ETV Bharat / sports

ಮೆಲ್ಬೋರ್ನ್​ ಫೈನಲ್​ ಕದನ: ಇಂಗ್ಲೆಂಡ್​ ದಾಳಿಗೆ ನಲುಗಿದ ಪಾಕ್​.. 8 ವಿಕೆಟ್​ಗೆ 137 ರನ್​

author img

By

Published : Nov 13, 2022, 3:43 PM IST

t20-world-cup
ಮೆಲ್ಬೋರ್ನ್​ ಫೈನಲ್​ ಕದನ

ಮೆಲ್ಬೋರ್ನ್​ ಮೈದಾನದಲ್ಲಿ ನಡೆಯುತ್ತಿರುವ ಟಿ20 ಫೈನಲ್​ ಪಂದ್ಯದಲ್ಲಿ ಖತರ್ನಾಕ್​ ಬೌಲಿಂಗ್​ ದಾಳಿ ಮಾಡಿದ ಇಂಗ್ಲೆಂಡ್​, ಪಾಕಿಸ್ತಾನವನ್ನು 137 ರನ್​ಗಳ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿತು.

ಮೆಲ್ಬೋರ್ನ್​(ಆಸ್ಟ್ರೇಲಿಯಾ): ಟಿ20 ವಿಶ್ವಕಪ್​ಗೆ ಹೊಸ ಬಾಸ್​ ಆಗುವ ಫೈನಲ್​ ಪಂದ್ಯದಲ್ಲಿ ಬಿಗುವಿನ ಆಟವಾಡಿದ ಇಂಗ್ಲೆಂಡ್​, ಅದೃಷ್ಟದ ಮೂಲಕ ಅಂತಿಮ ಸುತ್ತಿಗೆ ಬಂದಿರುವ ಪಾಕಿಸ್ತಾನವನ್ನು 8 ವಿಕೆಟ್​ಗೆ 137 ರನ್​ಗಳ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿತು. ಇಂಗ್ಲೆಂಡ್​ನ ಡೆತ್​ಓವರ್​ ಸ್ಪೆಷಲಿಸ್ಟ್​, ಸ್ಟಾರ್​ ಬೌಲರ್​ ಸ್ಯಾಮ್​ ಕರ್ರನ್​, ಆದಿಲ್​ ರಶೀದ್​, ಕ್ರಿಸ್​ ಜೋರ್ಡಾನ್​ ಬಲೆಗೆ ಬಿದ್ದ ಪಾಕಿಸ್ತಾನ ಬ್ಯಾಟರ್​ಗಳು ರನ್​ ಗಳಿಸಲು ಪರದಾಡಿದರು.

ಆಂಗ್ಲರ ದಾಳಿಗೆ ಪಾಕಿಸ್ತಾನ ಬೆಂಡು: ಆಲ್​ರೌಂಡರ್​ಗಳ ದಂಡನ್ನೇ ಹೊಂದಿರುವ ಇಂಗ್ಲೆಂಡ್​ ಈ ಬಾರಿಯ ವಿಶ್ವಕಪ್​ನ ಅತ್ಯಂತ ಬಲಿಷ್ಠ ತಂಡವಾಗಿದೆ. ಸೆಮಿಫೈನಲ್​ನಲ್ಲಿ ಭಾರತ ನೀಡಿದ ಗುರಿಯನ್ನು ವಿಕೆಟ್​ ನಷ್ಟವಿಲ್ಲದೇ ಮುಟ್ಟಿದಾಗಲೇ ತಂಡ ವಿಶ್ವಕಪ್​ ಗೆದ್ದ ಖುಷಿಯಲ್ಲಿತ್ತು. ಅದೇ ಅಲೆಯಲ್ಲಿ ಕಣಕ್ಕಿಳಿದ ಇಂಗ್ಲೆಂಡ್​, ಪಾಕಿಸ್ತಾನವನ್ನು ಯಾವ ಹಂತದಲ್ಲೂ ಬೆಳೆಯದಂತೆ ಅದುಮಿ ಹಾಕಿತು.

