ETV Bharat / sports

ಟಾಪ್​ ಮೂವರು ಆಟಗಾರರೇ ಭಾರತಕ್ಕೆ ಸಮಸ್ಯೆ, ಕೊನೆಯ ಪಂದ್ಯದಲ್ಲಿದೆಯೇ ಶಾಗೆ ಎಂಟ್ರಿ?

author img

By

Published : Jan 31, 2023, 9:15 PM IST

PREVIEW: India's top order in focus in series decider
ಟಾಪ್​ ಮೂವರು ಆಟಗಾರರೇ ಭಾರತಕ್ಕೆ ಸಮಸ್ಯೆ

ಸತತ ಎರಡು ಪಂದ್ಯದಿಂದ ಆರಂಭಿಕರ ವೈಫಲ್ಯ - ದ್ವಿಶತಕ ವೀರರಿಂದ ಬರುತ್ತಿಲ್ಲ ಉತ್ತಮ ಜೊತೆಯಾಟ - ಮೂರನೇ ಪಂದ್ಯದಲ್ಲಿ ಪೃಥ್ವಿ ಶಾ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರಾ..?

ಅಹಮದಾಬಾದ್​ (ಗುಜರಾತ್​): ಮೊದಲ ಮೂವರು ಬ್ಯಾಟರ್​ಗಳ ವೈಫಲ್ಯ ಭಾರತದ ಟಿ20 ತಂಡಕ್ಕೆ ಕಂಟಕವಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು. ರೋಹಿತ್​ ಶರ್ಮಾ, ಕೆ ಎಲ್​ ರಾಹುಲ್​ ಮತ್ತು ವಿರಾಟ್​ ಕೊಹ್ಲಿಯ ಅನುಪಸ್ಥಿತಿ ಭಾರತಕ್ಕೆ ಕಾಡುತ್ತಿದೆ. ನಾಳೆ ನಡೆಯಲಿರುವ ಸರಣಿಯ ಅಂತಿಮ ಪಂದ್ಯದಲ್ಲಿ ಹಾರ್ದಿಕ್​ ನಾಯಕತ್ವ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ಸಹ ಕುತೂಹಲವಾಗಿದೆ.

ಎರಡನೇ ಪಂದ್ಯದಲ್ಲಿ ಕಿವೀಸ್​ನ್ನು ಬೌಲರ್​ಗಳು ಅದ್ಭುತವಾಗಿ ಕಟ್ಟಿಹಾಕಿದ್ದರು. 99 ರನ್​ಗೆ ನ್ಯೂಜಿಲೆಂಡ್​ ತನ್ನೆಲ್ಲಾ ವಿಕೆಟ್​ಗಳನ್ನು ಕಳೆದುಕೊಂಡಿತ್ತು. 100 ರನ್​ನ ಗುರಿಯನ್ನು ಮುಟ್ಟಲು ಭಾರತ 19.5 ಬಾಲ್​ಗಳನ್ನು ಎದುರಿಸಿತ್ತು. ಅಲ್ಲದೇ ಬ್ಯಾಟರ್​ 4 ವಿಕೆಟ್​ ಸಹ ಕಳೆದುಕೊಂಡಿತು. ಉಪನಾಯಕ ಸೂರ್ಯಕುಮಾರ್​ ಯಾದವ್​ ಮತ್ತು ನಾಯಕ ಹಾರ್ದಿಕ್​ ಅವರ ಆಟಕ್ಕೆ ತಂಡ ದಡ ಸೇರಿತು.

ಬಾಂಗ್ಲ ಎದುರಿನ ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಗಳಿಸಿದ ಇಶನ್​ ಕಿಶನ್​ ಮತ್ತು ನ್ಯೂಜಿಲೆಂಡ್ ಎದುರಿನ ಮೊದಲ ಏಕದಿನದಲ್ಲಿ ದ್ವಿಶತಕ ಗಳಿಸಿದ ಶುಭಮನ್​ ಗಿಲ್​ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದು ಟಿ20 ಫಾರ್ಮೆಟ್​ನಲ್ಲಿ ವಿಫಲರಾಗುತ್ತಿದ್ದಾರೆ. ವಿರಾಟ್​ ಕೊಹ್ಲಿಯ ಜಾಗಕ್ಕೆ ರಾಹುಲ್​ ತ್ರಿಪಾಠಿ ಸಿಕ್ಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ. ಎರಡನೇ ಟಿ20 ಚುಟುಕು ಸಮರದಲ್ಲಿ ಸಿಕ್ಸರ್​ ಕಾಣದೇ ಪಂದ್ಯ ಅಂತ್ಯವಾಗಿದ್ದಲ್ಲದೇ ನಿರಸವಾಗಿತ್ತು. ಅತೀ ಹೆಚ್ಚು ಬಾಲ್​ಗಳನ್ನು ಎದುರಿಸಿ ಸಿಕ್ಸ್​ ದಾಖಲಾಗದ ಪಂದ್ಯ ಎಂಬ ದಾಖಲೆ ಸಹ ಕಳೆದ ಪಂದ್ಯದಲ್ಲಾಗಿದೆ.

