ETV Bharat / sports

IPL ಇತಿಹಾಸದಲ್ಲಿ ಮೊದಲ 6 ಪಂದ್ಯಗಳಲ್ಲಿ ಸೋಲು.. ಮುಂಬೈ ಇಂಡಿಯನ್ಸ್ ಈ ಬೇಡದ ದಾಖಲೆ ಪಟ್ಟಿಗೆ ಸೇರಿದ 3ನೇ ತಂಡ!

author img

By

Published : Apr 16, 2022, 9:22 PM IST

15ನೇ ಆವೃತ್ತಿಯಲ್ಲಿ ಒಂದು ತಂಡವಾಗಿ ಸಂಪೂರ್ಣ ವೈಫಲ್ಯ ಅನುಭವಿಸಿರುವ ಮುಂಬೈ ತಂಡ ಐಪಿಎಲ್ ಇತಿಹಾಸದಲ್ಲಿ ಮೊದಲ 6 ಪಂದ್ಯಗಳಲ್ಲಿ ಸೋಲು ಕಂಡ 3ನೇ ತಂಡ ಎಂಬ ಬೇಡದ ದಾಖಲೆಗೆ ಪಾತ್ರವಾಗಿದೆ..

Mumbai Indians first time lost 6 consecutive losses in IPl history
ಮುಂಬೈ ಇಂಡಿಯನ್ಸ್ 6ನೇ ಸೋಲು

ಮುಂಬೈ : 2022ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಐದು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್​ ಸತತ 6ನೇ ಸೋಲು ಕಂಡಿದೆ. ಟಾಸ್​ ಗೆದ್ದರೂ ಕೂಡ ತಂಡದ ಅದೃಷ್ಟ ಮಾತ್ರ ಬದಲಾಗುತ್ತಿಲ್ಲ. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದ್ದ ಮುಂಬೈ ಇಂಡಿಯನ್ಸ್, ಈ ಬಾರಿ ದಯನೀಯ ವೈಫಲ್ಯ ಅನುಭವಿಸುತ್ತಿದೆ.

ಜಸ್ಪ್ರೀತ್ ಬುಮ್ರಾ ಹೊರತುಪಡಿಸಿ ಬೇರೆ ಯಾವ ಬೌಲರ್​ಗಳು ಪರಿಣಾಮಕಾರಿಯಾಗಿಲ್ಲ. ಸ್ಪಿನ್​ ಬೌಲರ್​ಗಳು ಸ್ಥಿರ ಪ್ರದರ್ಶನ ತೋರುತ್ತಿಲ್ಲ. ಮೇಲಾಗಿ ಸ್ಟಾರ್​ ಬ್ಯಾಟರ್​ಗಳಾದ ರೋಹಿತ್ ಶರ್ಮಾ, ಇಶಾನ್ ಕಿಶನ್ ಮತ್ತು ಕೀರನ್ ಪೊಲಾರ್ಡ್​ ನಿರೀಕ್ಷೆಗೆ ತಕ್ಕ ಪ್ರದರ್ಶನ ತೋರಲು ವಿಫಲರಾಗಿದ್ದಾರೆ.

ಒಂದು ತಂಡವಾಗಿ ಸಂಪೂರ್ಣ ವೈಫಲ್ಯ ಅನುಭವಿಸಿರುವ ಮುಂಬೈ ತಂಡ ಐಪಿಎಲ್ ಇತಿಹಾಸದಲ್ಲಿ ಮೊದಲ 6 ಪಂದ್ಯಗಳಲ್ಲಿ ಸೋಲು ಕಂಡ 3ನೇ ತಂಡ ಎಂಬ ಬೇಡದ ದಾಖಲೆಗೆ ಪಾತ್ರವಾಗಿದೆ. 2013ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್, 2019ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕೂಡ ಸತತ 6 ಪಂದ್ಯಗಳಲ್ಲಿ ಸೋಲು ಕಂಡಿದ್ದವು.

ಸ್ವತಃ ಮುಂಬೈ ಇಂಡಿಯನ್ಸ್ 2008ರಲ್ಲಿ ಸತತ 4, 2014ರಲ್ಲಿ ಸತತ 5, 2019ರಲ್ಲಿ ಮೊದಲ 6 ಪಂದ್ಯಗಳಲ್ಲಿ ಒಂದು ಗೆಲುವು ಮತ್ತು ಪ್ರಸ್ತುತ ಸತತ 6 ಸೋಲು ಕಂಡಿದೆ. ಇದರಲ್ಲಿ ಗಮನಿಸಬೇಕಾದಂತಹ ಪ್ರಮುಖ ವಿಷಯವೆಂದರೆ ಮುಂಬೈ ತಂಡ ಪ್ರತಿ ಮೆಗಾ ಹರಾಜಿನ ನಂತರ ನಡೆದ ಆವೃತ್ತಿಯಲ್ಲಿ ವೈಫಲ್ಯ ಕಂಡಿದೆ. ವಿಶೇಷವೆಂದರೆ ನಂತರದ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದೆ. 2015, 2019ರಲ್ಲಿ ಚಾಂಪಿಯನ್​ ಕೂಡ ಆಗಿದೆ.

ಇದನ್ನೂ ಓದಿ:100ನೇ ಐಪಿಎಲ್​ ಪಂದ್ಯದಲ್ಲಿ ರಾಹುಲ್ 3ನೇ ಶತಕ.. ಹಲವು ವಿಶೇಷತೆಗೆ ಒಳಗಾಯ್ತು ಕನ್ನಡಿಗನ ಸೆಂಚುರಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.