ETV Bharat / sports

ಟಿ20 ಸರಣಿ: ಭಾರತೀಯ ವನಿತೆಯರ ಆಲ್​ರೌಂಡರ್​ ಆಟ - ಆಸೀಸ್​ ವಿರುದ್ಧ ಶುಭಾರಂಭ

author img

By PTI

Published : Jan 5, 2024, 11:07 PM IST

Updated : Jan 6, 2024, 6:07 AM IST

Etv Bharat
Etv Bharat

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಕ್ರಿಕೆಟ್​ ಸರಣಿಯಲ್ಲಿ ಭಾರತೀಯ ವನಿತೆಯರು ಮೊದಲ ಪಂದ್ಯ ಗೆದ್ದು 1-0 ಅಂತರದ ಮುನ್ನಡೆ ಸಾಧಿಸಿದ್ದಾರೆ.

ಮುಂಬೈ (ಮಹಾರಾಷ್ಟ್ರ): ತವರಿನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಕ್ರಿಕೆಟ್​ ಸರಣಿಯಲ್ಲಿ ಭಾರತೀಯ ಮಹಿಳಾ ತಂಡ ಭರ್ಜರಿ ಶುಭಾರಂಭ ಮಾಡಿದೆ. ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಅವರ ಆಕರ್ಷಕ ಅರ್ಧಶತಕ ಮತ್ತು ಟಿಟಾಸ್ ಸಾಧು ಮಾರಕ ಬೌಲಿಂಗ್​ ನೆರವಿನೊಂದಿಗೆ ಟೀಂ ಇಂಡಿಯಾ 9 ವಿಕೆಟ್​ಗಳ ಅಂತರದ ಗೆಲುವಿನ ನಗೆ ಬೀರಿದೆ. ಈ ಮೂಲಕ 1-0 ಅಂತರದ ಮುನ್ನಡೆ ಸಾಧಿಸಿದೆ.

ನವಿ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಆಸೀಸ್​ ವನಿತೆಯರು 19.2 ಓವರ್​ಗಳಲ್ಲಿ 141 ರನ್​ಗಳಿಗೆ ಸರ್ವಪತನ ಕಂಡಿದ್ದರು. ಈ ಗುರಿ ಬೆನ್ನಟ್ಟಿದ ಭಾರತೀಯ ವನಿತೆಯರು ಕೇವಲ 1 ವಿಕೆಟ್​ ನಷ್ಟಕ್ಕೆ 17.4 ಓವರ್​ಗಳಲ್ಲಿ 145 ರನ್​ ಸಿಡಿಸಿ ಜಯಭೇರಿ ಬಾರಿಸಿದರು. ಟೀಂ ಇಂಡಿಯಾದ ಆರಂಭಿಕರಾದ ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಭರ್ಜರಿ ಪ್ರದರ್ಶನ ನೀಡಿದರು. ಆಸ್ಟ್ರೇಲಿಯಾ ವಿರುದ್ಧ ಟಿ20 ಇತಿಹಾಸದಲ್ಲೇ ಮೊದಲ ವಿಕೆಟ್​ಗೆ 137 ರನ್​ಗಳ ಜೊತೆಯಾಟ ನೀಡಿ ತಂಡದ ಸುಲಭ ಗೆಲುವಿಗೆ ಕಾರಣರಾದರು.

ಉಭಯ ಆಟಗಾರ್ತಿಯರು ಅತ್ಯುತ್ತಮ ಹೊಡೆತಗಳೊಂದಿಗೆ ತಮ್ಮ ಅರ್ಧಶತಕಗಳನ್ನು ಪೂರೈಸಿದರು. ಎದುರಾಳಿ ಬೌಲರ್​ಗಳನ್ನು ದಂಡಿಸಿದ ಈ ಜೋಡಿ 15.2 ಓವರ್​ಗಳಿಗೆ 137 ರನ್​ಗಳನ್ನು ಕಲೆ ಹಾಕಿತು. ಈ ನಡುವೆ ಸ್ಮೃತಿ ಮಂಧಾನ ಅವರು ಜಾರ್ಜಿಯಾ ವೇರ್ಹ್ಯಾಮ್ ಬೌಲಿಂಗ್​ನಲ್ಲಿ ವಿಕೆಟ್​ ಒಪ್ಪಿಸಿ ನಿರ್ಮಿಸಿದರು. 103.86ಕ್ಕೂ ಸ್ಟ್ರೈಕ್​ ರೇಟ್​ನಲ್ಲಿ ಬ್ಯಾಟ್​ ಬೀಸಿದ ಮಂಧಾನ 52 ಎಸೆತಗಳಲ್ಲಿ ಏಳು ಭರ್ಜರಿ ಬೌಂಡರಿ, ಒಂದು ಸಿಕ್ಸರ್​ ಸಮೇತವಾಗಿ 54 ರನ್​ ಬಾರಿಸಿದರು.

