ETV Bharat / sports

"India And...": T-20 ವಿಶ್ವಕಪ್​​ ಫೈನಲ್​​ನಲ್ಲಿ ಮುಖಾಮುಖಿಯಾಗುವ ತಂಡ ಹೆಸರಿಸಿದ ಪಾಂಟಿಂಗ್​

author img

By

Published : Jul 26, 2022, 6:23 PM IST

Team india
Team india

ಐಸಿಸಿ ಟಿ20 ವಿಶ್ವಕಪ್​ಗೋಸ್ಕರ ಈಗಾಗಲೇ ಅದ್ಧೂರಿ ತಯಾರಿ ನಡೆದಿದ್ದು, ಇದರ ಬೆನ್ನಲ್ಲೇ ಯಾವೆಲ್ಲ ತಂಡ ಫೈನಲ್​ಗೆ ಲಗ್ಗೆ ಹಾಕುವ ಅರ್ಹತೆ ಪಡೆದುಕೊಂಡಿವೆ ಎನ್ನುವುದರ ಬಗ್ಗೆ ಲೆಕ್ಕಾಚಾರ ಶುರುವಾಗಿದೆ.

ಮುಂಬೈ: ಮುಂಬರುವ ಅಕ್ಟೋಬರ್​-ನವೆಂಬರ್​ ತಿಂಗಳಲ್ಲಿ ಐಸಿಸಿ ಟಿ - 20 ವಿಶ್ವಕಪ್​ ಟೂರ್ನಿ ನಡೆಯಲಿದ್ದು, ಆಸ್ಟ್ರೇಲಿಯಾದಲ್ಲಿ ಈ ಮಹತ್ವದ ಸರಣಿ ಆಯೋಜನೆಗೊಂಡಿದೆ. ಈ ಟೂರ್ನಿಯಲ್ಲಿ ಫೈನಲ್​ಗೆ ಯಾವ ತಂಡಗಳು ಲಗ್ಗೆ ಹಾಕಲಿವೆ ಎಂಬುದರ ಬಗ್ಗೆ ಆಸ್ಟ್ರೇಲಿಯಾ ಮಾಜಿ ಕ್ಯಾಪ್ಟನ್ ರಿಕಿ ಪಾಂಟಿಂಗ್ ಭವಿಷ್ಯ ನುಡಿದಿದ್ದಾರೆ.

ಈ ಹಿಂದೆ ಯುಎಇನಲ್ಲಿ ನಡೆದ ಟಿ - 20 ವಿಶ್ವಕಪ್​​ನಲ್ಲಿ ಗೆಲುವು ದಾಖಲಿಸಿರುವ ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾ ಫೈನಲ್​​ನಲ್ಲಿ ಮುಖಾಮುಖಿಯಾಗಲಿವೆ ಎಂದು ಪಾಂಟಿಂಗ್​ ಭವಿಷ್ಯ ನುಡಿದಿದ್ದಾರೆ. ಆರೋನ್​​ ಫಿಂಚ್​ ನೇತೃತ್ವದ ಆಸ್ಟ್ರೇಲಿಯಾ ತಂಡ ಮತ್ತೊಂದು ಅವಧಿಗೆ ವಿಶ್ವಕಪ್ ಗೆಲ್ಲುವ ಸಾಮರ್ಥ್ಯ ಹೊಂದಿದ್ದು, ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಕೂಡ ಫೈನಲ್​ಗೆ ಬರಲಿದೆ ಎಂದಿದ್ದಾರೆ.

ಆಸ್ಟ್ರೇಲಿಯಾ ಮಾಜಿ ಕ್ಯಾಪ್ಟನ್ ರಿಕಿ ಪಾಂಟಿಂಗ್​
ಆಸ್ಟ್ರೇಲಿಯಾ ಮಾಜಿ ಕ್ಯಾಪ್ಟನ್ ರಿಕಿ ಪಾಂಟಿಂಗ್​

ಇದನ್ನೂ ಓದಿರಿ: ವಿಶ್ವ ದಾಖಲೆಯತ್ತ ಶಿಖರ್ ಧವನ್ ಚಿತ್ತ.. ನಾಳೆಯ ಪಂದ್ಯ ಗೆದ್ದರೆ ಸೃಷ್ಟಿಯಾಗಲಿದೆ ಹೊಸ ಇತಿಹಾಸ!

ಭಾರತ - ಆಸ್ಟ್ರೇಲಿಯಾ ತಂಡಗಳು ಫೈನಲ್​ನಲ್ಲಿ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ ಎಂದು ನಾನು ಭಾವಿಸುತ್ತೇನೆ ಎಂದಿದ್ದು, ಇದೇ ವೇಳೆ, ಇಂಗ್ಲೆಂಡ್ ತಂಡ ಸಹ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನದ ಕ್ಯಾಪ್ಟನ್ ಬಾಬರ್ ಆಜಂ ರನ್​ಗಳಿಕೆ ಮಾಡದಿದ್ದರೆ ಅದು ಪಂದ್ಯದಲ್ಲಿ ಗೆಲುವು ಸಾಧಿಸಲು ಸಾಧ್ಯವಿಲ್ಲ ಎಂದಿರುವ ಪಾಂಟಿಂಗ್, ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿ, ಪ್ರಶಸ್ತಿಗೆ ಮುತ್ತಿಕ್ಕಲಿದೆ ಎಂದು ಹೇಳಿಕೊಂಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್​ಗೋಸ್ಕರ ಈಗಾಗಲೇ ಎಲ್ಲ ತಂಡಗಳು ಭರದ ಯೋಜನೆ ರೂಪಿಸುತ್ತಿದ್ದು, ಟೀಂ ಇಂಡಿಯಾ ಕೂಡ ಇದರಿಂದ ಹೊರ ಬಿದ್ದಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.