ETV Bharat / sports

ಆಸ್ಟ್ರೇಲಿಯಾದಲ್ಲಿ ಸರಣಿ ಗೆದ್ದದ್ದು ನನ್ನ ನಿರ್ಧಾರಗಳಿಂದ, ಕ್ರೆಡಿಟ್ ಬೇರೆಯವರು ತೆಗೆದುಕೊಂಡಿದ್ದಾರೆ: ರಹಾನೆ ಕಿಡಿ

author img

By

Published : Feb 10, 2022, 4:56 PM IST

Ajinkya Rahane on India vs Australia
ಅಜಿಂಕ್ಯ ರಹಾನೆ ಬಾರ್ಡರ್ ಗವಾಸ್ಕರ್ ಟ್ರೋಫಿ

ರಹಾನೆ ತಮ್ಮೊಳಗೆ ಇರುವ ಹತಾಶೆಯನ್ನು ಹೆಸರೇಳದೆ ಅಂದಿನ ಕೋಚ್​ ರವಿಶಾಸ್ತ್ರಿಯವರ ಮೇಲೆ ಅಸಮಧಾನ ಹೊರಹಾಕಿರುವುದು ಸ್ಪಷ್ಟವಾಗಿತ್ತು. ಏಕೆಂದರೆ ಆ ಸರಣಿಯಲ್ಲಿ ತಂಡದ ಪ್ರದರ್ಶನವನ್ನೂ ಮೀರಿ ರವಿಶಾಸ್ತ್ರಿ ಮಾಧ್ಯಮಗಳಲ್ಲಿ ವ್ಯಾಪಕವಾದ ಮೆಚ್ಚುಗೆ ಪಡೆದಿದ್ದರು. ತಂಡದ 2 ಜಯಗಳಲ್ಲೂ ರವಿಶಾಸ್ತ್ರಿ ಜಯದ ಸೂತ್ರದಾರ ಎಂಬಂತೆ ವಿಜೃಂಭಿಸಲಾಗಿತ್ತು.

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್​ ಗವಾಸ್ಕರ್​ ಸರಣಿಯಲ್ಲಿ ವಿರಾಟ್​ ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿ ಐತಿಹಾಸಿಕ ಸರಣಿ ಗೆಲ್ಲಿಸಿಕೊಟ್ಟಿದ್ದ ಅಜಿಂಕ್ಯ ರಹಾನೆ, ಭಾರತ ತಂಡದ ಅಡಿಲೇಡ್​ನಲ್ಲಿ 36ಕ್ಕೆ ಆಲೌಟ್​ ಆದ ನಂತರ ನಾನು ತೆಗೆದುಕೊಂಡ ಕೆಲವು ನಿರ್ಧಾರಗಳಿಂದ ಆ ಸರಣಿಯಲ್ಲಿ ನಮಗೆ ಯಶಸ್ಸು ಸಿಕ್ಕಿತ್ತು, ಆದರೆ, ಆ ಕ್ರೆಡಿಟ್​ ಬೇರೆಯವರು ತೆಗೆದುಕೊಂಡಿದ್ದಾರೆ" ಎಂದು ಹೆಸರೇಳದೇ ಮಾಜಿ ಕೋಚ್​ ರವಿಶಾಸ್ತ್ರಿಯ ವಿರುದ್ಧ ಟೀಕೆಗಳ ಸುರಿಮಳೆಗೆರೆದಿದ್ದಾರೆ.

ಅಡಿಲೇಡ್​ನಲ್ಲಿ ನಡೆದ ಡೇ ಅಂಡ್​ ನೈಟ್​ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ 36 ರನ್​ಗಳಿಗೆ ಆಲೌಟ್ ಆಗುವ ಮೂಲಕ ಭಾರಿ ಅಪಮಾನಕರ ಸೋಲು ಕಂಡಿತ್ತು. ಇದರ ಬೆನ್ನಲ್ಲೇ ನಾಯಕ ಕೊಹ್ಲಿ ವೈಯಕ್ತಿಕ ಕಾರಣದಿಂದ ಆಸ್ಟ್ರೇಲಿಯಾ ತೊರೆದು ಭಾರತಕ್ಕೆ ವಾಪಾಸ್​ ಆಗಿದ್ದರು.

ಈ ಕಠಿಣ ಸಂದರ್ಭದಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡ ರಹಾನೆ ಮೆಲ್ಬೋರ್ನ್​ ಮತ್ತು ಗಬ್ಬಾದಲ್ಲಿ ಐತಿಹಾಸಿಕ ವಿಜಯದೊಂದಿಗೆ 2-1ರಲ್ಲಿ ಟೆಸ್ಟ್​ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ರಹಾನೆ ಎಂಸಿಜಿಯಲ್ಲಿ ಟೆಸ್ಟ್​ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಸರಣಿಯನ್ನು 1-1ರಲ್ಲಿ ಸಮಬಲ ಮಾಡುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು.