ಮತ್ತೊಂದೆಡೆ, ಸ್ಫೋಟಕ ಬ್ಯಾಟಿಂಗ್​ ಪ್ರದರ್ಶಿಸಿದ ಶಫಾಲಿ ವರ್ಮಾ ಅಜೇಯರಾಗಿ ಉಳಿದರು. 145.45 ಸ್ಟ್ರೈಕ್​ ರೇಟ್​ನಲ್ಲಿ ಅವರು 44 ಬಾಲ್​ಗಳನ್ನು ಎದುರಿಸಿ ಆರು ಬೌಂಡರಿ, ಮೂರು ಸಿಕ್ಸರ್​ಗಳನ್ನು ಒಳಗೊಂಡು 64 ರನ್​ಗಳನ್ನು​ ಹಚ್ಚಿದರು. ಮೂರನೇ ಕ್ರಮಾಂಕದಲ್ಲಿ ಬಂದ ಜೆಮಿಮಾ ರಾಡ್ರಿಗಸ್ 11 ಎಸೆತಗಳಲ್ಲಿ ಒಂದು ಬೌಂಡರಿ ಸಮೇತ 6 ರನ್​ ಗಳಿಸಿ ಅಜೇಯರಾಗಿ ಉಳಿದರು. ಆಸ್ಟ್ರೇಲಿಯಾ ಪರ ಜಾರ್ಜಿಯಾ ವೇರ್ಹ್ಯಾಮ್ ಮಾತ್ರ ಒಂದು ವಿಕೆಟ್​ ಪಡೆಯಲು ಶಕ್ತರಾದರು.

ಬೌಲಿಂಗ್​ನಲ್ಲಿ ಟಿಟಾಸ್ ಸಾಧು ಮಿಂಚು: ಇದಕ್ಕೂ ಭಾರತೀಯ ಬೌಲರ್​ಗಳು ಆಸೀಸ್​ ಆಟಗಾರ್ತಿಯರನ್ನು ಕಾಡಿದರು. ಅದರಲ್ಲೂ, ಯುವ ಪ್ರತಿಭೆ ಟಿಟಾಸ್ ಸಾಧು ನಾಲ್ಕು ವಿಕೆಟ್​ ಕಿತ್ತು ಮಿಂಚು ಹರಿಸಿದರು. ಪರಿಣಾಮವಾಗಿ ಬೆತ್ ಮೂನೇ (17), ಎಲ್ಲಿಸ್ ಪೆರ್ರಿ (37) ಫೋಬೆ ಲಿಚ್ಫೀಲ್ಡ್ (49) ಹಾಗೂ ಸದರ್ಲ್ಯಾಂಡ್ (12) ಒಂದಂಕಿ ಗಡಿದಾಟಲು ಸಾಧ್ಯವಾಯಿತು.

ಟಿಟಾಸ್ ಸಾಧು ನಾಲ್ಕು ಓವರ್​ಗಳಲ್ಲಿ ಕೇವಲ 17 ರನ್​ ನೀಡಿ ಪ್ರಮುಖ ನಾಲ್ಕು ವಿಕೆಟ್​ಗಳನ್ನು ಉರುಳಿಸಿ ಮಿಂಚಿದರು. ಅಲ್ಲದೇ, ಶ್ರೇಯಾಂಕಾ ಪಾಟೀಲ್ ಹಾಗೂ ದೀಪ್ತಿ ಶರ್ಮಾ ತಲಾ ಎರಡು ವಿಕೆಟ್​ ಕಬಳಿಸಿದರೆ, ರೇಣುಕಾ ಸಿಂಗ್, ಅಮಂಜೋತ್ ಕೌರ್ ತಲಾ ಒಂದು ವಿಕೆಟ್​ ಪಡೆದರು.

ಇದನ್ನೂ ಓದಿ: ಟಿ20 ವಿಶ್ವಕಪ್‌ ವೇಳಾಪಟ್ಟಿ ಪ್ರಕಟ: ಜೂನ್‌ 9ರಂದು ಭಾರತ-ಪಾಕಿಸ್ತಾನ ಪಂದ್ಯ

Last Updated :Jan 6, 2024, 6:07 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.