ETV Bharat / sports

RCB ಅಲ್ಲ, ಈ ತಂಡದ ಪರ ಆಡುವ ಇಚ್ಛೆ ವ್ಯಕ್ತಪಡಿಸಿದ ಹರ್ಷಲ್​ ಪಟೇಲ್​

author img

By

Published : Jan 27, 2022, 4:33 PM IST

Purple cap holder Harshal Patel wants  to play for CSK In IPL 2022
ಹರ್ಷಲ್ ಪಟೇಲ್ ಚೆನ್ನೈ ಸೂಪರ್ ಕಿಂಗ್ಸ್

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಹರ್ಷಲ್ ಪಟೇಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡಿ 15 ಪಂದ್ಯಗಳಿಂದ 32 ವಿಕೆಟ್​ ಪಡೆದು ಕಿತ್ತಳೆ ಟೋಪಿ ಪಡೆದುಕೊಂಡಿದ್ದರು. ಆದರೆ ಆರ್​ಸಿಬಿ ಅವರನ್ನು ಪರ್ಸ್​ ಮ್ಯಾನೇಜ್​ಮೆಂಟ್​ ವಿಷಯವಾಗಿ ರಿಟೈನ್​ ಮಾಡಿಕೊಂಡಿರಲಿಲ್ಲ. ಇದೀಗ ಮುಂಬರು ಮೆಗಾ ಹರಾಜಿನಲ್ಲಿ ಅವರ ಸಿಎಸ್​ಕೆ ಪರ ಆಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ನವದೆಹಲಿ: 2021ರ ಐಪಿಎಲ್​ನಲ್ಲಿ ಗರಿಷ್ಠ ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದುಕೊಂಡಿರುವ ಹರ್ಷಲ್ ಪಟೇಲ್ ಮುಂದಿನ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್​ ಧೋನಿ ನೇತೃತ್ವದ ಚೆನ್ನೈ ಸೂಪರ್​ ಕಿಂಗ್ಸ್​ ಪರ ಆಡಲು ಇಷ್ಟಪಡುವುದಾಗಿ ಹೇಳಿಕೊಂಡಿದ್ದಾರೆ.

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಹರ್ಷಲ್ ಪಟೇಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡಿ 15 ಪಂದ್ಯಗಳಿಂದ 32 ವಿಕೆಟ್​ ಪಡೆದು ಕಿತ್ತಳೆ ಟೋಪಿ ಪಡೆದುಕೊಂಡಿದ್ದರು.

2022ರ ಹರಾಜಿಗೂ ಮುನ್ನ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ವಿರಾಟ್ ಕೊಹ್ಲಿ, ಗ್ಲೇನ್ ಮ್ಯಾಕ್ಸ್​ವೆಲ್ ಮತ್ತು ಮೊಹಮ್ಮದ್​ ಸಿರಾಜ್​ರನ್ನು ಮಾತ್ರ ರಿಟೈನ್ ಮಾಡಿಕೊಂಡಿತ್ತು. ಇದೀಗ ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ 2022ರ ಆವೃತ್ತಿಗೆ ಮೆಗಾ ಹರಾಜು ನಡೆಯಲಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಕ್ರಿಕ್​ಟ್ರ್ಯಾಕರ್​ ಜೊತೆಗಿನ ಸಂದರ್ಶನದ ವೇಳೆ ಹರಿಯಾಣ ಮೂಲದ ಬೌಲರ್​ಗೆ ಮುಂದಿನ ಆವೃತ್ತಿಯಲ್ಲಿ ಯಾವ ಫ್ರಾಂಚೈಸಿ ಪರ ಆಡಲು ಇಚ್ಛಿಸುತ್ತೀರಾ ಎಂದು ಕೇಳಿದ್ದಕ್ಕೆ, ತಾವೂ ಚೆನ್ನೈ ಸೂಪರ್​ ಕಿಂಗ್ಸ್​ ಪರ ಆಡುವುದಕ್ಕೆ ಇಷ್ಟಪಡುತ್ತೇನೆ ಎಂದು ತಿಳಿಸಿದ್ದಾರೆ. ಕ್ರಿಕೆಟಿಗನಾಗಿ ನನಗೆ ಎಂಎಸ್​ ಧೋನಿ ಸ್ಪೂರ್ತಿಯಾಗಿದ್ದಾರೆ. ಅವರು ನನ್ನ ನೆಚ್ಚಿನ ಸಾರ್ವಕಾಲಿಕ ನಾಯಕ ಎಂದು ಪಟೇಲ್ ಹೇಳಿದ್ದಾರೆ.

ನನ್ನ ವೃತ್ತಿ ಜೀವನ ಬದಲಿಸಿದ್ದು ಆರ್​ಸಿಬಿ: ನನ್ನನ್ನು ಈ ಬಾರಿ ರಿಟೈನ್ ಮಾಡಿಕೊಳ್ಳದಿದ್ದಕ್ಕೆ ಮೈಕ್​ ಹೆಸನ್​ ಕರೆ ಮಾಡಿ ಪರ್ಸ್​ ಮ್ಯಾನೇಜ್​ಮೆಂಟ್​ನಿಂದಾಗಿ ರಿಟೈನ್​ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಹೇಳಿದರು. ಅವರೂ ಕೂಡ ನನ್ನನ್ನು ಮರಳಿ ಪಡೆಯಲು ಇಷ್ಟಪಡುತ್ತಾರೆ. ನಾನೂ ಕೂಡ ಮತ್ತೆ ಆರ್​ಸಿಬಿಗೆ ಮರಳುವುದಕ್ಕೆ ಮತ್ತು ತಂಡದ ಪರ ಆಡುವುದಕ್ಕೆ ಇಷ್ಟಪಡುತ್ತೇನೆ. ಏಕೆಂದರೆ ಆರ್​ಸಿಬಿ ನನ್ನ ವೃತ್ತಿ ಜೀವನವನ್ನಷ್ಟೆ ಅಲ್ಲ ನನ್ನ ಸಂಪೂರ್ಣ ಜೀವನವನ್ನು ಬದಲಾಯಿಸಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಕ್ರಿಕೆಟಿಗ ರವಿ ಬಿಷ್ಣೋಯ್​ಗೆ ಡಬಲ್​ ಧಮಾಕಾ.. ಭಾರತ ರಾಷ್ಟ್ರೀಯ ತಂಡದಲ್ಲಿ ಸ್ಥಾನ, ಐಪಿಎಲ್​ನಲ್ಲಿ 4 ಕೋಟಿಗೆ ಖರೀದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.