ETV Bharat / sports

ವಿಶ್ವಕಪ್​ ಗೆದ್ದ ನಾಯಕ ಪ್ಯಾಟ್​ ಕಮಿನ್ಸ್​ಗೆ ಐತಿಹಾಸಿಕ ಬಿಡ್​​​: 20.5 ಕೋಟಿ ನೀಡಿ ಖರೀದಿಸಿದ ಎಸ್​​ಆರ್​ಹೆಚ್​

author img

By ETV Bharat Karnataka Team

Published : Dec 19, 2023, 3:34 PM IST

Pat Cummins
Pat Cummins

Most Expensive Player in IPL: ಪ್ಯಾಟ್​ ಕಮಿನ್ಸ್​ಗೆ ಸನ್​ ರೈಸರ್ಸ್​ ಹೈದರಾಬಾದ್​​ ತಂಡ ​​ 20.5 ಕೋಟಿಗೆ ಕೊಟ್ಟು ಖರೀದಿಸಿದೆ.

ದುಬೈ: 2023ರ ಏಕದಿನ ವಿಶ್ವಕಪ್​ ವಿಜೇತ ತಂಡದ ನಾಯಕ ಪ್ಯಾಟ್​ ಕಮಿನ್ಸ್​​ ಐಪಿಎಲ್​ ಇತಿಹಾಸದಲ್ಲಿ ದಾಖಲೆಗೆ ಬಿಕರಿ ಆದ ಆಟಗಾರರಾದರು. ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ಮತ್ತು ಸನ್​ ರೈಸರ್ಸ್​​ ಹೈದರಾಬಾದ್​ (ಎಸ್​ಆರ್​ಹೆಚ್​)​ ನಡುವೆ ನಡೆದ ಪೈಪೋಟಿಯಲ್ಲಿ 20.50 ಕೋಟಿಗೆ ಬಿಕರಿಯಾದರು. 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ನ ಮಿನಿ ಹರಾಜು ​ದುಬೈನ ಕೋಲಾ ಅರೆನಾದಲ್ಲಿ ನಡೆಯುತ್ತಿದೆ.

2 ಕೋಟಿ ಮೂಲ ಬೆಲೆಯೊಂದಿಗೆ ಕಮ್ಮಿನ್ಸ್ ಬಿಡ್ಡಿಂಗ್ ವಾರ್​ಗೆ ಮುಂಬೈ ಇಂಡಿಯನ್ಸ್ (ಎಂಐ) ಇಳಿಯಿತು. ನಂತರ ಮುಂಬೈ ಇಂಡಿಯನ್ಸ್​ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪೈಪೋಟಿ ಏರ್ಪಟ್ಟಿತು. ಮುಂಬೈ ಹಿಂದೆ ಸರಿದ ನಂತರ ಚೆನ್ನೈ ಸೂಪರ್​ ಕಿಂಗ್ಸ್​ ಕಣಕ್ಕಿಳಿಯಿತು. ಆದರೆ ಆರ್​​ಸಿಬಿಯ ಜೊತೆ ದೊಡ್ಡ ಹೋರಾಟ ಮಾಡಿದ್ದ ಸನ್​​ರೈಸರ್ಸ್​​​ ಹೈದರಾಬಾದ್​​​. ಆರ್​ಸಿಬಿ ಕೈಯಲ್ಲಿ 23 ಕೋಟಿ ಇದ್ದರೆ, ಹೈದರಾಬಾದ್​ ಬಳಿ 25 ಕೋಟಿ ಇತ್ತು.

ಹಣದ ಮಿತಿಯ ಅರಿವಿದ್ದರೂ ಉಭಯ ತಂಡಗಳು 'ನೀ ಕೊಡೆ ನಾ ಬಿಡೆ' ಎಂಬಂತೆ ಬಿಡ್​ ಮಾಡಲು ಆರಂಭಿಸಿದರು. 10 ಕೋಟಿ ದಾಟಿ 20 ಕೋಟಿಗೆ ತಲುಪಿತು. ತಂಡಗಳ ಬಳಿ ಇದ್ದ ಒಟ್ಟು ಮೊತ್ತದ ಹತ್ತಿರ ಬಿಡ್​ ಮೊತ್ತ ಬಂದರೂ ಇಬ್ಬರೂ ಸತತ ಪೈಪೋಟಿ ನಡೆಸಿದರು. ಬಿಡ್ಡಿಂಗ್​ 20ಕೋಟಿ ದಾಟುತ್ತಿದ್ದಂತೆ ಉಳಿದ ತಂಡಗಳು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. 20.50 ಕೋಟಿಗೆ ಸನ್​ ರೈಸರ್ಸ್​ ಹೈದರಾಬಾದ್​ ಖರೀದಿಸಿತು.