"ನಾನು ಅಲ್ಲಿ(ಆಸ್ಟ್ರೇಲಿಯಾ) ಏನು ಮಾಡಿದ್ದೇನೆ ಎನ್ನುವುದರ ಬಗ್ಗೆ ನನಗೆ ಅರಿವಿದೆ. ನನಗೆ ಅದನ್ನು ಯಾರೊಬ್ಬರಿಗೂ ಮುಂದೆ ಹೇಳುವ ಅಗತ್ಯವಿಲ್ಲ ಮತ್ತು ಅದರ ಶ್ರೇಯಸನ್ನು ಕೇಳಿ ಪಡೆಯುವ ವ್ಯಕ್ತಿಯೂ ನಾನಲ್ಲ. ಹೌದು, ಮೈದಾನದಲ್ಲಿ ಮತ್ತು ಡ್ರೆಸಿಂಗ್​ ರೂಮ್​ನಲ್ಲಿ ಕೆಲವು ವಿಷಯಗಳಲ್ಲಿ ನಾನು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದೆ.

ಆದರೆ, ಅದರಿಂದ ಸಿಕ್ಕ ಯಶಸ್ಸಿನ ಕ್ರೆಡಿಟ್​ಅನ್ನು ಬೇರೆಯವರು ತೆಗೆದುಕೊಂಡಿದ್ದಾರೆ. ಆದರೆ ನನಗೆ ಸರಣಿ ಗೆಲ್ಲುವುದಷ್ಟೇ ಮುಖ್ಯವಾಗಿತ್ತು. ನನಗೆ ಅದೊಂದು ಐತಿಹಾಸಿಕ ಸರಣಿಯಾಗಿದೆ ಮತ್ತು ಅದು ತುಂಬಾ ವಿಶೇಷವಾದದ್ದು" ಎಂದು ಬ್ಯಾಕ್​ಸ್ಟೇಜ್​​ ವಿತ್​ ಬೊರಿಯಾ ಯುಟ್ಯೂಬ್​ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ಭಾರತದವನಾಗಿದ್ದರೆ ನನಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗುತ್ತಿರಲಿಲ್ಲವೇನೋ: ಎಬಿ ಡಿ ವಿಲಿಯರ್ಸ್​

ರಹಾನೆ ತಮ್ಮೊಳಗೆ ಇರುವ ಹತಾಶೆಯನ್ನು ಹೆಸರೇಳದೆ ಅಂದಿನ ಕೋಚ್​ ರವಿಶಾಸ್ತ್ರಿಯವರ ಮೇಲೆ ಅಸಮಾಧಾನ ಹೊರಹಾಕಿರುವುದು ಸ್ಪಷ್ಟವಾಗಿತ್ತು. ಏಕೆಂದರೆ ಆ ಸರಣಿಯಲ್ಲಿ ತಂಡದ ಪ್ರದರ್ಶನವನ್ನೂ ಮೀರಿ ರವಿಶಾಸ್ತ್ರಿ ಮಾಧ್ಯಮಗಳಲ್ಲಿ ವ್ಯಾಪಕವಾದ ಮೆಚ್ಚುಗೆ ಪಡೆದಿದ್ದರು. ತಂಡದ 2 ಜಯಗಳಲ್ಲೂ ರವಿಶಾಸ್ತ್ರಿ ಜಯದ ಸೂತ್ರದಾರ ಎಂಬಂತೆ ವಿಜೃಂಭಿಸಲಾಗಿತ್ತು.

