ETV Bharat / sports

ಭಾರತ ವಿರುದ್ಧದ ಸರಣಿಗೆ ಹರಿಣಗಳ ಪಡೆ ಪ್ರಕಟ: ಬವುಮಾಗೆ ವಿಶ್ರಾಂತಿ ಮಾರ್ಕ್ರಾಮ್ ನಾಯಕತ್ವ

author img

By ETV Bharat Karnataka Team

Published : Dec 4, 2023, 5:05 PM IST

ಭಾರತ ವಿರುದ್ಧದ ಮೂರು ಮಾದರಿಯ ಸರಣಿಗೆ ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದ್ದು, ಟಿ20 ಮತ್ತು ಏಕದಿನ ಪಂದ್ಯಕ್ಕೆ ಮಾರ್ಕ್ರಾಮ್ ನಾಯಕರಾಗಿದ್ದಾರೆ.

South Africa team
South Africa team

ಜೋಹಾನ್ಸ್‌ಬರ್ಗ್(ದಕ್ಷಿಣ ಆಫ್ರಿಕಾ): ಡಿಸೆಂಬರ್​ 10 ರಿಂದ ಟೀಮ್​ ಇಂಡಿಯಾ ವಿರುದ್ಧದ ತವರಿನ ಸರಣಿಗಳಿಗೆ ಹರಿಣಗಳ ತಂಡ ಪ್ರಕಟವಾಗಿದೆ. ದಕ್ಷಿಣ ಆಫ್ರಿಕಾದ ನಾಯಕ ತೆಂಬಾ ಬವುಮಾ ಮತ್ತು ವೇಗಿ ಕಗಿಸೊ ರಬಾಡ ಅವರಿಗೆ ಸರಣಿಯ ವೈಟ್ ಬಾಲ್ ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿದ್ದು, ಎರಡು ಟೆಸ್ಟ್‌ಗೆ ತಂಡಕ್ಕೆ ಮರಳಿದ್ದಾರೆ.

  • 🟢 SQUAD ANNOUNCEMENT 🟡

    CSA has today named the Proteas squads for the all-format inbound tour against India from 10 Dec – 7 Jan 🇿🇦🇮🇳

    Captain Temba Bavuma and Kagiso Rabada are amongst a group of players that have been omitted for the white-ball leg of the tour in order to… pic.twitter.com/myFE24QZaz

    — Proteas Men (@ProteasMenCSA) December 4, 2023 " class="align-text-top noRightClick twitterSection" data=" ">

ವೇಗದ ಬೌಲರ್ ನಾಂಡ್ರೆ ಬರ್ಗರ್ ಮತ್ತು ಬ್ಯಾಟರ್‌ಗಳಾದ ಡೇವಿಡ್ ಬೆಡಿಂಗ್‌ಹ್ಯಾಮ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅವರು ಭಾರತ ಸರಣಿಗಾಗಿ ದಕ್ಷಿಣ ಆಫ್ರಿಕಾದ ಟೆಸ್ಟ್ ತಂಡಕ್ಕೆ ಪಾದಾರ್ಪಣೆಯ ಪಂದ್ಯವನ್ನು ಆಡಲಿದ್ದಾರೆ. ವಿಕೆಟ್ ಕೀಪರ್ ಕೈಲ್ ವೆರ್ರೆನ್ ಅವರು ತಂಡಕ್ಕೆ ಸೇರ್ಪಡೆ ಆಗಿದ್ದಾರೆ. ತೆಂಬಾ ಬವುಮಾ ಅನುಪಸ್ಥಿತಿಯಲ್ಲಿ ಐಡೆನ್ ಮಾರ್ಕ್ರಾಮ್ ಟಿ20 ಮತ್ತು ಏಕದಿನ ತಂಡಗಳನ್ನು ಮುನ್ನಡೆಸಲಿದ್ದಾರೆ.

ಬೆನ್ನಿನ ಒತ್ತಡದ ಮುರಿತದಿಂದಾಗಿ ವಿಶ್ವಕಪ್‌ನಿಂದ ಹೊರಗುಳಿದ ಅನ್ರಿಚ್ ನಾರ್ಟ್ಜೆ ಎಲ್ಲಾ ಸ್ವರೂಪದ ಆಟದಿಂದ ಹೊರಗುಳಿದಿದ್ದಾರೆ. ಬ್ಯಾಟರ್ ಡೇವಿಡ್ ಬೆಡಿಂಗ್ಹ್ಯಾಮ್ ಮತ್ತು ವೇಗದ ಬೌಲರ್ ನಾಂಡ್ರೆ ಬರ್ಗರ್ ಅವರೊಂದಿಗೆ ವೇಗದ ಬೌಲರ್ ಟ್ರಿಸ್ಟಾನ್ ಸ್ಟಬ್ಸ್ ಅವರನ್ನು ಮೊದಲ ಬಾರಿಗೆ ಟೆಸ್ಟ್ ತಂಡಕ್ಕೆ ಸೇರಿಸಲಾಗಿದೆ.

