ETV Bharat / sports

ಐಸಿಸಿ ಟಿ20 ಶ್ರೇಯಾಂಕ: ಸೂರ್ಯಕುಮಾರ್ ಯಾದವ್ ಅಗ್ರಸ್ಥಾನ ಅಭಾದಿತ

author img

By

Published : Nov 16, 2022, 5:30 PM IST

suryakumar-continues
ಐಸಿಸಿ ಟಿ20 ಶ್ರೇಯಾಂಕ

ಭಾರತದ ಸ್ಟಾರ್​ ಬ್ಯಾಟರ್​​​ ಸೂರ್ಯಕುಮಾರ್ ಯಾದವ್​ ಐಸಿಸಿ ಟಿ20 ರ್ಯಾಂಕಿಂಗ್​ ಪಟ್ಟಿಯಲ್ಲಿ 10 ಪಾಯಿಂಟ್​ ಕಳೆದುಕೊಂಡರೂ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ. ಆಲ್​ರೌಂಡರ್​ಗಳಲ್ಲಿ ಹಾರ್ದಿಕ್​ ಪಾಂಡ್ಯಾ 3 ನೇ ಸ್ಥಾನದಲ್ಲಿದ್ದಾರೆ.

ದುಬೈ: ಭಾರತದ ಬ್ಯಾಟರ್ ಸೂರ್ಯಕುಮಾರ್ ಯಾದವ್ ಐಸಿಸಿ ನೂತನವಾಗಿ ಬಿಡುಗಡೆ ಮಾಡಿದ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಅಂಕ ಕಳೆದುಕೊಂಡರೂ ನಂಬರ್​ 1 ಸ್ಥಾನದಲ್ಲೇ ಮುಂದುವರಿದಿದ್ದಾರೆ. ವಿಶ್ವಕಪ್​ನಲ್ಲಿ ಬಿರುಸಿನ ಬ್ಯಾಟ್​ ಮಾಡಿದ ಯಾದವ್​ 3 ಅರ್ಧಶತಕ ಸೇರಿ 59.75 ರ ಸರಾಸರಿಯಲ್ಲಿ 239 ರನ್​ ಗಳಿಸಿದ್ದರು. ಸೆಮಿಫೈನಲ್​ ಪಂದ್ಯದಲ್ಲಿ 14 ರನ್​ಗೆ ಔಟಾಗಿ ನಿರಾಸೆ ಮೂಡಿಸುವ ಮೂಲಕ 10 ಅಂಕ ಕಳೆದುಕೊಂಡಿದ್ದಾರೆ.

ಸೂರ್ಯಕುಮಾರ್​ ವಿಶ್ವಕಪ್​ ವೇಳೆ ಪಾಕಿಸ್ತಾನದ ಮೊಹಮದ್​​ ರಿಜ್ವಾನ್​ರನ್ನು ಹಿಂದಿಕ್ಕಿ 869 ಅಂಕಗಳೊಂದಿಗೆ ನಂಬರ್​ 1 ಸ್ಥಾನಕ್ಕೇರಿ ಜೀವನಶ್ರೇಷ್ಠ ಸಾಧನೆ ಮಾಡಿದ್ದರು. 839 ಅಂಕ ಹೊಂದಿರುವ ಪಾಕಿಸ್ತಾನದ ಮೊಹಮದ್​ ರಿಜ್ವಾನ್​ 2 ನೇ ಸ್ಥಾನದಲ್ಲಿದ್ದಾರೆ. ಬಾಬರ್​ ಅಜಂ ಮೂರರಲ್ಲಿದ್ದಾರೆ.

ಇನ್ನು, ಸೂರ್ಯಕುಮಾರ್ ಹೊರತುಪಡಿಸಿ ಅಗ್ರ 10 ರಲ್ಲಿ ಭಾರತದ ಯಾವೊಬ್ಬ ಬ್ಯಾಟರ್ ಕೂಡ ಸ್ಥಾನ ಪಡೆದಿಲ್ಲ. ಬ್ಯಾಟಿಂಗ್ ಕಿಂಗ್​ ವಿರಾಟ್​ ಕೊಹ್ಲಿ 11ನೇ ಸ್ಥಾನದಲ್ಲಿದ್ದು, ಕೆಎಲ್​ ರಾಹುಲ್​, ರೋಹಿತ್​ ಶರ್ಮಾ ಕ್ರಮವಾಗಿ 17, 18 ನೇ ಶ್ರೇಯಾಂಕದಲ್ಲಿದ್ದಾರೆ.

ಬೌಲಿಂಗ್​ ವಿಭಾಗದಲ್ಲಿ ಶ್ರೀಲಂಕಾದ ವನಿಂದು ಹಸರಂಗ ಟಾಪ್​ ಬೌಲರ್​ ಆಗಿದ್ದಾರೆ. ಆಲ್​ರೌಂಡರ್​ ವಿಭಾಗದಲ್ಲಿ ಬಾಂಗ್ಲಾದೇಶದ ಶಕೀಬ್​ ಅಲ್​ ಹಸನ್​ ಅಗ್ರಸ್ಥಾನ ಪಡೆದರೆ, ಭಾರತದ ತಾರಾ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯಾ 3ನೇ ಸ್ಥಾನದಲ್ಲಿದ್ದಾರೆ.

ಓದಿ: ಐಪಿಎಲ್ 2023: ಚೆನ್ನೈ ತಂಡಕ್ಕೆ ಮಹೇಂದ್ರ ಸಿಂಗ್​ ದೋನಿ ನಾಯಕನಾಗಿ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.