ETV Bharat / sports

ಬಾಂಗ್ಲಾ ವಿರುದ್ದ ಮೊದಲ ಟೆಸ್ಟ್: ಟೀಂ ಇಂಡಿಯಾ ತಾಲೀಮು

author img

By

Published : Dec 12, 2022, 5:02 PM IST

Updated : Dec 12, 2022, 5:38 PM IST

ಏಕದಿನ ಸರಣಿಯನ್ನು ಕಳೆದುಕೊಂಡ ಭಾರತ ಕ್ರಿಕೆಟ್‌ ತಂಡ ಇದೀಗ ಟೆಸ್ಟ್ ಸರಣಿಗಾಗಿ ಅಭ್ಯಾಸ ನಡೆಸುತ್ತಿದೆ.

Team India is well prepared
ಟೀಂ ಇಂಡಿಯಾ ಭರ್ಜರಿ ಸಿದ್ದತೆ

ಭಾರತ ಮತ್ತು ಬಾಂಗ್ಲಾದೇಶ ಕ್ರಿಕೆಟ್​ ತಂಡಗಳ ನಡುವಿನ ಟೆಸ್ಟ್ ಸರಣಿ ಡಿಸೆಂಬರ್ 14 ರಿಂದ ಆರಂಭವಾಗಲಿದೆ. ಎರಡು ಪಂದ್ಯಗಳ ಸರಣಿಯ ಮೊದಲ ಪಂದ್ಯ ಚಟ್ಟೋಗ್ರಾಮ್‌ನಲ್ಲಿ ಹಾಗೂ ಇದಾದ ಬಳಿಕ ಎರಡನೇ ಪಂದ್ಯ ಢಾಕಾದಲ್ಲಿ ನಿಗದಿಯಾಗಿದೆ. ಬಾಂಗ್ಲಾ ವಿರುದ್ಧದ ಏಕದಿನ ಸರಣಿ ಕಳೆದುಕೊಂಡಿರುವ ಟೀಂ ಇಂಡಿಯಾ ಆತಿಥೇಯರ ವಿರುದ್ಧದ ಟೆಸ್ಟ್ ಸರಣಿ ಗೆದ್ದು ಎದಿರೇಟು ನೀಡಲು ನೆಟ್ಸ್‌ನಲ್ಲಿ ತಾಲೀಮು ನಡೆಸುತ್ತಿದೆ.

ಈ ಸರಣಿಯಲ್ಲಿ ಕೆ ಎಲ್ ರಾಹುಲ್ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ. ಗಾಯದ ಸಮಸ್ಯೆಯಿಂದ ಹೊರಗುಳಿದಿರುವ ನಾಯಕ ರೋಹಿತ್ ಶರ್ಮಾ ಬದಲಿಗೆ ಅಭಿಮನ್ಯು ಈಶ್ವರನ್ ತಂಡ ಸೇರಿಕೊಂಡಿದ್ದಾರೆ. ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಹಾಗೂ ಏಕದಿನ ಸರಣಿಯಿಂದ ಹೊರಗುಳಿದಿದ್ದ ಆರಂಭಿಕ ಆಟಗಾರ ಶುಭಮನ್ ಗಿಲ್ ಕೂಡ ತಂಡ ಸೇರಿದ್ದು ಮೊದಲ ಪಂದ್ಯಕ್ಕಾಗಿ ತಯಾರಿ ನಡೆಸುತ್ತಿದ್ದಾರೆ.

ಬಾಂಗ್ಲಾದೇಶ ತಂಡ: ಮಹ್ಮದುಲ್ ಹಸನ್ ಜಾಯ್, ನಜ್ಮುಲ್ ಹಸನ್ ಶಾಂಟೊ, ಮೊಮಿನುಲ್ ಹಕ್, ಯಾಸಿರ್ ಅಲಿ ಚೌಧರಿ, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್ (ನಾಯಕ), ಲಿಟನ್ ದಾಸ್, ನೂರುಲ್ ಹಸನ್, ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ತೈಜುಲ್ ಇಸ್ಲಾಂ, ಸೈಯದ್ ಖಾಲಿದ್ ಅಹ್ಮದ್, ಇಬಾದತ್ ಹುಸೇನ್, ಶೋರಿಫುಲ್ ಇಸ್ಲಾಂ, ಜಾಕಿರ್ ಹಸನ್, ರೆಜಾರ್ ರೆಹಮಾನ್ ರಾಜಾ ಮತ್ತು ಅನಾಮುಲ್ ಹಕ್ ಬಿಜೋಯ್.

ಭಾರತ ತಂಡ: ಕೆ ಎಲ್ ರಾಹುಲ್ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಕೆಎಸ್ ಭರತ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಶಾರ್ದೂಲ್ ಠಾಕೂರ್ ಜಯದೇವ್ ಉನದ್ಕತ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಹಾಗೂ ಅಭಿಮನ್ಯು ಈಶ್ವರನ್ ತಂಡದಲ್ಲಿದ್ದಾರೆ.

ಇದನ್ನೂ ಓದಿ:ಎರಡನೇ ಟಿ20: ಸೂಪರ್ ಓವರ್​ನಲ್ಲಿ ಆಸ್ಟ್ರೇಲಿಯಾಗೆ ಸೋಲುಣಿಸಿದ ಭಾರತದ ವನಿತೆಯರು

Last Updated : Dec 12, 2022, 5:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.