ಆ ಸರಣಿಯ ನಂತರ ಶ್ರೇಯಸ್ಸನ್ನು ತೆಗೆದುಕೊಂಡ ಜನರು ಮಾಧ್ಯಮದ ಮುಂದೆ ನಾನು ಇದನ್ನು ಮಾಡಿದೆ, ಇದು ನನ್ನ ನಿರ್ಧಾರವಾಗಿತ್ತು ಅಥವಾ ಇದು ನನ್ನ ಕರೆಯಾಗಿತ್ತು ಎಂದು ಹೇಳಿಕೊಂಡರು, ಆದರೆ, ನಾನು ಮೈದಾನದಲ್ಲಿ ತೆಗೆದುಕೊಂಡ ನಿರ್ಧಾರಗಳು ಏನು ಎಂಬುದು ನನಗೆ ಗೊತ್ತಿದೆ. ಮ್ಯಾನೇಜ್​ಮೆಂಟ್​ ಜೊತೆಗೂ ನಾವು ಮಾತನಾಡಿದ್ದೇವೆ. ಆದರೆ ನಾನು ನನ್ನ ಬಗ್ಗೆ ಹೆಚ್ಚು ಹೇಳಿಕೊಳ್ಳುವುದಿಲ್ಲ, ಮೈದಾನದಲ್ಲಿ ತೆಗೆದುಕೊಂಡ ನಿರ್ಧಾರಗಳೇನು ಎನ್ನುವುದು ನನಗೆ ಗೊತ್ತಿದೆ ಎಂದು ರಹಾನೆ ತಿಳಿಸಿದ್ದಾರೆ.

ಕಳೆದ ವರ್ಷ 13 ಟೆಸ್ಟ್​ ಪಂದ್ಯಗಳನ್ನಾಡಿರುವ ರಹಾನೆ 479 ರನ್​ಗಳಿಸಿದ್ದಾರೆ. ಆದರೂ ಅವರು ಕೆಲವು ನಿರ್ಣಾಯಕ 50 , 40 ರನ್​ಗಳಿಸಿದ್ದಾರೆ, ಆದರೆ ಸ್ಥಿರತೆ ಕಾಪಾಡಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಅವರ ಶಾಟ್​ ಸೆಲೆಕ್ಷನ್​ ಕೂಡ ಟೀಕೆಗೆ ಗುರಿಯಾಗಿದೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲೂ 3 ಪಂದ್ಯಗಳಿಂದ ಅವರು ಕೇವಲ 136 ರನ್​ಗಳಿಸಿದ್ದರು.

ನನ್ನ ಕೆರಿಯರ್ ಮುಗಿಯಿತು ಎನ್ನುವವರನ್ನು ನೋಡಿ ನಗುತ್ತೇನೆ: ನನ್ನ ವೃತ್ತಿ ಬದುಕು ಅಂತ್ಯಗೊಂಡಿದೆ ಎಂದು ಹೇಳುವವರನ್ನು ನೋಡಿ ನಾನು ನಗುತ್ತೇನೆ ಅಷ್ಟೆ. ಅದರ ಬಗ್ಗೆ ಆಳವಾಗಿ ಯೋಚಿಸಲು ಹೋಗಲ್ಲ. ಆಸ್ಟ್ರೇಲಿಯಾದಲ್ಲಿ ಏನಾಯಿತು ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿದೆ. ಆಸ್ಟ್ರೇಲಿಯಾ ಸರಣಿಯ ನಂತರ ಮತ್ತು ಅದಕ್ಕೂ ಹಿಂದೆ ಟೆಸ್ಟ್​ ಕ್ರಿಕೆಟ್​ಗೆ ನನ್ನ ಕೊಡುಗೆ ಏನೂ ಎಂಬುದು ಎಲ್ಲರಿಗೂ ತಿಳಿದಿದೆ. ಕ್ರೀಡೆ ಬಗ್ಗೆ ತಿಳಿದಿರುವವರು, ಕ್ರೀಡೆಯನ್ನು ಪ್ರೀತಿಸುವವರು ಸಮಯೋಚಿತವಾಗಿ ಮಾತನಾಡುತ್ತಾರೆ" ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

ರಣಜಿಯಲ್ಲಿ ತಮ್ಮ ಫಾರ್ಮ್​ ಕಂಡುಕೊಳ್ಳುವ ಯತ್ನದಲ್ಲಿರುವ ರಹಾನೆ " ತಮಗೆ ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯಿದೆ, ನಾನು ಉತ್ತಮವಾಗಿ ಬ್ಯಾಟಿಂಗ್ ಮಾಡಬಲ್ಲೆ ವಿಶ್ವಾಸವಿದೆ ಮತ್ತು ನನ್ನಲ್ಲಿ ಸಾಕಷ್ಟು ಕ್ರಿಕೆಟ್​ ಉಳಿದಿದೆ ಎಂದು ನಾನು ನಂಬುತ್ತೇನೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಭಾರತ ತಂಡದಲ್ಲಿ ಅವಕಾಶವಿಲ್ಲ ಎನ್ನುವುದು ಖಚಿತ, ರಣಜಿಯಿಂದ ಒಬ್ಬಬ್ಬರಾಗಿ ಹೊರ ಬರುತ್ತಿರುವ ಸ್ಟಾರ್ ಕ್ರಿಕೆಟಿಗರು​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.