ನಾಳೆ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ನಡೆಯಲಿರುವ ಪಂದ್ಯ ಎರಡೂ ತಂಡಕ್ಕೆ ಸರಣಿ ಉಳಿಸಿಕೊಳ್ಳುವ ಮ್ಯಾಚ್​ ಆಗಿದೆ. ಈ ಪೈನಲ್​ ಹಣಾಹಣಿ ಬಾರಿ ಕುತೂಹಲ ಮೂಡಿಸಿದ್ದು 1,10,000 ಜನ ಪ್ರೇಕ್ಷಕರ ಗ್ಯಾಲರಿ ಇರುವ ಸ್ಟೇಡಿಯಂ ತುಂಬುವ ಸಾಧ್ಯತೆ ಇದೆ. ಇದೇ ಕ್ರೀಡಾಂಗಣದಲ್ಲಿ ಐಪಿಎಲ್​ ಕಪ್​ ಎತ್ತಿದ್ದ ಹಾರ್ದಿಕ್​ ಪಾಂಡ್ಯಗೆ ನಾಳೆ ಅಗ್ನಿ ಪರೀಕ್ಷೆಯಂತೂ ಇದೆ. ಮೊದಲ ಪಂದ್ಯದಲ್ಲಿ ಕೊನೆ ದುಬಾರಿ ಓವರ್​ ಮತ್ತು ಕಳಪೆ ಬೌಲಿಂಗ್​ ಪ್ರದರ್ಶನ ಎಂದು ನಾಯಕ ಹಾರ್ದಿಕ್​ ಹೇಳಿಕೊಂಡಿದ್ದರು. ಎರಡನೇ ಪಂದ್ಯದಲ್ಲಿ ಬೌಲಿಂಗ್​ ಸುಧಾರಿಸಿದ್ದು, ಬ್ಯಾಟಿಂಗ್​ ವೈಫಲ್ಯ ಕಂಡಿದೆ. ಎರಡನ್ನೂ ಮೂರನೇ ಪಂದ್ಯದಲ್ಲಿ ಸಮತೋಲನ ಮಾಡುವ ಅಗತ್ಯ ಇದೆ. ತಂಡದಲ್ಲಿ ಪ್ರಯೋಗ ಕೈಗೊಳ್ಳಲು ಸಾಧ್ಯತೆಗಳು ಕಡಿಮೆ ಇರುವುದರಿಂದ ಅದೇ ತಂಡವನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.

ಪೃಥ್ವಿ ಶಾಗೆ ಈ ಪಂದ್ಯದಲ್ಲೂ ಅವಕಾಶ ಅನುಮಾನ: ದೇಶೀಯ ಟೂರ್ನಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದ ಪೃಥ್ವಿ ಶಾ ಅವರನ್ನು ಟಿ20 ಸ್ವಾಡ್​ನಲ್ಲಿ ಸೇರಿಸಲಾಗಿತ್ತು. ಆದರೆ ದ್ವಿಶತಕ ವೀರರಾದ ಗಿಲ್​ ಮತ್ತು ಕಿಶನ್​ಗೆ ಆರಂಭದ ಜವಾಬ್ದಾರಿ ನೀಡಲಾಗಿತ್ತು. ಇಬ್ಬರೂ ಎರಡು ಪಂದ್ಯಗಳಲ್ಲಿ ವಿಫಲರಾದರೂ ಈ ಪಂದ್ಯದಲ್ಲಿ ಶಾಗೆ ಅವಕಾಶ ಅನುಮಾನವೇ ಇದೆ. ಅದೇ ತಂಡವನ್ನು ಹಾರ್ದಿಕ್​ ಮುಂದುವರೆಸುವ ಸಾಧ್ಯತೆ ಇದೆ. ಸ್ವಿನ್​ ವಿಭಾಗದಲ್ಲಿ ಒಬ್ಬರನ್ನು ಕೈಬಿಟ್ಟು ಮತ್ತೆ ವೇಗಿ ಉಮ್ರಾನ್​ಗೆ ಸ್ಥಾನ ಸಿಗುವ ಸಾಧ್ಯತೆ ಇದೆ.

