ETV Bharat / sports

ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿರುವ ಕೆಕೆಆರ್​ ನಾಯಕನಿಗೆ 12 ಲಕ್ಷ ರೂ. ದಂಡ

author img

By

Published : Apr 22, 2021, 5:07 PM IST

ಇಯಾನ್ ಮಾರ್ಗನ್​ಗೆ 12 ಲಕ್ಷ ರೂ ದಂಡ
ಇಯಾನ್ ಮಾರ್ಗನ್​ಗೆ 12 ಲಕ್ಷ ರೂ ದಂಡ

ಫಾಫ್​ ಡು ಪ್ಲೆಸಿಸ್​ ಮತ್ತು ರುತುರಾಜ್ ಗಾಯಕ್ವಾಡ್​ ಕೆಕೆಅರ್ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದ್ದರು. ಈ ಜೋಡಿಯನ್ನು ಬೆರ್ಪಡಿಸಲಾಗದ ಮಾರ್ಗನ್​ ವಿವಿಧ ಬೌಲಿಂಗ್ ಬದಲಾವಣೆ ಮಾಡುತ್ತಾ ನಿಗದಿತ ಸಮಯಕ್ಕೆ 20 ಓವರ್ ಮುಗಿಸುವಲ್ಲಿ ವಿಫಲರಾದರು. ಆದ್ದರಿಂದ ಐಪಿಎಲ್ ನೀತಿ ಸಂಹಿತೆ ಪ್ರಕಾರ 90 ನಿಮಿಷಗಳಲ್ಲಿ ಬೌಲಿಂಗ್ ಮುಗಿಸದೇ ಇರುವ ಕಾರಣಕ್ಕೆ 12 ಲಕ್ಷ ರೂ. ದಂಡವಾಗಿ ತೆತ್ತಿದ್ದಾರೆ.

ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ನಿರ್ವಹಣೆಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಇಯಾನ್ ಮಾರ್ಗನ್​ಗೆ ಐಪಿಎಲ್ ಮಂಡಳಿ 12 ಲಕ್ಷ ದಂಡ ವಿಧಿಸಿದೆ.​

ಸಿಎಸ್​ಕೆ ವಿರುದ್ಧ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​14 15ನೇ ಪಂದ್ಯದ ವೇಳೆ ಟಾಸ್ ಗೆದ್ದು, ಬೌಲಿಂಗ್ ಆಯ್ಕೆ ಮಾಡಿಕೊಂಡ ಕೋಲ್ಕತ್ತಾ ನೈಟ್ ರೈಡರ್ಸ್​ಗೆ ಧೋನಿ 221ರನ್​ಗಳ ಬೃಹತ್ ಮೊತ್ತದ ಗುರಿ ನೀಡಿತ್ತು. ಬೃಹತ್ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್​ 19.1 ಓವರ್​ಗಳಲ್ಲಿ 202 ರನ್​ಗಳಿಸಿ 18 ರನ್​ಗಳ ಸೋಲು ಕಂಡಿತು. ಆದರೆ, ಸೋಲಿನ ನೋವಿನಲ್ಲಿದ್ದ ತಂಡಕ್ಕೆ ಇದೀಗ ನಿಧಾನಗತಿ ಓವರ್​ ಮಾಡಿದ್ದಕ್ಕಾಗಿ ನಾಯಕ ಇಯಾನ್ ಮಾರ್ಗನ್​ಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.

ಫಾಫ್​ ಡು ಪ್ಲೆಸಿಸ್​ ಮತ್ತು ರುತುರಾಜ್ ಗಾಯಕ್ವಾಡ್​ ಕೆಕೆಆರ್ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದ್ದರು. ಈ ಜೋಡಿಯನ್ನು ಬೆರ್ಪಡಿಸಲಾಗದ ಮಾರ್ಗನ್​ ವಿವಿಧ ಬೌಲಿಂಗ್ ಬದಲಾವಣೆ ಮಾಡುತ್ತಾ ನಿಗದಿತ ಸಮಯಕ್ಕೆ 20 ಓವರ್ ಮುಗಿಸುವಲ್ಲಿ ವಿಫಲರಾದರು. ಆದ್ದರಿಂದ ಐಪಿಎಲ್ ನೀತಿ ಸಂಹಿತೆ ಪ್ರಕಾರ 90 ನಿಮಿಷಗಳಲ್ಲಿ ಬೌಲಿಂಗ್ ಮುಗಿಸದೇ ಇರುವ ಕಾರಣಕ್ಕೆ 12 ಲಕ್ಷ ರೂ. ದಂಡವಾಗಿ ತೆತ್ತಿದ್ದಾರೆ.

2021ರ ಐಪಿಎಲ್​ನಲ್ಲಿ ಈಗಾಗಲೆ ಸಿಎಸ್​ಕೆ ತಂಡದ ಮಹೇಂದ್ರ ಸಿಂಗ್ ಧೋನಿ ಮತ್ತು ಮುಂಬೈ ಇಂಡಿಯನ್ಸ್​ನ ರೋಹಿತ್​ ಶರ್ಮಾ ಇಬ್ಬರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಇದೇ ಕಾರಣಕ್ಕಾಗಿ ತಲಾ 12 ಲಕ್ಷ ರೂ ದಂಡ ಕಟ್ಟಿದ್ದಾರೆ.

ಐಪಿಎಲ್​ನಲ್ಲಿ ಮೊದಲ ಬಾರಿಗೆ ನಿಧಾನಗತಿ ಓವರ್​ ಮಾಡಿದರೆ ನಾಯಕನಿಗೆ 12 ಲಕ್ಷ ರೂ ದಂಡ ವಿಧಿಸಲಾಗುತ್ತದೆ. 2ನೇ ಬಾರಿ ಪುನಾರಾವರ್ತಿಸಿದರೆ, ನಾಯಕನಿಗೆ 24 ಲಕ್ಷ ಮತ್ತು ತಂಡದ ಇತರ ಸದಸ್ಯರಿಗೆ ತಲಾ 6 ಲಕ್ಷ ರೂ ದಂಡದ ಶಿಕ್ಷೆ ವಿಧಿಸಲಾಗುತ್ತದೆ. 3ನೇ ಬಾರಿಗೆ ತಪ್ಪು ಮಾಡಿದರೆ, ನಾಯಕನಿಗೆ 30 ಲಕ್ಷ ರೂ ಮತ್ತು ಒಂದು ಪಂದ್ಯ ನಿಷೇಧ, ಉಳಿದ ಆಟಗಾರರಿಗೆ 12 ಲಕ್ಷ ದಂಡದ ಶಿಕ್ಷೆ ನಿಗದಿ ಮಾಡಲಾಗಿದೆ

ಇದನ್ನು ಓದಿ:ಗಾಯಕ್ವಾಡ್ ಕಣ್ಣುಗಳು ಆತ ಒತ್ತಡದಲ್ಲಿಲ್ಲ ಎಂಬುದನ್ನ ಬಹಿರಂಗ ಪಡಿಸಿದವು: ಎಂ. ಎಸ್.​ ಧೋನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.