ETV Bharat / sports

IPL Retention : ಮ್ಯಾಕ್ಸ್​ವೆಲ್, ಕೊಹ್ಲಿ ನಂತರ ಸಿರಾಜ್​ರನ್ನು ಉಳಿಸಿಕೊಳ್ಳಲು RCB ನಿರ್ಧಾರ

author img

By

Published : Nov 30, 2021, 7:00 PM IST

RCB  etentain Mohammed Siraj  alongside Virat Kohli and Glenn Maxwell
ರಾಯಲ್ ಚಾಲೆಂಜರ್ಸ್ ಬೆಂಗಳೂರು ರಿಟೈನ್ ಪ್ಲೇಯರ್ಸ್

ಈ ಮೊದಲಿನ ಮಾಹಿತಿಯಂತೆ ಆರ್​ಸಿಬಿ ವಿರಾಟ್​ ಕೊಹ್ಲಿ ಮತ್ತು ಗ್ಲೇನ್​ ಮ್ಯಾಕ್ಸ್​ವೆಲ್​ರನ್ನು ಉಳಿಸಿಕೊಳ್ಳುವುದು ಪಕ್ಕಾ ಆಗಿತ್ತು. ಮಂಗಳವಾರ ರಿಟೈನ್ ಮಾಡಿಕೊಳ್ಳಲು ಕೊನೆಯ ದಿನಾಂಕವಾಗಿರುವುದರಿಂದ ಆರ್‌ಸಿಬಿ, ಹೈದರಾಬಾದ್​ ಬೌಲರ್​ ಮೊಹಮ್ಮದ್ ಸಿರಾಜ್​ರನ್ನು ಉಳಿಸಿಕೊಳ್ಳುವುದಕ್ಕೆ ನಿರ್ಧರಿಸಿದೆ ಎಂದು ಇಎಸ್​ಪಿಎನ್​ ವರದಿ ಮಾಡಿದೆ..

ಹೈದರಾಬಾದ್ ​: ಭಾರತೀಯ ಕ್ರಿಕೆಟ್​ನ ಉದಯೋನ್ಮುಖ ವೇಗಿ ಮೊಹಮ್ಮದ್​ ಸಿರಾಜ್​ರನ್ನು ವಿರಾಟ್​ ಕೊಹ್ಲಿ ಮತ್ತು ಗ್ಲೇನ್ ಮ್ಯಾಕ್ಸ್​ವೆಲ್ ಜೊತೆಗೆ ರಿಟೈನ್ ಮಾಡಿಕೊಳ್ಳುವುದಕ್ಕೆ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಈ ಮೊದಲಿನ ಮಾಹಿತಿಯಂತೆ ಆರ್​ಸಿಬಿ ವಿರಾಟ್​ ಕೊಹ್ಲಿ ಮತ್ತು ಗ್ಲೇನ್​ ಮ್ಯಾಕ್ಸ್​ವೆಲ್​ರನ್ನು ಉಳಿಸಿಕೊಳ್ಳುವುದು ಪಕ್ಕಾ ಆಗಿತ್ತು. ಮಂಗಳವಾರ ರಿಟೈನ್ ಮಾಡಿಕೊಳ್ಳಲು ಕೊನೆಯ ದಿನಾಂಕವಾಗಿರುವುದರಿಂದ ಬೆಂಗಳೂರು ಹೈದರಾಬಾದ್​ ಬೌಲರ್​ ಮೊಹಮ್ಮದ್ ಸಿರಾಜ್​ರನ್ನು ಉಳಿಸಿಕೊಳ್ಳುವುದಕ್ಕೆ ನಿರ್ಧರಿಸಿದೆ ಎಂದು ಇಎಸ್​ಪಿಎನ್​ ವರದಿ ಮಾಡಿದೆ.

ರಿಟೈನ್ ಪಾಲಿಸಿಯ ಪ್ರಕಾರ ಮೊದಲ ರಿಟೈನ್ ಆಟಗಾರ 16, 2ನೇ ಕ್ರಿಕೆಟಿಗ 12 ಮತ್ತು 3ನೇ ಕ್ರಿಕೆಟಿಗ 8 ಕೋಟಿ ರೂ. ಪಡೆಯಲಿದ್ದಾರೆ. ಆದರೆ, ಅನುಭವಿ ಸ್ಪಿನ್ನರ್​ ಯುಜ್ವೇಂದ್ರ ಚಹಲ್ ಮತ್ತು ಕರ್ನಾಟಕದ ಸ್ಟಾರ್ ಬ್ಯಾಟರ್​ ದೇವದತ್​ ಪಡಿಕ್ಕಲ್​ ಆರ್​ಸಿಬಿಯಿಂದ ಹೊರ ಬಿದ್ದಿದ್ದಾರೆ.

ಸಿರಾಜ್​ ಕಳೆದ ಮೂರು ವರ್ಷಗಳಿಂದ ಆರ್​ಸಿಬಿಯಲ್ಲಿ ಆಡುತ್ತಿದ್ದಾರೆ. ಮೊದಲ ಆವೃತ್ತಿಯಲ್ಲಿ ದುಬಾರಿಯಾದರೂ ಕಳೆದ 2 ಆವೃತ್ತಿಯಲ್ಲಿ ಸಿರಾಜ್​ ಆರ್​ಸಿಬಿಯ ಅಗ್ರ ಹಾಗೂ ಎಕನಾಮಿಕಲ್ ಬೌಲರ್​ ಆಗಿ ಗುರುತಿಸಿಕೊಂಡಿದ್ದಾರೆ. 2021ರ ಆವೃತ್ತಿಯಲ್ಲಿ 6.78ರ ಎಕಾನಮಿಯಲ್ಲಿ 11 ವಿಕೆಟ್ ಪಡೆದಿದ್ದರು.

ಇದನ್ನೂ ಓದಿ: ಐಪಿಎಲ್ ರಿಟೆನ್ಷನ್​ 2022 : ಫ್ರಾಂಚೈಸಿಗಳು ಉಳಿಸಿಕೊಳ್ಳುವ ಸಾಧ್ಯತೆಯಿರುವ ಆಟಗಾರರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.