ಡಿಸೆಂಬರ್ 10 ರಂದು ಕಿಂಗ್ಸ್‌ಮೀಡ್ ಸ್ಟೇಡಿಯಂನಲ್ಲಿ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಎರಡನೇ ಟಿ20 ಡಿ. 12 ರಂದು ಸೇಂಟ್ ಜಾರ್ಜ್ ಓವಲ್‌ ಮತ್ತು ಕೊನೆಯ ಪಂದ್ಯ ಡಿ.14 ರಂದು ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. 50 ಓವರ್‌ಗಳ ಪಂದ್ಯ ಡಿಸೆಂಬರ್ 17 ರಂದು ವಾಂಡರರ್ಸ್ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. ಎರಡನೇ ಮತ್ತು ಅಂತಿಮ ಏಕದಿನ ಪಂದ್ಯವು ಕ್ರಮವಾಗಿ ಡಿಸೆಂಬರ್ 19 ಮತ್ತು ಡಿಸೆಂಬರ್ 21 ರಂದು ನಡೆಯಲಿದೆ.

ದಕ್ಷಿಣ ಆಫ್ರಿಕಾ ಟಿ20 ತಂಡ: ಐಡೆನ್ ಮಾರ್ಕ್ರಾಮ್ (ನಾಯಕ), ಒಟ್ನಿಯೆಲ್ ಬಾರ್ಟ್‌ಮನ್, ಮ್ಯಾಥ್ಯೂ ಬ್ರೀಟ್ಜ್ಕೆ, ನಾಂಡ್ರೆ ಬರ್ಗರ್, ಜೆರಾಲ್ಡ್ ಕೋಟ್ಜಿ (1ನೇ ಮತ್ತು 2ನೇ ಟಿ20ಗೆ), ಡೊನೊವನ್ ಫೆರೀರಾ, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್ (1ನೇ ಮತ್ತು 2ನೇ ಟಿ20ಗೆ), ಡೇವಿಡ್, ಕೆಲಾಸೆನ್, ಕೆಲಾಸೆನ್, ಕೆಲಾಸೆನ್ ಮಿಲ್ಲರ್, ಲುಂಗಿ ಎನ್‌ಗಿಡಿ (1ನೇ ಮತ್ತು 2ನೇ ಟಿ20ಗೆ), ಆಂಡಿಲ್ ಫೆಹ್ಲುಕ್ವಾಯೊ, ತಬ್ರೈಜ್ ಶಮ್ಸಿ, ಟ್ರಿಸ್ಟಾನ್ ಸ್ಟಬ್ಸ್ ಮತ್ತು ಲಿಜಾದ್ ವಿಲಿಯಮ್ಸ್.

ದಕ್ಷಿಣ ಆಫ್ರಿಕಾದ ಏಕದಿನ ತಂಡ: ಏಡೆನ್ ಮಾರ್ಕ್ರಾಮ್ (ನಾಯಕ), ಒಟ್ನಿಯೆಲ್ ಬಾರ್ಟ್‌ಮನ್, ನಾಂಡ್ರೆ ಬರ್ಗರ್, ಟೋನಿ ಡಿ ಜೊರ್ಜಿ, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಮಿಹ್ಲಾಲಿ ಎಂಪೊಂಗ್ವಾನಾ, ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಆಂಡಿಲ್ ಫೆಹ್ಲುಕ್ವಾಯೊ, ಡುಬ್ರೇಸ್ ಶಹಮ್ಸಿ, ಡ್ಯುಬ್ರೇಸ್ ಶಹಮ್ಸಿ ಕೈಲ್ ವೆರ್ರೆನ್ನೆ ಮತ್ತು ಲಿಜಾಡ್ ವಿಲಿಯಮ್ಸ್.

ದಕ್ಷಿಣ ಆಫ್ರಿಕಾ ಟೆಸ್ಟ್ ತಂಡ: ತೆಂಬಾ ಬವುಮಾ (ನಾಯಕ), ಡೇವಿಡ್ ಬೆಡಿಂಗ್‌ಹ್ಯಾಮ್, ನಾಂಡ್ರೆ ಬರ್ಗರ್, ಜೆರಾಲ್ಡ್ ಕೋಟ್ಜಿ, ಟೋನಿ ಡಿ ಜೊರ್ಜಿ, ಡೀನ್ ಎಲ್ಗರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ವಿಯಾನ್ ಮುಲ್ಡರ್, ಲುಂಗಿ ಎನ್‌ಗಿಡಿ, ಕೀಗನ್ ಪೀಟರ್‌ಸನ್, ಕಗಿಸೊ ಸೇಂಟ್ ರಬಾಡಾ, ಕೈಲ್ ವೆರ್ರೆನ್ನೆ.

ಇದನ್ನೂ ಓದಿ: ಕಡೇ ಓವರ್​ನಲ್ಲಿ ಅರ್ಶದೀಪ್​ ಮಾರಕ ಬೌಲಿಂಗ್​ ದಾಳಿ: 6 ರನ್​ಗಳ ರೋಚಕ ಜಯ ದಾಖಲಿಸಿದ ಭಾರತ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.