ETV Bharat / sports

T20 World Cup 2021: ಭಾರತದ ವಿರುದ್ಧ ಗೆದ್ದ ಪಾಕ್.. ಭಾವುಕರಾದ ಪಾಕಿಸ್ತಾನ ತಂಡದ ನಾಯಕ ಬಾಬರ್ ತಂದೆ

author img

By

Published : Oct 25, 2021, 5:12 PM IST

ಭಾವುಕರಾದ ಪಾಕಿಸ್ತಾನ ತಂಡದ ನಾಯಕ ಬಾಬರ್ ತಂದೆ
ಭಾವುಕರಾದ ಪಾಕಿಸ್ತಾನ ತಂಡದ ನಾಯಕ ಬಾಬರ್ ತಂದೆ

ಐಸಿಸಿ ಟಿ-20 ವಿಶ್ವಕಪ್​​​ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ 29 ವರ್ಷಗಳ ಬಳಿಕ ಮೊದಲ ಸಲ ಸೋಲು ಕಂಡಿದೆ. ಭಾನುವಾರ ನಡೆದ ಟಿ 20 ವಿಶ್ವಕಪ್ 2021 ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ತಂಡದ 10 ವಿಕೆಟ್​ಗಳ ಜಯ ಸಾಧಿಸಿದೆ. ಈ ವೇಳೆ ಪಾಕ್​ ತಂಡದ ನಾಯಕ ಬಾಬರ್ ಅಜಮ್ ಅವರ ತಂದೆಯ ಕಣ್ಣಲ್ಲಿ ಸಂತೋಷದ ಕಣ್ಣೀರು ಬಂದಿತು.

ಹೈದರಾಬಾದ್​: ಭಾನುವಾರ ನಡೆದ ಟಿ 20 ವಿಶ್ವಕಪ್ 2021 ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ತಂಡದ 10 ವಿಕೆಟ್​ಗಳ ಜಯ ಸಾಧಿಸಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ, ಹಸಿರು ಅಂಗಿಗಳಲ್ಲಿ ಅಭಿಮಾನಿಗಳು ಐತಿಹಾಸಿಕ ವಿಜಯವನ್ನು ಆನಂದಿಸುತ್ತಿದ್ದಾಗ, ಇತ್ತ ಪಾಕ್​ ತಂಡದ ನಾಯಕ ಬಾಬರ್ ಅಜಮ್ ಅವರ ತಂದೆಯ ಕಣ್ಣಲ್ಲಿ ಸಂತೋಷದ ಕಣ್ಣೀರು ಬಂದಿತ್ತು.

ಅಭಿಮಾನಿಗಳಿಂದ ಸುತ್ತುವರಿದಿದ್ದ ಬಾಬರ್ ಆಜಮ್ ಅವರ ತಂದೆ ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಮೊದಲ ಬಾರಿಗೆ ಪಾಕ್​ ಜಯ ಸಾಧಿಸಿದ ನಂತರ ಭಾವೋದ್ವೇಗಗೊಂಡರು. ಪಾಕಿಸ್ತಾನಿ ಪತ್ರಕರ್ತ ಮಝೆರ್ ಅರ್ಷದ್ ಅವರು ಹಂಚಿಕೊಂಡ ವಿಡಿಯೋದಲ್ಲಿ, ಕ್ರೀಡಾಂಗಣದಲ್ಲಿರುವ ಬಾಬರ್ ಅವರ ತಂದೆ ಸಂತೋಷದ ಕಣ್ಣೀರನ್ನು ಒರೆಸಿಕೊಳ್ಳುತ್ತಿದ್ದು, ಅವರನ್ನು ಅಭಿನಂದಿಸಲು ಅಭಿಮಾನಿಗಳು ಸುತ್ತುವರೆದಿರುವುದನ್ನು ಕಾಣಬಹುದು.

  • This is Babar Azam’s father. So happy for him. I first met him in 2012 at Adnan Akmal’s walima. Babar at that time was 3 years away from Pakistan debut. I clearly remember what his father told me “bas debut ho jane do. Agay sara maidaan babar ka hai” pic.twitter.com/ZlsvODQkSg

    — Mazher Arshad (@MazherArshad) October 24, 2021 " class="align-text-top noRightClick twitterSection" data=" ">

ಪಾಕಿಸ್ತಾನ ನಾಯಕ ಬಾಬರ್ ಟಾಸ್ ಗೆದ್ದರು ಮತ್ತು ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡರು. ಟೀಂ ಇಂಡಿಯಾಗೆ ಪಾಕ್​ ವೇಗಿ ಶಾಹೀನ್ ಶಾ ಅಫ್ರಿದಿ ಆರಂಭಿಕ ಆಘಾತ ನೀಡಿದರು. ಟೀಂ ಇಂಡಿಯಾ ನೀಡಿದ್ದ 152ರನ್​ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಆರಂಭಿಕರಾದ ನಾಯಕ ಬಾಬರ್​ ಆಜಂ ಅಜೇಯ 68ರನ್​ ಹಾಗೂ ರಿಜ್ವಾನ್​​ ಅಜೇಯ 79ರನ್​ಗಳ ಜೊತೆಯಾಟ ನೀಡಿ ಜಯ ತಂದಿಟ್ಟರು. ಐಸಿಸಿ ಟಿ-20 ವಿಶ್ವಕಪ್​​​ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ 29 ವರ್ಷಗಳ ಬಳಿಕ ಮೊದಲ ಸಲ ಸೋಲು ಕಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.