ETV Bharat / sports

ಸೂರ್ಯ ಇನ್ನಷ್ಟು ಎತ್ತರಕ್ಕೆ: ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನ ಉಳಿಸಿಕೊಂಡ SKY

author img

By ETV Bharat Karnataka Team

Published : Dec 13, 2023, 5:53 PM IST

Suryakumar Yadav
Suryakumar Yadav

ICC Men's T20I Rankings: ಆಸ್ಟ್ರೇಲಿಯಾ ಸರಣಿಯ ನಾಯಕತ್ವವನ್ನು ವಹಿಸಿಕೊಂಡು ಗೆಲ್ಲಿಸಿ ಮಿಂಚಿದ್ದ ಸೂರ್ಯಕುಮಾರ್​ ಯಾದವ್​ ಅವರ ಶ್ರೇಯಾಂಕ ಟಿ20ಯಲ್ಲಿ ಅಗ್ರಸ್ಥಾನದಲ್ಲೇ ಇದ್ದು, ಅಂಕ ಇನ್ನಷ್ಟು ಏರಿಕೆ ಕಂಡಿದೆ.

ಹೈದರಾಬಾದ್: ಪ್ರಸ್ತುತ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್​ ಯಾದವ್​ ಅದ್ಭುತ ಫಾರ್ಮ್​ನಲ್ಲಿ ಮುಂದುವೆರೆದಿದ್ದು, ದೇಶಿಯ ಹಾಗೂ ವಿದೇಶಿ ಪಿಚ್​ಗಳಲ್ಲಿ ಅವರನ್ನು ಕಟ್ಟಿಹಾಕುವವರು ಯಾರೂ ಇಲ್ಲ ಎಂಬಂತಾಗಿದೆ. ಏಕದಿನ ವಿಶ್ವಕಪ್​ನಲ್ಲಿ ಕೆಳಕ್ರಮಾಂಕದಲ್ಲಿ ಸೂರ್ಯಕುಮಾರ್​ ಯಾದವ್​ ನಿರೀಕ್ಷಿತ ಪ್ರದರ್ಶನ ನೀಡದಿದ್ದರೂ, ನಂತರ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಮಿಂಚಿದ್ದಾರೆ.

ವಿಶ್ವಕಪ್​ ಮುಗಿದ ನಾಲ್ಕು ದಿನಗಳ ಅಂತರದಲ್ಲಿ ಆರಂಭವಾದ ಟಿ20 ಸರಣಿಗೆ ಸೂರ್ಯಕುಮಾರ್​ ಯಾದವ್​ ಅವರಿಗೆ ನಾಯಕತ್ವ ನೀಡಲಾಗಿತ್ತು. ನಾಯಕರಾಗಿ ಸರಣಿ ಗೆಲ್ಲಿಸಿದ್ದಲ್ಲದೇ, ವೈಯಕ್ತಿಕವಾಗಿಯೂ ಉತ್ತಮ ಪ್ರದರ್ಶನ ನೀಡಿದ್ದರು. ಮೊದಲ ಟಿ20ಯಲ್ಲೇ ಅಬ್ಬರಿಸಿದ ಅವರು, 42 ಬಾಲ್​ನಲ್ಲಿ 9 ಬೌಂಡರಿ, 4 ಸಿಕ್ಸ್​ನಿಂದ 80 ರನ್​ ಕಲೆಹಾಕಿದ್ದರು.

ಅಲ್ಲದೇ ದಕ್ಷಿಣ ಆಫ್ರಿಕಾದ ವಿರುದ್ಧ ನಡೆಯುತ್ತಿರುವ ಟಿ20ಯ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಕೇವಲ 36 ಎಸೆತಗಳಲ್ಲಿ 56 ರನ್ ಗಳಿಸಿದರು. ಆಸ್ಟ್ರೇಲಿಯಾ ವಿರುದ್ಧ ಒಂದೇ ಪಂದ್ಯದಲ್ಲಿ ಪರಿಣಾಮಕಾರಿ ಇನ್ನಿಂಗ್ಸ್​ ಆಡಿದ್ದರು, ಹರಿಣಗಳ ವಿರುದ್ಧ ಘರ್ಜಿಸಿರುವುದು ಸೂರ್ಯ ರೇಟಿಂಗ್​ ಏರಿಕೆಗೆ ಕಾರಣವಾಗಿದೆ.

