ETV Bharat / sports

ಏಷ್ಯನ್ ಗೇಮ್ಸ್​ ಕ್ರಿಕೆಟ್​ ತಂಡದಲ್ಲಿ​ ಪ್ರಮುಖ ಎರಡು ಬದಲಾವಣೆ.. ಚೀನಾಕ್ಕೆ ಪ್ರಯಾಣ ಬೆಳೆಸಿದ ವನಿತೆಯರ ತಂಡ

author img

By ETV Bharat Karnataka Team

Published : Sep 17, 2023, 10:56 PM IST

two changes in india mens and womens cricket team of asian games 2023
ಏಷ್ಯನ್ ಗೆಮ್ಸ್​ ಕ್ರಿಕೆಟ್​ ತಂಡದಲ್ಲಿ​ ಪ್ರಮುಖ ಎರಡು ಬದಲಾವಣೆ

ಏಷ್ಯನ್ ಗೇಮ್ಸ್ ಆರಂಭಕ್ಕೂ ಮುನ್ನವೇ ಭಾರತದ ಪುರುಷ ಹಾಗೂ ಮಹಿಳಾ ತಂಡಗಳು ಭಾರಿ ಹಿನ್ನಡೆ ಅನುಭವಿಸಿವೆ. ಇದೀಗ ಏಷ್ಯನ್ ಗೇಮ್ಸ್ ಆರಂಭಕ್ಕೆ 6 ದಿನಗಳು ಮಾತ್ರ ಬಾಕಿ ಇದ್ದು, ಟೀಂ ಇಂಡಿಯಾದ ಇಬ್ಬರು ಪ್ರಮುಖ ಆಟಗಾರರು ಹೊರಬಿದ್ದಿದ್ದಾರೆ.

ನವದೆಹಲಿ: ಏಷ್ಯನ್ ಗೇಮ್ಸ್​ನ 19ನೇ ಆವೃತ್ತಿಯು ಚೀನಾದಲ್ಲಿ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 8 ರವರೆಗೆ ನಡೆಯಲಿದೆ. ಈ ಟೂರ್ನಿಗೂ ಮುನ್ನವೇ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದು ಹೊರಬಿದ್ದಿದೆ. ಏಷ್ಯನ್ ಗೇಮ್ಸ್‌ಗಾಗಿ ಪ್ರಕಟಿಸಿರುವ ತನ್ನ ತಂಡದಲ್ಲಿ ಬಿಸಿಸಿಐ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಭಾರತ ಪುರುಷ ಮತ್ತು ಮಹಿಳಾ ತಂಡದಲ್ಲಿ ಬಿಸಿಸಿಐ 1-1 ಬದಲಾವಣೆ ಮಾಡಿದೆ. ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯ ಪೋಸ್ಟ್‌ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ.

ಭಾರತ ತಂಡದಲ್ಲಿ 2 ಬದಲಾವಣೆ ಮಾಡಲಾಗಿದೆ: ಭಾರತ ಪುರುಷರ ತಂಡದಲ್ಲಿ ವೇಗದ ಬೌಲರ್ ಶಿವಂ ಮಾವಿಯನ್ನು ಸೇರಿಸಲಾಯಿತು. ಇದೀಗ ಗಾಯದ ಸಮಸ್ಯೆಯಿಂದಾಗಿ ಏಷ್ಯನ್ ಗೇಮ್ಸ್‌ನಿಂದ ಹೊರಗುಳಿದಿದ್ದಾರೆ. ಶಿವಂ ಮಾವಿ ಬೆನ್ನಿಗೆ ಗಾಯವಾಗಿದ್ದು, ಅವರನ್ನು ತಂಡದಿಂದ ಕೈಬಿಡಲಾಗಿದೆ. ಅವರ ಜಾಗದಲ್ಲಿ ಆಕಾಶ್ ದೀಪ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಕಾಶದೀಪ್ ಅದ್ಭುತ ಪ್ರದರ್ಶನ ನೀಡಿದ್ದಾರೆ.

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಎಡಗೈ ವೇಗದ ಬೌಲರ್ ಅಂಜಲಿ ಸರ್ವಾನಿ ಕೂಡ ಏಷ್ಯನ್ ಗೇಮ್ಸ್‌ನಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ಪೂಜಾ ವಸ್ತ್ರಾಕರ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಮೊಣಕಾಲಿನ ಗಾಯದಿಂದಾಗಿ ಅಂಜಲಿ ಏಷ್ಯನ್ ಗೇಮ್ಸ್‌ನಿಂದ ಹೊರಗುಳಿದಿದ್ದು, ಪೂಜಾ ವಸ್ತ್ರಾಕರ್ ಅವರನ್ನು ಈಗಾಗಲೇ ಭಾರತ ತಂಡದ ಸ್ಟ್ಯಾಂಡ್‌ಬೈ ಆಟಗಾರರಲ್ಲಿ ಇರಿಸಲಾಗಿತ್ತು.

