ETV Bharat / sports

ಅತಿ ಅಪರೂಪದ ಘಟನೆ 2019ರ ಈ ದಿನ ಸಂಭವಿಸಿತ್ತು.. ಭಾರತದ ಅಭಿಮಾನಿಗಳ ಕಣ್ಣಾಲಿಗಳು ತೇವವಾದ ಕ್ಷಣ ಇಲ್ಲಿದೆ..

author img

By

Published : Jul 10, 2023, 7:30 PM IST

MS Dhoni run out in odi world cup 2019
MS Dhoni run out in odi world cup 2019

ಈ ದಿನ ಭಾರತ 2019ರ ವಿಶ್ವಕಪ್​ ಸೆಮಿಫೈನಲ್ ಪಂದ್ಯದಲ್ಲಿ ಸೋಲು ಕಂಡಿತ್ತು. ಅಲ್ಲದೇ ಮಹೇಂದ್ರ ಸಿಂಗ್​ ಧೋನಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ನ ಕೊನೆಯ ಇನ್ನಿಂಗ್ಸ್​​ ನೋಡುವ ಅವಕಾಶ ಪ್ರೇಕ್ಷಕರಿಗೆ ಸಿಕ್ಕಿತ್ತು.

ನವದೆಹಲಿ: ಜುಲೈ 10, 2019, ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ, ಈ ದಿನವನ್ನು ಮರೆಯುವುದು ತುಂಬಾ ಕಷ್ಟ. ಇದು 125 ಕೋಟಿ ಭಾರತೀಯರ ಹೃದಯ ಒಡೆದ ದಿನ ಎಂದರೂ ತಪ್ಪಾಗದು. ವಿಶ್ವಕಪ್ 2019 ರ ಸೆಮಿಫೈನಲ್ ಪಂದ್ಯ ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವೆ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆಯುತ್ತಿತ್ತು. ಟೀಂ ಇಂಡಿಯಾ ಗೆಲುವಿನತ್ತ ಸಾಗುತ್ತಿದ್ದಾಗ ಮಾರ್ಟಿನ್ ಗಪ್ಟಿಲ್ ಅವರ ಸ್ಕ್ವೇರ್ ಲೆಗ್‌ನಿಂದ ಮಾಡಿದ ಡೈರೆಕ್ಟ್ ಥ್ರೋ ವಿಕೆಟ್‌ಗೆ ಬಡಿದು ಎರಡನೇ ರನ್ ಪೂರ್ಣಗೊಳಿಸುವ ವೇಳೆ ಧೋನಿ ರನ್ ಔಟ್ ಆಗಿದ್ದರು.

ಗಪ್ಟಿಲ್ ಅವರ ಈ ನೇರ ಎಸೆತವನ್ನು ನೋಡಿ ಫೀಲ್ಡ್ ಅಂಪೈರ್‌ಗಳು ಕೂಡ ದಿಗ್ಭ್ರಮೆಗೊಂಡರು, ಲೆಗ್ ಅಂಪೈರ್ ರಿಚರ್ಡ್ ಕೆಟಲ್‌ಬರೋ ಕೂಡ ಅಚ್ಚರಿಗೆ ಒಳಗಾಗಿದ್ದರು. ಕೂಡಲೇ ಮೂರನೇ ಟಿವಿ ಅಂಪೈರ್​ ನಿರ್ಣಯಕ್ಕೆ ರನ್​ ಔಟ್​ನ್ನು ಕೊಟ್ಟರು. ಏಕೆಂದರೆ ಅಂತಹ ಮಹತ್ವದ ಪಂದ್ಯದಲ್ಲಿ ಕ್ರಿಕೆಟ್‌ನ ಈ ದಿಗ್ಗಜ ರನ್ ಔಟ್ ಆಗುವುದನ್ನು ನೋಡಲು ಅವರಿಗೂ ಇಷ್ಟವಿರಲಿಲ್ಲ. ಅದು ಧೋನಿ ರನ್​ ಔಟ್​ ಆಗುವುದು ಎಂದರೆ ಸಾವಿರದಲ್ಲಿ ಒಮ್ಮೆ ಮಾತ್ರ ಸಾಧ್ಯ. ಅಂತಹ ಘಟನೆ ಅಂದು ಸಂಭವಿಸಿತ್ತು. ಮೂರನೇ ಅಂಪೈರ್​ ರೀಪ್ಲೇ ನೋಡಿದಾಗ ಧೋನಿ ಕ್ರೀಸ್​ ದಾಟಲು ಒಂದು ನೂಲಿನ ಅಂತರ ಬ್ಯಾಟ್​ ಮತ್ತು ಗೆರೆಯ ನಡುವೆ ಇತ್ತು. ಅವರು ರನ್ ಔಟ್ ಎಂದು ಘೋಷಿಸಲಾಯಿತು. ಭಾರತ ಗೆಲುವಿನ ಭರವಸೆ ಆಗಲೇ ಕುಗ್ಗಿ ಹೋಗಿತ್ತು.

  • One of the most spectacular careers came to an end on this day 4 years ago!