ತಂಡದ ಸ್ಟಾರ್​ ಬ್ಯಾಟರ್​ಗಳಾದ ಮೊಹಮದ್​ ರಿಜ್ವಾನ್​, ನಾಯಕ ಬಾಬರ್​ ಆಜಂ ದೊಡ್ಡ ಇನಿಂಗ್ಸ್​ ಕಟ್ಟುವಲ್ಲಿ ವಿಫಲರಾದರು. ರಿಜ್ವಾನ್​ 15 ರನ್​ ಗಳಿಸಿದ್ದಾಗ ಸ್ಯಾಮ್​ ಕರ್ರನ್​ ಎಸೆತಕ್ಕೆ ಕ್ಲೀನ್​ ಬೌಲ್ಡ್​ ಆದರು. ಮೊಹಮದ್​ ಹ್ಯಾರೀಸ್​ 8 ರನ್​ಗೆ ಆದಿಲ್​ ರಸೀದ್​ ಸ್ಪಿನ್​ ದಾಳಿಗೆ ಬಿದ್ದರು. ಇಫ್ತಿಕಾರ್​ ಅಹ್ಮದ್​ಗೆ "ಸ್ಟೋಕ್ಸ್​" ಹೊಡೆದು ಸೊನ್ನೆ ಸುತ್ತಿದರು.

ಬಾಬರ್​, ಮಸೂದ್​ ಅಲ್ಪ ನೆರವು: ತಂಡ ಸತತ ವಿಕೆಟ್​ ಕಳೆದುಕೊಳ್ಳುತ್ತಿದ್ದಾಗ ಅಲ್ಪ ಪ್ರತಿರೋಧ ತೋರಿದ ಬಾಬರ್​ ನಿಧಾನಗತಿಯಲ್ಲಿ ಬ್ಯಾಟ್​ ಮಾಡಿ 28 ಎಸೆತಗಳಲ್ಲಿ 32 ರನ್​ ಗಳಿಸಿ ಔಟಾದರು. ಶಾನ್​ ಮಸೂದ್​ ಉತ್ತಮ ಬ್ಯಾಟಿಂಗ್​ ನಿಭಾಯಿಸಿ 28 ಸೆತಗಳಲ್ಲಿ 38 ರನ್​ ಮಾಡಿ ವಿಕೆಟ್​ ನೀಡಿದರು. ಹೊಡಿಬಡಿ ಆಟಕ್ಕಿಳಿದ ಶಾದಾಬ್​ ಖಾನ್​ 20 ರನ್​ಗೆ ಸುಸ್ತಾದರು. ಬಳಿಕ ಬಂದ ಯಾವೊಬ್ಬ ಬ್ಯಾಟರ್​ಗಳು ಕೂಡ ರನ್​ ಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ 20 ಓವರ್​ಗಳಲ್ಲಿ 8 ವಿಕೆಟ್​ಗೆ 137 ರನ್​ ಗಳಿಸಿತು.

ಕರ್ರನ್​ ಖತರ್ನಾಕ್​ ದಾಳಿ: ಇಂಗ್ಲೆಂಡ್​ನ ಸ್ಟಾರ್​ ಬೌಲರ್​ ಸ್ಯಾಮ್​ ಕರ್ರನ್​ ಪಾಕಿಸ್ತಾನಕ್ಕೆ ಅಕ್ಷರಶಃ ಶತ್ರುವಾದರು. ಮೊದಲ ಓವರ್​ನಿಂದ ಕಾಡಿದ ಕರ್ರನ್​ 4 ಓವರ್​ಗಳಲ್ಲಿ 12 ರನ್​ ನೀಡಿ ಪ್ರಮುಖ 3 ವಿಕೆಟ್​ ಕಿತ್ತರು. ಕರ್ರನ್​ ಸಾಥ್​ ನೀಡಿದ ಆದಿಲ್​ ರಶೀದ್​ 2, ಕ್ರಿಸ್​ ಜೋರ್ಡಾನ್​ 2, ಬೆನ್​ ಸ್ಟೋಕ್ಸ್​ 1 ವಿಕೆಟ್​ ಪಡೆದು ಮಿಂಚಿದರು.

ಓದಿ: ಪಾಕ್​ ಬೌಲರ್​ಗಳು ಭಾರತದಂತಲ್ಲ, ಇಂಗ್ಲೆಂಡ್​ಗೆ ವಾಕ್​ಓವರ್​​ ಸಿಗುವುದಿಲ್ಲ: ಶೋಯಬ್​ ಅಖ್ತರ್ ವ್ಯಂಗ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.