ETV Bharat / sports

ಭಾರತ ತಂಡದಿಂದ ಕೈಬಿಟ್ಟ ಮಾರನೇ ದಿನವೇ 83 ಎಸೆತಗಳಲ್ಲಿ 91 ರನ್​ ಸಿಡಿಸಿದ ಪೂಜಾರ

author img

By

Published : Feb 20, 2022, 7:51 PM IST

Pujara scores 91 against Mumbai
ಚೇತಶ್ವರ್ ಪೂಜಾರ

ಶನಿವಾರ ಬಿಸಿಸಿಐ ಮುಂಬರುವ ಶ್ರೀಲಂಕಾ ವಿರುದ್ಧ 2 ಪಂದ್ಯಗಳ ಟೆಸ್ಟ್​ ಸರಣಿಗೆ 18 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಆಯ್ಕೆಸಮಿತಿ ಪೂಜಾರ ಮತ್ತು ಅಜಿಂಕ್ಯ ರಹಾನೆಯನ್ನು ತಂಡದಿಂದ ಕೈಬಿಟ್ಟಿತ್ತು.

ಅಹ್ಮದಾಬಾದ್​: ಭಾರತ ತಂಡದ ಅನುಭವಿ ಬ್ಯಾಟರ್​ ಚೇತೇಶ್ವರ್​ ಪೂಜಾರ ರಣಜಿ ಟ್ರೋಫಿಯಲ್ಲಿ ಮುಂಬೈ ವಿರುದ್ಧ 83 ಎಸೆತಗಳಲ್ಲಿ 91 ರನ್​ ಸಿಡಿಸಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ 7 ವಿಕೆಟ್ ಕಳೆದುಕೊಂಡು 544 ರನ್​ಗಳಿಸಿತ್ತು. ಈ ಮೊತ್ತವನ್ನು ಹಿಂಬಾಲಿಸಿದ ಸೌರಾಷ್ಟ್ರ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 220ರನ್​ಗಳಿಗೆ ಆಲೌಟ್ ಆಗಿತ್ತು. ಪೂಜಾರ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದ್ದರು.

ಶನಿವಾರ ಬಿಸಿಸಿಐ ಮುಂಬರುವ ಶ್ರೀಲಂಕಾ ವಿರುದ್ಧ 2 ಪಂದ್ಯಗಳ ಟೆಸ್ಟ್​ ಸರಣಿಗೆ 18 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಆಯ್ಕೆ ಸಮಿತಿ ಪೂಜಾರ ಮತ್ತು ಅಜಿಂಕ್ಯ ರಹಾನೆಯನ್ನು ತಂಡದಿಂದ ಕೈಬಿಟ್ಟಿತ್ತು.

ಆದರೆ ತಂಡದಿಂದ ಕೈಬಿಟ್ಟ ಮಾರನೇ ದಿನ ಅದ್ಭುತವಾಗಿ ಬ್ಯಾಟ್ ಬೀಸಿದ ಪೂಜಾರ 83 ಎಸೆತಗಳಲ್ಲಿ 16 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ 91 ರನ್​ಗಳಿಸಿ ಮಿಂಚಿದ್ದರು. ರಹಾನೆ ಕೂಡ ಮೊದಲ ಇನ್ನಿಂಗ್ಸ್​ನಲ್ಲಿ ಮುಂಬೈ ಪರ ಶತಕ ಸಿಡಿಸಿದ್ದರು.

ಹಿರಿಯ ಆಟಗಾರರನ್ನು ತಂಡದಿಂದ ಹೊರಗಿಟ್ಟ ಬಗ್ಗೆ ಮಾತನಾಡಿದ್ದ ಚೇತನ್​ ಶರ್ಮಾ, ಆಯ್ಕೆ ಸಮಿತಿಯು ರಹಾನೆ ಮತ್ತು ಪೂಜಾರ ಬಗ್ಗೆ ಸಾಕಷ್ಟು ಚರ್ಚಿಸಿದೆ. ಅವರಿಬ್ಬರಿಗೆ ತಂಡವನ್ನು ಆಯ್ಕೆ ಮಾಡುವ ಮುನ್ನವೇ ನಿಮ್ಮನ್ನು ಶ್ರೀಲಂಕಾ ವಿರುದ್ಧದ ಸರಣಿಗೆ ಡ್ರಾಪ್​ ಮಾಡಲಾಗುವುದು ಎಂದು ತಿಳಿಸಿದ್ದೇವೆ ಮತ್ತು ಅವರಿಗೆ ರಣಜಿ ಟ್ರೋಫಿಯಲ್ಲಿ ಆಡಿ ಫಾರ್ಮ್​ಗೆ ಮರಳುವಂತೆ ಸಲಹೆ ನೀಡಿದ್ದೇವೆ ಎಂದು ವರ್ಚುವಲ್ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದ್ದರು.

ಇದನ್ನೂ ಓದಿ: ಇನ್ಮುಂದೆ ನಿಮ್ಮನ್ನು ಆಯ್ಕೆ ಮಾಡಲ್ಲ, ಯುವ ಪ್ರತಿಭೆ ಎದುರು ನೋಡುತ್ತಿದ್ದೇವೆ ಅಂದಿದ್ದಾರೆ: ಸಹಾ ಸ್ಫೋಟಕ ಹೇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.