    MS Dhoni played his last international match and signed off with over 15,000 runs and 830 dismissals. pic.twitter.com/Ngh3CL984W

    — Mufaddal Vohra (@mufaddal_vohra) July 10, 2023 " class="align-text-top noRightClick twitterSection" data=" ">

ಭಾವೋದ್ವೇಗಕ್ಕೆ ಒಳಗಾದ ಧೋನಿ ಪೆವಿಲಿಯನ್‌ಗೆ ಮರಳಿದ್ದರು. ಹೀಗೆ ವಿಕೆಟ್ ಕಳೆದುಕೊಂಡ ನಂತರ ಧೋನಿ ತಮ್ಮ ಮೇಲೆ ತಾವೇ ತುಂಬಾ ಕೋಪಗೊಂಡು ಮೈದಾನದಿಂದ ಹೊರಗೆ ಹೋದರು. ಧೋನಿ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಹಿಂದೆಂದೂ ಈ ರೀತಿ ಕೋಪಿಸಿಕೊಂಡು ಪೆವಿಲಿಯನ್‌ಗೆ ಮರಳಿರಲಿಲ್ಲ. ಧೋನಿಯ ಕಣ್ಣುಗಳು ತೇವವಾಗಿದ್ದವು. ಕ್ರೀಡಾಂಗಣದಲ್ಲಿ ನೆರೆದಿದ್ದ ಸಾವಿರಾರು ಭಾರತೀಯ ಪ್ರೇಕ್ಷಕರ ಜೊತೆಗೆ ಕೋಟ್ಯಂತರ ಭಾರತೀಯ ಅಭಿಮಾನಿಗಳ ಕಣ್ಣಲ್ಲಿ ನೀರು ತುಂಬಿತ್ತು. ಈ ಪಂದ್ಯದಲ್ಲಿ ಭಾರತ 18 ರನ್‌ಗಳಿಂದ ನ್ಯೂಜಿಲ್ಯಾಂಡ್​ ವಿರುದ್ಧ ಸೋತಿತ್ತು, ಧೋನಿ ವಿಕೆಟ್​ ನಷ್ಟವಾದಾಗಲೇ ವಿಶ್ವಕಪ್ ಟ್ರೋಫಿ ಎತ್ತುವ ಭಾರತದ ಕನಸು ಭಗ್ನವಾಗಿತ್ತು.

2019ರ ವಿಶ್ವಕಪ್‌ ಸಮಯದಲ್ಲಿ ಇದು ಧೋನಿಯ ಕೊನೆಯ ವಿಶ್ವಕಪ್ ಆಗಲಿದೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದವು. ನ್ಯೂಜಿಲ್ಯಾಂಡ್​ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 72 ಎಸೆತಗಳಲ್ಲಿ 50 ರನ್ ಗಳಿಸಿದ ಅವರ ಇನ್ನಿಂಗ್ಸ್, ಕೊನೆಯ ಅಂತಾರಾಷ್ಟ್ರೀಯ ಆಟ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನದ ವಿರುದ್ಧ ರನೌಟ್ ಆಗುವ ಮೂಲಕ ಧೋನಿ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಕೊನೆಯ ಇನ್ನಿಂಗ್ಸ್‌ನಲ್ಲಿಯೂ ಧೋನಿ ಕಾಕತಾಳೀಯ ಎಂಬಂತೆ ರನ್​ ಔಟ್​ ಆಗಿದ್ದರು.

  • It's been 4 years of the most saddest day for ICT fans. Indian Team was top on the tables under Virat Kohli captaincy in WC19 and ended the tournament with the famous MS Dhoni runout. 💔 (also the last match of mahi) pic.twitter.com/9HaGbWy0uX

    — Akshat (@AkshatOM10) July 10, 2023 " class="align-text-top noRightClick twitterSection" data=" ">

ಭಾರತದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು ಮತ್ತು ವಿಶ್ವದ ಅತ್ಯುತ್ತಮ ಫಿನಿಶರ್ ಎಂಎಸ್ ಧೋನಿ ಅವರು, ವಿಶ್ವಕಪ್ 2019 ರ ಸೆಮಿಫೈನಲ್‌ನಲ್ಲಿ ಭಾರತದ ಸೋಲಿನ ನಂತರ 15 ಆಗಸ್ಟ್ 2019 ರಂದು ಅತ್ಯಂತ ಸರಳವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಬಾಲಿವುಡ್ ಚಿತ್ರ ಕಭಿ ಕಭಿ ಚಿತ್ರದ 'ಮೈನ್ ಪಾಲ್ ದೋ ಪಾಲ್ ಕಾ ಶಾಯರ್ ಹೂನ್' ಹಾಡಿನ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಧೋನಿ ವಿದಾಯ ಹೇಳಿದ್ದಾರೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ತುಂಬಾ ಧನ್ಯವಾದಗಳು ಎಂದು ಧೋನಿ ಈ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. 'ನನ್ನನ್ನು ನಿವೃತ್ತಿ ಎಂದು ಪರಿಗಣಿಸಿ' ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದರು.

ಇದನ್ನೂ ಓದಿ: Virat Kohli: ವಿಂಡ್ಸರ್ ಪಾರ್ಕ್‌ನಲ್ಲಿ ದ್ರಾವಿಡ್​ ಜೊತೆಗಿನ ವಿಶೇಷ ಕ್ಷಣವನ್ನು ನೆನೆದ ವಿರಾಟ್​​..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.