ETV Bharat / sports

ಹದಿಹರೆಯದಲ್ಲಿ ಮಾಡಿದ ವಿವಾದಾತ್ಮಕ ಟ್ವೀಟ್​: ಇಂಗ್ಲೆಂಡ್​ ತಂಡದಿಂದ ಹೊರಬಿದ್ದ ಯುವ ಕ್ರಿಕೆಟಿಗ

author img

By

Published : Jun 7, 2021, 4:19 PM IST

2012-2013ರ ಸಮಯದಲ್ಲಿ ಆಲ್ಲಿ ರಾಬಿನ್​ಸನ್​ ಮಹಿಳೆಯರ ಬಗ್ಗೆ ಕೀಳಾಗಿ, ಏಷ್ಯಾದ ಜನರು ಮತ್ತು ಮುಸ್ಲಿಂ ಸಮುದಾಯದ ಬಗ್ಗೆಯೂ ಕೆಟ್ಟದಾಗಿ ಟ್ವೀಟ್​ ಮಾಡಿದ್ದಾರೆ. ಇದಕ್ಕಾಗಿ ಅವರ ವಿರುದ್ಧ ತನಿಖೆ ನಡೆಯುತ್ತಿರುವುದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಇಸಿಬಿ ಅಮಾನತು ಮಾಡಿದೆ.

ಆಲ್ಲಿ ರಾಬಿನ್​ಸನ್​
ಆಲ್ಲಿ ರಾಬಿನ್​ಸನ್​

ಲಂಡನ್: 8 ವರ್ಷಗಳ ಹಿಂದೆ ತಮ್ಮ ಹದಿಹರೆಯದ ವಯಸ್ಸಿನಲ್ಲಿ ಜನಾಂಗೀಯ ನಿಂದನೆ ಮತ್ತು ಮಹಿಳೆಯರ ಬಗ್ಗೆ ಮಾಡಿದ ಅವಹೇಳನಕಾರಿ ಟ್ವೀಟ್​ಗಳಿಂದ ಇಂಗ್ಲೆಂಡ್​ನ ವೇಗದ ಬೌಲರ್ ರಾಬಿನ್​ಸನ್​ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಅಂತ್ಯಗೊಂಡಿದೆ.

2012-2013ರ ಸಮಯದಲ್ಲಿ ಆಲ್ಲಿ ರಾಬಿನ್​ಸನ್​ ಮಹಿಳೆಯರ ಬಗ್ಗೆ ಕೀಳಾಗಿ, ಏಷ್ಯಾದ ಜನರು ಮತ್ತು ಮುಸ್ಲಿಂ ಸಮುದಾಯದ ಬಗ್ಗೆಯೂ ಕೆಟ್ಟದಾಗಿ ಟ್ವೀಟ್​ ಮಾಡಿದ್ದಾರೆ. ಇದಕ್ಕಾಗಿ ಅವರ ವಿರುದ್ಧ ತನಿಖೆ ನಡೆಯುತ್ತಿರುವುದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಇಸಿಬಿ ಅಮಾನತು ಮಾಡಿದೆ.

"ರಾಬಿನ್ಸನ್ ಅವರ ಟ್ವಿಟರ್ ಪೋಸ್ಟ್​ಗಳ ಮೇಲಿನ ತನಿಖೆಯ ಫಲಿತಾಂಶ ಬಾಕಿ ಉಳಿದಿದೆ, ಹಾಗಾಗಿ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಅಮಾನತುಗೊಳಿಸಲಾಗಿದೆ" ಎಂದಿರುವ ಇಸಿಬಿ ಜೂನ್ 10ರಿಂದ ಕಿವೀಸ್ ವಿರುದ್ಧದ ನಡೆಯುವ 2ನೇ ಟೆಸ್ಟ್​ ಪಂದ್ಯಕ್ಕೆ ಲಭ್ಯರಿರುವುದಿಲ್ಲ, ರಾಬಿನ್ಸನ್ ತಕ್ಷಣ ಇಂಗ್ಲೆಂಡ್ ಶಿಬಿರವನ್ನು ತೊರೆದು ಕೌಂಟಿಗೆ ಹಿಂದಿರುಗಲಿದ್ದಾರೆ ಎಂದು ತಿಳಿಸಿದೆ.

ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್​ ನಡುವಿನ ಮೊದಲನೇ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಈ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ರಾಬಿನ್​ಸನ್​ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ 42 ರನ್ ಬಾರಿಸಿ ಮಿಂಚಿದ್ದರು.

ಇದನ್ನು ಓದಿ: ಕೊಹ್ಲಿ ಜೊತೆಗೆ WTC ಟಾಸ್​ಗಾಗಿ ಹೆಜ್ಜೆ ಹಾಕುವುದು ಹರ್ಷದಾಯಕ ವಿಚಾರ: ವಿಲಿಯಮ್ಸನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.