ETV Bharat / sports

ಭಾರತದ ವಿರುದ್ಧ ಟಾಸ್​ ಗೆದ್ದ ಕಿವೀಸ್​​ ಬೌಲಿಂಗ್ ಆಯ್ಕೆ, ಕೊಹ್ಲಿ ಪಡೆಯಲ್ಲಿ 2 ಪ್ರಮುಖ ಬದಲಾವಣೆ

author img

By

Published : Oct 31, 2021, 7:17 PM IST

ಈ ಪಂದ್ಯದಲ್ಲಿ ಬೆನ್ನು ನೋವಿಗೆ ಒಳಗಾಗಿರುವ ಸೂರ್ಯಕುಮಾರ್​ ಯಾದವ್​ ಬದಲಿಗೆ ಇಶಾನ್ ಕಿಶನ್ ಅವಕಾಶ ಪಡೆದಿದ್ದಾರೆ.​ ಭುವನೇಶ್ವರ್​ ಕುಮಾರ್​ ಬದಲಿಗೆ ಶಾರ್ದುಲ್ ಠಾಕೂರ್ ಕಣಕ್ಕಿಳಿಯಲಿದ್ದಾರೆ. ಇಶಾನ್​ ರೋಹಿತ್ ಜೊತೆಗೆ ಇನ್ನಿಂಗ್ಸ್​ ಆರಂಭಿಸಲಿದ್ದು, ರಾಹುಲ್​ 3 ಮತ್ತು ಕೊಹ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದಾರೆ.

T20 world cup
ಟಿ20 ವಿಶ್ವಕಪ್​ ಭಾರತ vs ಭಾರತ

ದುಬೈ: ಟಿ20 ವಿಶ್ವಕಪ್​ನ ಕ್ವಾರ್ಟರ್​ ಫೈನಲ್ಸ್ ಎಂದೇ ಬಿಂಬಿತವಾಗಿರುವ ಭಾರತದ ವಿರುದ್ಧದ ಪಂದ್ಯದಲ್ಲಿ ಟಾಸ್​ ಗೆದ್ದ ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್​ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ನ್ಯೂಜಿಲ್ಯಾಂಡ್​ ಕೀಪರ್​ ಸೀಫರ್ಟ್​ ಹೊರಗಿಟ್ಟು ಆ್ಯಡಂ ಮಿಲ್ನೆಯನ್ನು ಹೆಚ್ಚುವರಿ ಬೌಲರ್ ಆಗಿ ಆಯ್ಕೆ ಮಾಡಿಕೊಂಡಿದೆ. ಕೀಪಿಂಗ್ ಜವಾಬ್ದಾರಿಯನ್ನು ಕಾನ್ವೆ ನಿರ್ವಹಿಸಲಿದ್ದಾರೆ.

ಈ ಪಂದ್ಯದಲ್ಲಿ ಬೆನ್ನು ನೋವಿಗೆ ಒಳಗಾಗಿರುವ ಸೂರ್ಯಕುಮಾರ್​ ಯಾದವ್​ ಬದಲಿಗೆ ಇಶಾನ್ ಕಿಶನ್ ಅವಕಾಶ ಪಡೆದಿದ್ದಾರೆ.​ ಭುವನೇಶ್ವರ್​ ಕುಮಾರ್​ ಬದಲಿಗೆ ಶಾರ್ದುಲ್ ಠಾಕೂರ್ ಕಣಕ್ಕಿಳಿಯಲಿದ್ದಾರೆ. ಇಶಾನ್​ ರೋಹಿತ್ ಜೊತೆಗೆ ಇನ್ನಿಂಗ್ಸ್​ ಆರಂಭಿಸಲಿದ್ದು, ರಾಹುಲ್​ 3 ಮತ್ತು ಕೊಹ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದಾರೆ.

ಭಾರತ (ಪ್ಲೇಯಿಂಗ್ XI): ಇಶಾನ್ ಕಿಶನ್, ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ(ನಾಯಕ), ರಿಷಭ್ ಪಂತ್(ವಿಕೀ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ

ನ್ಯೂಜಿಲೆಂಡ್ (ಪ್ಲೇಯಿಂಗ್ XI): ಮಾರ್ಟಿನ್ ಗಪ್ಟಿಲ್, ಡೇರಿಲ್ ಮಿಚೆಲ್, ಕೇನ್ ವಿಲಿಯಮ್ಸನ್(ನಾಯಕ), ಜೇಮ್ಸ್ ನೀಶಮ್, ಡೆವೊನ್ ಕಾನ್ವೇ(ವಿಕೀ), ಗ್ಲೇನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ಆಡಮ್ ಮಿಲ್ನೆ, ಟ್ರೆಂಟ್ ಬೌಲ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.