲಿ ವಿಳಂಬವಾಗುತ್ತಿದೆ ಎಂದು ಹಲವು ಮಾಧ್ಯಮ ವರದಿಗಳಲ್ಲಿ ಹೇಳಲಾಗಿತ್ತು. ಆದರೂ ಸಹಿತ ಉಸ್ಮಾನ್ ಅವರ ವೀಸಾ ಏಕೆ ವಿಳಂಬವಾಯಿತು ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಎಲ್ಲೂ ಇಲ್ಲ.

ಆಸ್ಟ್ರೇಲಿಯಾದೊಂದಿಗೆ ಆಡುತ್ತಿರುವ ಪಾಕಿಸ್ತಾನದ ಉಸ್ಮಾನ್: ಡಿಸೆಂಬರ್ 18, 1986 ರಂದು ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಜನಿಸಿದ ಉಸ್ಮಾನ್ ಖವಾಜಾ ಆಸ್ಟ್ರೇಲಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಆಡುತ್ತಿದ್ದಾರೆ. ಅವರು 2011 ರಲ್ಲಿ ಆಸ್ಟ್ರೇಲಿಯಾದಿಂದ ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಅವರು ಇದುವರೆಗೆ ಆಸ್ಟ್ರೇಲಿಯಾ ಪರ ಒಟ್ಟು 56 ಟೆಸ್ಟ್, 40 ಏಕದಿನ ಮತ್ತು 9 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ ಅವರು 47.83 ಸರಾಸರಿಯಲ್ಲಿ 4162 ರನ್ ಗಳಿಸಿದ್ದಾರೆ. ಇದಲ್ಲದೇ, ಅವರು ಏಕದಿನದಲ್ಲಿ 42 ಸರಾಸರಿಯಲ್ಲಿ 1554 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, ಟಿ 20 ಅಂತರಾಷ್ಟ್ರೀಯ ಪಂದ್ಯದಲ್ಲಿ ಅವರು 26.77 ರ ಸರಾಸರಿಯಲ್ಲಿ ಮತ್ತು 132.41 ರ ಸ್ಟ್ರೈಕ್ ರೇಟ್‌ನಲ್ಲಿ 241 ರನ್ ಗಳಿಸಿದ್ದಾರೆ.

ಬರೋಬ್ಬರಿ ಎರಡು ದಶಕದ ಬಳಿಕ ಭಾರತದಲ್ಲಿ ಟೆಸ್ಟ್‌ ಸರಣಿ ಗೆಲ್ಲುವ ಕನಸು ಕಂಡಿರುವ ಆಸ್ಟ್ರೇಲಿಯಾ ತಂಡ, ಬಾರ್ಡರ್‌ - ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿ ಸಲುವಾಗಿ ಸಮರಾಭ್ಯಾಸ ಕೈಗೊಂಡಿದೆ. ಬೆಂಗಳೂರಿನ ಆಲೂರಿನಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿರುವ ಸ್ಪಿನ್‌ ಪಿಚ್‌ಗಳಲ್ಲಿ ಆಸ್ಟ್ರೇಲಿಯಾ ತಂಡ ಕಸರತ್ತು ನಡೆಸುತ್ತಿದೆ. ಅಂದಹಾಗೆ ಆಲೂರಿನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ತಂಡದ ಅಭ್ಯಾಸ ಶಿಬಿರ ಫೆ.6ರಂದು ಅಂತ್ಯಗೊಳ್ಳಲಿದ್ದು, ನಂತರ ಕಾಂಗರೂ ಪಡೆ ನಾಗ್ಪುರಕ್ಕೆ ಪ್ರಯಾಣ ಬೆಳೆಸಲಿದೆ. ನಾಲ್ಕು ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೊದಲ ಹಣಾಹಣಿ ನಾಗ್ಪುರದಲ್ಲಿನ ವಿದರ್ಭ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಫೆಬ್ರವರಿ 9ರಂದು ಶುರುವಾಗಲಿದೆ.

ಓದಿ: ಟಿ20: ತವರಿನಲ್ಲಿ ಭಾರತಕ್ಕೆ ಮತ್ತೊಂದು ಸರಣಿ ಗೆಲುವು; ವಿರಾಟ್​ ದಾಖಲೆ ಮುರಿದ ಗಿಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.