  • 𝑻𝒉𝒊𝒔 𝒍𝒊𝒕𝒕𝒍𝒆 PAT 𝒐𝒇 𝒍𝒊𝒇𝒆 𝒊𝒔 𝒄𝒂𝒍𝒍𝒆𝒅 𝑯𝒂𝒑𝒑𝒊𝒏𝒆𝒔𝒔 🧡

    Welcome, Cummins! 🫡#HereWeGOrange pic.twitter.com/qSLh5nDbLM

    — SunRisers Hyderabad (@SunRisers) December 19, 2023 " class="align-text-top noRightClick twitterSection" data=" ">

ಐತಿಹಾಸಿಕ ಖರೀದಿ: ಈವರೆಗಿನ ಮೆಗಾ ಹರಾಜು ಮತ್ತು ಮಿನಿ ಹರಾಜಿನಲ್ಲಿ ಇದು ದೊಡ್ಡ ಬೆಲೆಯಾಗಿದೆ. ಈ ಮೊದಲು ಸ್ಯಾಮ್ ಕುರನ್ 18.50 ಕೋಟಿ ರೂ.ಗಳ ಬೆಲೆಗೆ ಬಿಕರಿ ಆಗಿದ್ದು ದಾಖಲೆಯಾಗಿತ್ತು. ಈ ವರ್ಷ ಪ್ಯಾಟ್​ ಕಮಿನ್ಸ್​ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಎರಡು ಐಸಿಸಿ ಟ್ರೋಫಿಗಳನ್ನು ಗೆದ್ದಿದೆ. ವರ್ಷದ ಮಧ್ಯಂತರದಲ್ಲಿ ನಡೆದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಮತ್ತು ನವೆಂಬರ್​ನಲ್ಲಿ ಏಕದಿನ ವಿಶ್ವಕಪ್​ ಗೆಲ್ಲಿಸಿದ್ದರು.

ಈ ವರೆಗೂ ಹೆಚ್ಚಿ ಮೊತ್ತಕ್ಕೆ ಬಿಕರಿ ಆದ ಆಟಗಾರರು: ಇಂಗ್ಲೆಂಡ್‌ನ ಆಲ್‌ರೌಂಡರ್ ಸ್ಯಾಮ್ ಕುರನ್​ ಅವರನ್ನು ಪಂಜಾಬ್ ಕಿಂಗ್ಸ್ - ₹18.5 ಕೋಟಿಗೆ ಖರೀದಿಸಿದ್ದು ಐಪಿಎಲ್ ಹರಾಜು ಇತಿಹಾಸದಲ್ಲಿ ಇದುವರೆಗಿನ ಅತ್ಯಂತ ದುಬಾರಿ ಮೊತ್ತ ಎನಿಸಿಕೊಂಡಿದ್ದರು. ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್​ ನಂತರದ ಸ್ಥಾನದಲ್ಲಿದ್ದಾರೆ. ಗ್ರೀನ್ ಅವರನ್ನು ಮುಂಬೈ ಇಂಡಿಯನ್ಸ್ - ₹ 17.50 ಕೋಟಿಗೆ ಖರೀದಿಸಿತ್ತು. ಉಳಿದಂತೆ ಬೆನ್ ಸ್ಟೋಕ್ಸ್ ಚೆನ್ನೈ ಸೂಪರ್ ಕಿಂಗ್ಸ್ - ₹ 16.25 ಕೋಟಿ, ಕ್ರಿಸ್ ಮೋರಿಸ್ ರಾಜಸ್ಥಾನ್ ರಾಯಲ್ಸ್ - ₹ 16.25 ಕೋಟಿ, ಯುವರಾಜ್ ಸಿಂಗ್ ರಾಯಲ್ ಚಾಲೆಂಜರ್ಸ್ ಬೆಂಗಳೂರು - ₹ 16 ಕೋಟಿ.

ಇದನ್ನೂ ಓದಿ: ಐಪಿಎಲ್​ ಹರಾಜು: ದಾಖಲೆಯ ಮೊತ್ತಕ್ಕೆ ಹೈದರಾಬಾದ್​ ತಂಡಕ್ಕೆ ​ಬಿಕರಿಯಾದ ಪ್ಯಾಟ್​ ಕಮಿನ್ಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.