ಏಷ್ಯನ್ ಗೇಮ್ಸ್‌ನಲ್ಲಿ ಕ್ರಿಕೆಟ್ ಯಾವಾಗ ನಡೆಯಲಿದೆ?: ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ ಕ್ರಿಕೆಟ್ ತಂಡದ ಪಂದ್ಯಗಳು ಸೆಪ್ಟೆಂಬರ್ 28 ರಿಂದ ಪ್ರಾರಂಭವಾಗಲಿದ್ದು, ಅಕ್ಟೋಬರ್ 7 ರವರೆಗೆ ನಡೆಯಲಿವೆ. ಇದರೊಂದಿಗೆ ಏಷ್ಯನ್ ಗೇಮ್ಸ್​ನಲ್ಲಿ ಮಹಿಳಾ ಕ್ರಿಕೆಟ್ ತಂಡದ ಪಂದ್ಯಗಳು ಸೆ.19ರಿಂದ ಆರಂಭವಾಗಲಿದ್ದು, ಸೆ.26ರವರೆಗೆ ನಡೆಯಲಿದೆ. ಈ ಟೂರ್ನಿಯಲ್ಲಿ 8 ಮಹಿಳಾ ಮತ್ತು 15 ಪುರುಷರ ತಂಡಗಳು ಭಾಗವಹಿಸಲಿವೆ. ಈ ಟೂರ್ನಿಯಲ್ಲಿ ಭಾರತದ ಎರಡೂ ತಂಡಗಳನ್ನು ಚಿನ್ನದ ಪದಕಕ್ಕೆ ಸ್ಪರ್ಧಿಗಳೆಂದು ಪರಿಗಣಿಸಲಾಗಿದೆ. ಇಂದು ವನಿತೆಯರ ತಂಡ ಚೀನಾಕ್ಕೆ ಪ್ರಯಾಣ ಬೆಳೆಸಿದೆ.

  • Team India's Men's squad for Asian Games 2023:

    Ruturaj (C), Yashasvi, Tripathi, Tilak, Rinku, Jitesh, Sundar, Shahbaz, Bishnoi, Avesh, Arshdeep, Mukesh, Mavi, Dube, Prabhsimran, Akash Deep.

    Standby players - Yash Thakur, Kishore, Venkatesh, Hooda, Sudharsan. pic.twitter.com/i9meTWmRT8

    — CricketMAN2 (@ImTanujSingh) September 16, 2023 " class="align-text-top noRightClick twitterSection" data=" ">

ತಂಡಗಳು ಇಂತಿವೆ: ಪುರುಷರ ತಂಡ: ರುತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್​ ಕೀಪರ್​), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಶಿವಂ ದುಬೆ, ಪ್ರಭುಸಿಮ್ರಾನ್ ಸಿಂಗ್ (ವಿಕೆಟ್​ ಕೀಪರ್​), ಆಕಾಶ್ ದೀಪ್.

ಸ್ಟ್ಯಾಂಡ್‌ಬೈ ಆಟಗಾರರು: ಯಶ್ ಠಾಕೂರ್, ಸಾಯಿ ಕಿಶೋರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಸಾಯಿ ಸುದರ್ಶನ್.

ವನಿತೆಯರ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ ( ವಿಕೆಟ್​ ಕೀಪರ್​), ಅಮನ್‌ಜೋತ್ ಕೌರ್, ದೇವಿಕಾ ವೈದ್ಯ, ಟಿಟಾಸ್ ಸಾಧು, ರಾಜೇಶ್ವರಿ ಗಾಯಕ್‌ವಾಡ್, ಮಿನ್ನು ಮಣಿ, ಕನಿಕಾ ಅಹುಜಾ, ಉಮಾ ಚೆಟ್ರಿ ( ವಿಕೆಟ್​ ಕೀಪರ್​), ಅನುಷಾ ಬಾರೆಡ್ಡಿ, ಪೂಜಾ ವಸ್ತ್ರಕರ್.

ಸ್ಟ್ಯಾಂಡ್‌ಬೈ ಆಟಗಾರ್ತಿಯರು: ಹರ್ಲೀನ್ ಡಿಯೋಲ್, ಕಶ್ವಿ ಗೌತಮ್, ಸ್ನೇಹ್ ರಾಣಾ, ಸೈಕಾ ಇಷ್ಕುಯ್.

ಇದನ್ನೂ ಓದಿ:Australia squad: ಭಾರತ ಪ್ರವಾಸಕ್ಕೆ ಆಸ್ಟ್ರೇಲಿಯಾ ತಂಡ ಪ್ರಕಟ.. ಟೀಮ್​ ಸೇರಿಕೊಂಡ ಸ್ಮಿತ್​, ಕಮಿನ್ಸ್​, ಗ್ರೀನ್​, ಮ್ಯಾಕ್ಸ್​ವೆಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.