ETV Bharat / sports

ಐಪಿಎಲ್​ನಲ್ಲಿ ಗರಿಷ್ಠ ಕ್ಯಾಚ್​: ದಿನೇಶ್ ಕಾರ್ತಿಕ್ ಹಿಂದಿಕ್ಕಿ ಧೋನಿ ದಾಖಲೆ

author img

By

Published : Sep 26, 2021, 6:59 PM IST

MS Dhoni record
ಎಂಎಸ್ ಧೋನಿ ದಾಖಲೆ

ಸ್ಟಂಪ್ಸ್(39) ಮತ್ತು ಕ್ಯಾಚ್​ ಸೇರಿದಂತೆ 155 ಬ್ಯಾಟರ್​ಗಳನ್ನು ಔಟ್ ಮಾಡಿರುವ ಧೋನಿ ಐಪಿಎಲ್​ನಲ್ಲಿ ಅತಿ ಹೆಚ್ಚು ಮಂದಿ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿರುವ ವಿಕೆಟ್​ ಕೀಪರ್ ಎನಿಸಿಕೊಂಡಿದ್ದಾರೆ. ದಿನೇಶ್​ ಕಾರ್ತಿಕ್​ ​146(31 ಸ್ಟಂಪ್) ಬ್ಯಾಟರ್​ಗಳನ್ನು ಔಟ್ ಮಾಡಿದ್ದಾರೆ.

ಅಬುಧಾಬಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್​ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ವಿಕೆಟ್​ ಕೀಪರ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಈಗಾಗಲೇ ಅತಿ ಹೆಚ್ಚು ಬ್ಯಾಟರ್​​ಗಳನ್ನು ಪೆವಿಲಿಯನ್​ಗಟ್ಟಿರುವ ದಾಖಲೆ ಇವರ ಹೆಸರಿನಲ್ಲೇ ಇದೆ.

ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ದಿನೇಶ್​ ಕಾರ್ತಿಕ್​ ಅವರ ಕ್ಯಾಚ್​ ಪಡೆಯುವ ಮೂಲಕ ಈ ದಾಖಲೆಗೆ ಪಾತ್ರರಾದರು. ವಿಶೇಷವೆಂದರೆ, ಈ ಹಿಂದೆ ಈ ದಾಖಲೆ ಕಾರ್ತಿಕ್(115) ಹೆಸರಿನಲ್ಲಿಯೇ ಇತ್ತು. ಕೆಕೆಆರ್​ ತಂಡ ಸೇರಿದಂತೆ ಹಲವಾರು ಫ್ರಾಂಚೈಸಿ ಪರ ಆಡಿರುವ ಕಾರ್ತಿಕ್ 189 ಇನ್ನಿಂಗ್ಸ್​ಗಳಿಂದ 115 ಕ್ಯಾಚ್​ ಪಡೆದಿದ್ದರೆ, ಧೋನಿ 207 ಇನ್ನಿಂಗ್ಸ್​ಗಳಿಂದ 116 ಕ್ಯಾಚ್​ ಪಡೆದಿದ್ದಾರೆ.

ಆದರೆ ಸ್ಟಂಪ್ಸ್(39) ಮತ್ತು ಕ್ಯಾಚ್​ ಸೇರಿದಂತೆ 155 ಬ್ಯಾಟರ್​ಗಳನ್ನು ಔಟ್ ಮಾಡಿರುವ ಧೋನಿ ಐಪಿಎಲ್​ನಲ್ಲಿ ಅತಿ ಹೆಚ್ಚು ಮಂದಿ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿರುವ ವಿಕೆಟ್​ ಕೀಪರ್ ಎನಿಸಿಕೊಂಡಿದ್ದಾರೆ. ದಿನೇಶ್​ ಕಾರ್ತಿಕ್​ ​146(31 ಸ್ಟಂಪ್) ಬ್ಯಾಟರ್​ಗಳನ್ನು ಔಟ್ ಮಾಡಿದ್ದಾರೆ.

ಇವರಿಬ್ಬರು ವಿಕೆಟ್ ಕೀಪರ್ ಮಾತ್ರ ಐಪಿಎಲ್​ನಲ್ಲಿ 100ಕ್ಕೂ ಹೆಚ್ಚು ಕ್ಯಾಚ್ ಪಡೆದಿರುವ ವಿಕೆಟ್ ಕೀಪರ್ ಆಗಿದ್ದಾರೆ. ಇವರನ್ನು ಬಿಟ್ಟರೆ ಪಾರ್ಥೀವ್ ಪಟೇಲ್ 65 ಮತ್ತು ನಮನ್​ ಓಝಾ 65 ಕ್ಯಾಚ್​, ವೃದ್ಧಿಮಾನ್ ಸಹಾ 59, ಕರ್ನಾಟಕದ ರಾಬಿನ್ ಉತ್ತಪ್ಪ 58 ಕ್ಯಾಚ್​ ಪಡೆದಿದ್ದಾರೆ.

ಇದನ್ನೂ ಓದಿ: ಸಿಎಸ್​ಕೆ ಪ್ಲೇ ಆಫ್​ ತಲುಪಿದ ಮೇಲೆ ಧೋನಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡ್ಬೇಕು : ಗಂಭೀರ್ ಸಲಹೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.