ETV Bharat / sports

World Cup 2023: ತಿಲಕ್​, ಚಹಾಲ್​ಗೆ ಎರಡನೇ ಅವಕಾಶ ಕೊಟ್ಟ ಗಂಗೂಲಿ.. ದಾದಾ ಆಯ್ಕೆಯ ವಿಶ್ವಕಪ್​ ತಂಡ ಇದು

author img

By ETV Bharat Karnataka Team

Published : Aug 26, 2023, 7:50 PM IST

Sourav Ganguly
Sourav Ganguly

Sourav Ganguly ODI sqaud for World Cup 2023: ಗಿಲ್​, ಕಿಶನ್​, ರೋಹಿತ್​ ಶರ್ಮಾರನ್ನು ಆರಂಭಿಕ ಆಟಗಾರರಾಗಿ ಗಂಗೂಲಿ ಕೂಡಾ ಒಪ್ಪಿಕೊಂಡಿದ್ದು, ಶಿಖರ್​ ಧವನ್​ ಬಗ್ಗೆ ಪ್ರಸ್ತಾಪಿಸಿಲ್ಲ.

ನವದೆಹಲಿ: ಅಕ್ಟೋಬರ್​ 5 ರಿಂದ ಭಾರತದಲ್ಲಿ ವಿಶ್ವಕಪ್​​ ಪಂದ್ಯಗಳು ಆರಂಭವಾಗಲಿವೆ. ಅದಕ್ಕೂ ಮುನ್ನ ಭಾರತ ತಂಡ ಏಷ್ಯಾಕಪ್​ನಲ್ಲಿ ಆಡಲಿದೆ. ಇದು ವಿಶ್ವಕಪ್​ಗೆ ತಯಾರಿ ಎಂದೇ ಕರೆಸಿಕೊಳ್ಳುತ್ತಿದೆ. ಏಷ್ಯಾಕಪ್​ ಆರಂಭಕ್ಕೆ ಇನ್ನು ನಾಲ್ಕು ದಿನ ಮಾತ್ರ ಬಾಕಿ ಇದೆ. ಈ ಟೂರ್ನಿಗೆ ಆಯ್ಕೆ ಆದ ತಂಡವೇ ವಿಶ್ವಕಪ್​ಗೆ ಬಹುತೇಕ ಇರಲಿದೆ.

ಏಷ್ಯಾಕಪ್​ಗೆ ಭಾರತ ತಂಡದಲ್ಲಿ ಅಚ್ಚರಿಯ ಆಯ್ಕೆ ಯಾವುದೂ ಆಗಿಲ್ಲ. ತಿಲಕ್​ ವರ್ಮಾ ಮಾತ್ರ ಮಧ್ಯಮ ಕ್ರಮಾಂಕಕ್ಕೆ ಬಂದ ಯುವ ಬ್ಯಾಟರ್​ ಆಗಿದ್ದಾರೆ. ಇವರ ಆಗಮನಕ್ಕೆ ಹೆಚ್ಚಿನ ದಿಗ್ಗಜರೂ ಸಹಮತ ನೀಡಿದ್ದಾರೆ. ವಿಶ್ವಕಪ್​ಗೆ ತಿಂಗಳು ಬಾಕಿ ಇರುವಾಗ ಮಾಜಿ ಬಿಸಿಸಿಐ ಅಧ್ಯಕ್ಷ ಮತ್ತು ಮಾಜಿ ನಾಯಕ ಸೌರವ್​ ಗಂಗೂಲಿ ತಮ್ಮ ವಿಶ್ವಕಪ್​ನ ಏಕದಿನ ತಂಡವನ್ನು ಆಯ್ಕೆ ಮಾಡಿದ್ದಾರೆ. ಆದರೆ ಇವರ ಪ್ರಥಮ ಆಯ್ಕೆಯಲ್ಲಿ ತಿಲಕ್​ ವರ್ಮಾಗೆ ಸ್ಥಾನ ನೀಡಿಲ್ಲ. ಅಲ್ಲದೇ ರಿಸ್ಟ್​ ಸ್ಪಿನ್ನರ್​ ಚಹಾಲ್ ಅವರನ್ನೂ ಆಯ್ಕೆ ಮಾಡಿಲ್ಲ.

