ETV Bharat / sports

ಇಂಗ್ಲೆಂಡ್​ ವಿರುದ್ಧದ ಈ ಇನ್ನಿಂಗ್ಸ್​​​ ಅಸ್ತಿತ್ವಕ್ಕಾಗಿ ಆಡಿಲ್ಲ: ರೋಹಿತ್​ ಶರ್ಮಾ

author img

By

Published : Aug 28, 2021, 3:26 PM IST

Updated : Aug 28, 2021, 3:35 PM IST

Rohit Sharma
Rohit Sharma

ಇಂಗ್ಲೆಂಡ್​ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯದ ಎರಡನೇ ಇನ್ನಿಂಗ್ಸ್​​ನಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡುತ್ತಿದ್ದು, ಇದೇ ವಿಚಾರವಾಗಿ ರೋಹಿತ್ ಶರ್ಮಾ ಮಾತನಾಡಿದ್ದಾರೆ.

ಲೀಡ್ಸ್​​(ಇಂಗ್ಲೆಂಡ್​​): ಆತಿಥೇಯ ಇಂಗ್ಲೆಂಡ್​ ವಿರುದ್ಧದ ಮೂರನೇ ಟೆಸ್ಟ್​​ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್​​ನಲ್ಲಿ ಕೇವಲ 78ರನ್​ಗಳಿಗೆ ಆಲೌಟ್​ ಆಗಿ ಅನೇಕ ರೀತಿಯ ಟೀಕೆಗೊಳಗಾಗಿತ್ತು. ಆದರೆ ಎರಡನೇ ಇನ್ನಿಂಗ್ಸ್​​ನಲ್ಲಿ ಭರ್ಜರಿ ಕಮ್​ಬ್ಯಾಕ್​ ಮಾಡಿದ್ದು, ಉತ್ತಮ ಪ್ರದರ್ಶನ ನೀಡುತ್ತಿದೆ. ಇದೇ ವಿಚಾರವಾಗಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ಮಾತನಾಡಿದ್ದಾರೆ.

ಮೂರನೇ ಟೆಸ್ಟ್​ ಪಂದ್ಯದ ಬಗ್ಗೆ ರೋಹಿತ್ ಶರ್ಮಾ ಮಾಹಿತಿ

ಇದನ್ನೂ ಓದಿರಿ: ರೋಹಿತ್​ ಶರ್ಮಾ ವಿಕೆಟ್ ಪತನವಾಗ್ತಿದ್ದಂತೆ ಬ್ಯಾಟ್ ಮಾಡಲು ಮೈದಾನಕ್ಕಿಳಿದ ಜಾರ್ವೋ.. ಮುಂದೇನಾಯ್ತು ನೋಡಿ!

ಮೂರನೇ ಟೆಸ್ಟ್​​ ಪಂದ್ಯದ ಮೂರನೇ ದಿನದ ಅಂತ್ಯಕ್ಕೆ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ರೋಹಿತ್​ ಶರ್ಮಾ,ನಾನು ಆಡಿರುವ ಈ ಇನ್ನಿಂಗ್ಸ್​​​ ಟೆಸ್ಟ್​​ ಕ್ರಿಕೆಟ್​​ನಲ್ಲಿನ ಅಸ್ತಿತ್ವಕ್ಕಾಗಿ ಅಲ್ಲ. ಸ್ಕೋರ್​ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದಿದ್ದಾರೆ.ಮೊದಲನೇ ಇನ್ನಿಂಗ್ಸ್​ನಲ್ಲಿ ವಿಫಲವಾಗಿರುವ ನಾವು ಎರಡನೇ ಇನ್ನಿಂಗ್ಸ್​​ನಲ್ಲಿ ಉತ್ತಮ ರನ್​ಗಳಿಸುವ ಗುರಿ ಹೊಂದಿದ್ದೇವೆ. ಪೂಜಾರಾ ಅದನ್ನ ಸ್ಪಷ್ಟವಾಗಿ ತೋರಿಸಿದ್ದಾರೆಂದು ರೋಹಿತ್​ ಶರ್ಮಾ ಹೇಳಿದರು.

ಮೈದಾನದಲ್ಲಿ ಬ್ಯಾಟ್​​ ಮಾಡುವುದು ಸುಲಭವಲ್ಲ. 300 ರನ್​ಗಳ ಹಿನ್ನಡೆಯಲ್ಲಿದ್ದಾಗ ಪೂಜಾರಾ ಆಡಿರುವ ರೀತಿ ಪ್ರತಿಯೊಬ್ಬ ಆಟಗಾರನ ಪಾತ್ರ ಮತ್ತು ಮನಸ್ಥಿತಿ ಏನೆಂಬುದರ ಬಗ್ಗೆ ತೋರಿಸುತ್ತದೆ ಎಂದು ಹೇಳಿದ್ದಾರೆ. ಇಲ್ಲಿ ನಾವು ಆಡುತ್ತಿರುವುದು ಟೆಸ್ಟ್ ಕ್ರಿಕೆಟ್​ನಲ್ಲಿನ ಅಸ್ತಿತ್ವಕ್ಕಾಗಿ ಅಲ್ಲ ಎಂಬುದನ್ನ ಸ್ಪಷ್ಟಪಡಿಸಿದ್ದಾರೆ.

ಈ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್​ 432ರನ್​ಗಳಿಕೆ ಮಾಡಿ, ಬರೋಬ್ಬರಿ 354ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಇದೀಗ ಎರಡನೇ ಇನ್ನಿಂಗ್ಸ್​ ಆರಂಭ ಮಾಡಿರುವ ಟೀಂ ಇಂಡಿಯಾ 2 ವಿಕೆಟ್​ನಷ್ಟಕ್ಕೆ 215ರನ್​ಗಳಿಕೆ ಮಾಡಿದೆ. ಚೇತೇಶ್ವರ್ ಪೂಜಾರಾ ಅಜೇಯ 91ರನ್​ ಹಾಗೂ ವಿರಾಟ್​ ಕೊಹ್ಲಿ 45ರನ್​ಗಳಿಕೆ ಮಾಡಿ ಮೈದಾನದಲ್ಲಿದ್ದಾರೆ.

Last Updated :Aug 28, 2021, 3:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.