ETV Bharat / sports

100ನೇ ಐಪಿಎಲ್​ ಪಂದ್ಯದಲ್ಲಿ ರಾಹುಲ್ 3ನೇ ಶತಕ.. ಹಲವು ವಿಶೇಷತೆಗೆ ಒಳಗಾಯ್ತು ಕನ್ನಡಿಗನ ಸೆಂಚುರಿ..

author img

By

Published : Apr 16, 2022, 7:29 PM IST

ಮುಂಬೈನ ಬ್ರಬೊರ್ನ್​ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 199 ರನ್​ಗಳಿಸಿದೆ. ನಾಯಕ ಕೆ ಎಲ್ ರಾಹುಲ್ 60 ಎಸೆತಗಳಲ್ಲಿ 9 ಬೌಂಡರಿ ಮತ್ತು 5 ಸಿಕ್ಸರ್​ಗಳ ಸಹಿತ ಅಜೇಯ 103 ರನ್​ ಗಳಿಸುವ ಮೂಲಕ 15ನೇ ಆವೃತ್ತಿಯಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಎನಿಸಿಕೊಂಡರು..

IPL 2022: KL Rahul hit 3 century in IPL
ಕೆಎಲ್ ರಾಹುಲ್ ಶತಕ

ಮುಂಬೈ : ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ಅಜೇಯ ಶತಕ ಸಿಡಿಸಿದ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ ಎಲ್​ ರಾಹುಲ್ ಐಪಿಎಲ್ ಇತಿಹಾಸದಲ್ಲಿ 100ನೇ ಪಂದ್ಯದಲ್ಲಿ ಶತಕ ಸಿಡಿಸಿ ಏಕೈಕ ಬ್ಯಾಟರ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

ಮುಂಬೈನ ಬ್ರಬೊರ್ನ್​ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 199 ರನ್​ಗಳಿಸಿದೆ. ನಾಯಕ ಕೆ ಎಲ್ ರಾಹುಲ್ 60 ಎಸೆತಗಳಲ್ಲಿ 9 ಬೌಂಡರಿ ಮತ್ತು 5 ಸಿಕ್ಸರ್​ಗಳ ಸಹಿತ ಅಜೇಯ 103 ರನ್​ಗಳಿಸುವ ಮೂಲಕ 15ನೇ ಆವೃತ್ತಿಯಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಎನಿಸಿಕೊಂಡರು.

100ನೇ ಪಂದ್ಯದಲ್ಲಿ ಹೆಚ್ಚು ರನ್ ​: ಐಪಿಎಲ್​ ಇತಿಹಾಸದಲ್ಲಿ 100ಕ್ಕೂ ಹೆಚ್ಚು ಪಂದ್ಯಗಳನ್ನಾಡಿರುವ ಸಾಕಷ್ಟು ಆಟಗಾರರಿದ್ದಾರೆ. ಆದರೆ, 100ನೇ ಪಂದ್ಯದಲ್ಲಿ ಶತಕ ಸಿಡಿಸಿದ್ದು ರಾಹುಲ್ ಮಾತ್ರ. ಈ ಹಿಂದೆ ತಮ್ಮ ಶತಕದ ಪಂದ್ಯದಲ್ಲಿ ಸಿಎಸ್​ಕೆ ಪರ ಫಾಫ್​ ಡು ಪ್ಲೆಸಿಸ್​ 2021ರಲ್ಲಿ 86 ರನ್​ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಇದೀಗ ಆ ದಾಖಲೆ ರಾಹುಲ್ ಪಾಲಾಗಿದೆ. ಡೇವಿಡ್​ ವಾರ್ನರ್​(69) ಮತ್ತು ಮುರುಳಿ ವಿಜಯ್​ (59) ತಮ್ಮ ನೂರನೇ ಐಪಿಎಲ್ ಪಂದ್ಯದಲ್ಲಿ 50+ ರನ್​ಗಳಿಸಿದ ಉಳಿದ ಬ್ಯಾಟರ್​ಗಳಾಗಿದ್ದಾರೆ.

ಐಪಿಎಲ್​ನಲ್ಲಿ 3ನೇ ಶತಕ : ಐಪಿಎಲ್​ ಟೂರ್ನಿಯಲ್ಲಿ 100 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಕೆ ಎಲ್ ರಾಹುಲ್ 3 ಶತಕಗಳನ್ನು ಬಾರಿಸಿದ್ದಾರೆ. ಈ ಹಿಂದೆ 2019ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅಜೇಯ 100 ಮತ್ತು 2020ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅಜೇಯ 132 ರನ್​ ಗಳಿಸಿದ್ದರು. ವಿಶೇಷವೆಂದರೆ ಮೂರು ಶತಕ ಸಿಡಿಸಿದ ಪಂದ್ಯದಲ್ಲಿ ಅಜೇಯರಾಗಿ ಉಳಿದಿದ್ದಾರೆ.

ಲಖನೌ ಸೂಪರ್ ಜೈಂಟ್ಸ್ ಪರ ಮೊದಲ ಶತಕ : ಲಖನೌ ಸೂಪರ್ ಜೈಂಟ್ಸ್ 2022ನೇ ಐಪಿಎಲ್​ನಲ್ಲಿ ನೂತನ ತಂಡವಾಗಿ ಕಾಲಿಟ್ಟಿದೆ. ಇದೀಗ ರಾಹುಲ್​ ಫ್ರಾಂಚೈಸಿ ಪರ ಶತಕ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು. ದೀಪಕ್ ಹೂಡ ಮೊದಲ ಅರ್ಧಶತಕ ಸಿಡಿಸಿದರೆ, ಚಮೀರ ಮೊದಲ ವಿಕೆಟ್ ಪಡೆದುಕೊಂಡಿದ್ದರು.

ಇದನ್ನೂ ಓದಿ:ಕೆಕೆಆರ್​ಗೆ ಮಾಜಿ ಆಟಗಾರರೇ ವಿಲನ್ಸ್​.. ಸೋಲುಂಡ ಮೂರು ಪಂದ್ಯಗಳಲ್ಲೂ ಎಕ್ಸ್‌ಪ್ಲೇಯರ್​ಗಳೇ ಕಂಟಕ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.