ದಾದಾ ಆರಂಭಿಕ ಆಟಗಾರರಾಗಿ ಶುಭಮನ್​ ಗಿಲ್​, ಇಶಾನ್​ ಕಿಶನ್​ ಮತ್ತು ರೋಹಿತ್​ ಶರ್ಮಾಗೆ ಮಣೆ ಹಾಕಿದ್ದಾರೆ. ನಂತರದ ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ​, ಕೆ ಎಲ್​ ರಾಹುಲ್​, ಶ್ರೇಯಸ್​ ಅಯ್ಯರ್ ಮತ್ತು ಟಿ20 ಟಾಪ್​ ಬ್ಯಾಟರ್​ ಸೂರ್ಯ ಕುಮಾರ್​ ಯಾದವ್​ಗೆ ಅವಕಾಶ ನೀಡಿದ್ದಾರೆ. ಜಡೇಜ, ಅಕ್ಷರ್​ ಸ್ಪಿನ್​ ವಿಥ್​ ಆಲ್​ರೌಂಡರ್​ ಆದರೆ, ಕುಲ್​ದೀಪ್​ ಸ್ಪಿನ್ನರ್​ ಆಗಿ ಆಯ್ಕೆ ಆಗಿದ್ದಾರೆ. ಚಹಾಲ್​ ಗಂಗೂಲಿ ಸಹ ಮಣೆ ಹಾಕಿಲ್ಲ. ವೇಗದ ದಾಳಿಗೆ ಶಮಿ, ಸಿರಾಜ್, ಬುಮ್ರಾ, ಶಾರ್ದೂಲ್​ ಅವರನ್ನು ಆಯ್ದುಕೊಂಡಿದ್ದಾರೆ.

"ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಲ್ಲಿ ಒಬ್ಬರು ಅನರ್ಹರಾಗಿದ್ದರೆ, ತಿಲಕ್ ವರ್ಮಾ ಅವರನ್ನು ಆಯ್ಕೆ ಮಾಡಬಹುದಿತ್ತು. ವೇಗದ ಬೌಲರ್‌ಗಳಲ್ಲಿ ಒಬ್ಬರು ಅನರ್ಹರಾಗಿದ್ದರೆ ನಂತರ ಪ್ರಸಿದ್ಧ್ ಕೃಷ್ಣ, ಸ್ಪಿನ್ನರ್‌ಗಳಲ್ಲಿ ಒಬ್ಬರು ಅನರ್ಹರಾದರೆ ಯುಜ್ವೇಂದ್ರ ಚಹಾಲ್ ನನ್ನ ಆಯ್ಕೆ. ತಂಡದಲ್ಲಿ ಯುವಕರು ಮತ್ತು ಅನುಭವಿಗಳ ಮಿಶ್ರಣ ಇದ್ದರೆ ತಂಡ ಬಲಿಷ್ಠವಾಗಿರಲಿದೆ" ಎಂದಿದ್ದಾರೆ.

ವಿಶ್ವಕಪ್‌ಗಾಗಿ ಸೌರವ್ ಗಂಗೂಲಿ ಅವರ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್. (ಎಎನ್ಐ​)

ಇದನ್ನೂ ಓದಿ: Asia Cup 2023: 15ಕ್ಕೂ ಹೆಚ್ಚು ನೆಟ್​ ಬೌಲರ್​ಗಳಿಂದ ಅಭ್ಯಾಸ.. ಎನ್​ಸಿಎಯಲ್ಲಿ ಭರ್ಜರಿ ಟ್ರೈನಿಂಗ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.