ರಾಹುಲ್​ ತ್ರಿಪಾಠಿ ಜಾಗದಲ್ಲಿ ಜಿತೇಶ್​ ಶರ್ಮಾ ಬರುವ ಸಾಧ್ಯತೆ ಇದೆ ಆದರೆ ಇದು ಅಚ್ಚರಿಯ ಬದಲಾವಣೆ ಎಂದು ಅನಿಸುವುದಿಲ್ಲ. ಹೂಡಾರನ್ನು ಕೈ ಬಿಟ್ಟು ಒಬ್ಬ ವೇಗಿಯನ್ನು ತಂಡಕ್ಕೆ ಸೇರಿಸುತ್ತಾರ ಅಥವಾ ಸ್ಪಿನ್ನರ್​ ಒಬ್ಬರನ್ನು ಕೈಬಿಡುತ್ತಾರ ಎಂಬುದು ಪ್ರಶ್ನೆಯಾಗಿದೆ. ಎರಡನೇ ಪಂದ್ಯದಲ್ಲಿ ಸ್ಪಿನ್​ ಬೌಲಿಂಗ್​ಗೆ ಎರಡೂ ತಂಡಗಳು ಹೆಚ್ಚು ಒತ್ತುಕೊಟ್ಟಿದ್ದು, ಕಳೆದ ಮ್ಯಾಚ್​ನಲ್ಲಿ 17 ಸ್ಪಿನ್​ ಓವರ್​ಗಳನ್ನು ಹಾಕಲಾಗಿದೆ. ಇದು ಅಂತರಾಷ್ಟ್ರೀಯ ಟಿ20 ಪಂದ್ಯದಲ್ಲಿ ಅತೀ ಹೆಚ್ಚು ಸ್ಪಿನ್​ ಓವರ್​ಗಳನ್ನು ಮಾಡಿದ ಮೂರನೇ ಪಂದ್ಯವಾಗಿದೆ.

ಅತ್ತ ನ್ಯೂಜಿಲೆಂಡ್ ಕೂಡ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಮಾರ್ಕ್ ಚಾಪ್‌ಮನ್, ಮೈಕೆಲ್ ಬ್ರೇಸ್‌ವೆಲ್ ಮತ್ತು ಗ್ಲೆನ್ ಫಿಲಿಪ್ಸ್ ರನ್​ಗಳಿಸುತ್ತಿದ್ದಾರೆ. ಆದರೆ ಮಧ್ಯಮ ಕ್ರಮಾಂಕದ ವಿಫಲತೆ ತಂಡಕ್ಕೆ ಕಾಡುತ್ತಿದ್ದು ನಾಳೆ ನಡೆಯುವ ಪಂದ್ಯದಲ್ಲಿ ಸುಧಾರಿಸಿಕೊಂಡರೆ ದೊಡ್ದ ಮೊತ್ತ ಗಳಿಸುವ ಸಾಧ್ಯತೆ ಇದೆ. ಮಿಚೆಲ್ ಸ್ಯಾಂಟ್ನರ್ ನಾಯಕತ್ವದಲ್ಲಿ ಬೌಲಿಂಗ್​ ಪಡೆ ಉನ್ನತವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕೊನೆಯ ಪಂದ್ಯದಲ್ಲೂ ಅಷ್ಟೇ ಜವಾಬ್ದಾರಿ ಅವರ ಮೇಲಿದೆ.

ಭಾರತ: ಹಾರ್ದಿಕ್ ಪಾಂಡ್ಯ (ನಾಯಕ), ಸೂರ್ಯಕುಮಾರ್ ಯಾದವ್ (ಉಪನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭಮನ್ ಗಿಲ್, ಪೃಥ್ವಿ ಶಾ, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್, ಶಿವಂ ಮಾವಿ ಮತ್ತು ಮುಖೇಶ್ ಕುಮಾರ್.

ನ್ಯೂಜಿಲೆಂಡ್: ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಡೇನ್ ಕ್ಲೀವರ್ (ಉಪನಾಯಕ), ಜಾಕೋಬ್ ಡಫಿ, ಲಾಕಿ ಫರ್ಗುಸನ್, ಬೆಂಜಮಿನ್ ಲಿಸ್ಟರ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್ (ವಿಕೆಟ್ ಕೀಪರ್), ಮೈಕೆಲ್ ರಿಪ್ಪನ್ , ಹೆನ್ರಿ ಶಿಪ್ಲಿ, ಇಶ್ ಸೋಧಿ ಮತ್ತು ಬ್ಲೇರ್ ಟಿಕ್ನರ್. ಪಂದ್ಯ ಆರಂಭ: ಸಂಜೆ 7.00ಕ್ಕೆ

ಇದನ್ನೂ ಓದಿ: ಮೋದಿ ಸ್ಟೇಡಿಯಂನಲ್ಲಿ ನಾಳೆ ಅಂಡರ್ 19 ಮಹಿಳಾ ಟಿ-20 ವಿಶ್ವಕಪ್​ ವಿಜೇತ ತಂಡಕ್ಕೆ ಸಚಿನ್​ ಸನ್ಮಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.