ಸೂರ್ಯ ಒಟ್ಟು 865 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದಾರೆ. ಎರಡನೇ ಸ್ಥಾನದಲ್ಲಿರುವ ಪಾಕಿಸ್ತಾನದ ಆಟಗಾರ ಮೊಹಮ್ಮದ್ ರಿಜ್ವಾನ್ ಅವರಿಂದ 78 ಅಂಕಗಳ ಮುಂದಿದ್ದಾರೆ. ರಿಜ್ವಾನ್​ 787 ರೇಟಿಂಗ್ ಪಾಯಿಂಟ್‌ ಹೊಂದಿ ಎರಡನೇ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕ್ರಾಮ್ (758) ಮೂರನೇ ಸ್ಥಾನದಲ್ಲಿದ್ದಾರೆ. ಸೂರ್ಯ ಅವರ ರೇಟಿಂಗ್​ ಅಂತರ ನೋಡಿದರೆ, ಟಿ20 ವಿಶ್ವಕಪ್​ ವರೆಗೆ ನಂ.1 ಸ್ಥಾನದಲ್ಲೇ ಮುಂದುವರೆಯುವ ಸಾಧ್ಯತೆ ಇದೆ.

ರಿಂಕು- ತಿಲಕ್​ ಶ್ರೇಯಾಂಕ ಏರಿಕೆ: ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದ ವಿರುದ್ಧ ಮಿಂಚುತ್ತಿರುವ ಭಾರತದ ಯುವ ಫ್ಯೂಚರ್​ ಸ್ಟಾರ್​ಗಳಾದ ರಿಂಕು ಸಿಂಗ್​ ಮತ್ತು ತಿಲಕ್​ ವರ್ಮಾ ಶ್ರೇಯಾಂಕದ ಏರಿಕೆ ಆಗಿದೆ. ತಿಲಕ್ ವರ್ಮಾ 10 ಸ್ಥಾನಗಳ ಏರಿಕೆಯಿಂದ 55ನೇ ರ್‍ಯಾಂಕಿಂಗ್​ ಪಡೆದರೆ, ರಿಂಕು ಸಿಂಗ್ 46 ಸ್ಥಾನ ಏರಿಕೆ ಕಂಡು 59ನೇ ಶ್ರೇಯಾಂಕದಲ್ಲಿದ್ದಾರೆ.

ಬೌಲಿಂಗ್​ ಶ್ರೇಯಾಂಕ: ಆಸ್ಟ್ರೇಲಿಯಾ ವಿರುದ್ಧ ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದು ಐಸಿಸಿ ಶ್ರೇಯಾಂಕದಲ್ಲಿ ನಂ.1 ಸ್ಥಾನ ಪಡೆದುಕೊಂಡಿದ್ದ ರವಿ ಬಿಷ್ಣೋಯ್​ ಅವರನ್ನು ಅಫ್ಘಾನಿಸ್ತಾನದ ಸ್ಪಿನ್ನರ್​ ರಶೀದ್​ ಖಾನ್​ ಸರಿಗಟ್ಟಿದ್ದಾರೆ. ರವಿ ಮತ್ತು ರಶೀದ್​​​ 692 ರೇಟಿಂಗ್​ ಪಾಯಿಂಟ್​ನಿಂದು ಅಗ್ರಸ್ಥಾನವನ್ನು ಜಂಟಿಯಾಗಿ ಹಂಚಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಸ್ಪಿನ್ನರ್ ತಬ್ರೈಜ್ ಶಮ್ಸಿ ಭಾರತದ ವಿರುದ್ಧ ಗಮನಾರ್ಹ ಪ್ರದರ್ಶನ ನೀಡಿದ್ದು 10ನೇ ಶ್ರೇಯಾಂಕ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಅರ್ಜುನ ಪ್ರಶಸ್ತಿಗೆ ವಿಶ್ವಕಪ್​ ಸ್ಟಾರ್​ ಮೊಹಮ್ಮದ್​ ಶಮಿ ಹೆಸರು ಸೂಚಿಸಿದ ಬಿಸಿಸಿಐ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.