ETV Bharat / sports

ಕ್ರಿಕೆಟ್‌ನಲ್ಲಿ ಯೋ-ಯೋ ಟೆಸ್ಟ್ ಎಂದರೇನು? ​ಫೇಲ್ ಆಗಿ ಅವಕಾಶ ಕಳ್ಕೊಂಡ ಆಟಗಾರರು ಇವರು..

author img

By ETV Bharat Karnataka Team

Published : Aug 28, 2023, 4:02 PM IST

yo yo test
yo yo test

ವಿರಾಟ್ ಕೊಹ್ಲಿ​ ನಾಯಕತ್ವದ ಸಮಯದಿಂದ ಭಾರತ ಕ್ರಿಕೆಟ್​​ನಲ್ಲಿ ಯೋ-ಯೋ ಟೆಸ್ಟ್​ ಅನ್ನು ಆಯ್ಕೆಯ ಮಾನದಂಡವಾಗಿ ಮಾಡಲಾಯಿತು. ಈ ಟೆಸ್ಟ್​ ಫೇಲ್​ ಆಗಿ ತಂಡಕ್ಕೆ ಆಯ್ಕೆಯಾಗಲು ವಿಫಲರಾದ ಆಟಗಾರರ ಪಟ್ಟಿ ಇಲ್ಲಿದೆ...

ನವದೆಹಲಿ: ವಿರಾಟ್ ಕೊಹ್ಲಿ ಅವರ ಕ್ಯಾಪ್ಟನ್‌ಶಿಪ್‌ ಸಂದರ್ಭದಿಂದ ಭಾರತ ಕ್ರಿಕೆಟ್ ತಂಡದಲ್ಲಿ ಯೋ-ಯೋ ಟೆಸ್ಟ್ ಆರಂಭಿಸಲಾಯಿತು. ನಂತರದಲ್ಲಿ ತಂಡ ಪ್ರತಿನಿಧಿಸುವ ಆಟಗಾರರ ಫಿಟ್​ನೆಸ್​ ಬಗ್ಗೆ ಹೆಚ್ಚು ಗಮನಹರಿಸಲಾಯಿತು. ಅದರಂತೆ, ತಂಡದಲ್ಲಿ ಆಡಲು ಯೋ-ಯೋ ಟೆಸ್ಟ್‌ ಪಾಸ್​ ಆಗುವುದನ್ನು ಕಡ್ಡಾಯಗೊಳಿಸಲಾಗಿದೆ. ಆಟಗಾರರನ್ನು ಸದೃಢವಾಗಿಡಲು ಈ ನಿಯಮಗಳು ಅತಿ ಅಗತ್ಯವೆಂದು ಪರಿಗಣಿಸಲಾಗುತ್ತಿದೆ. ಇದರ ಪರಿಣಾಮ, ಭಾರತೀಯ ಆಟಗಾರರು ಫಿಟ್​ನೆಸ್​​ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ.

ಏಷ್ಯಾಕಪ್ ತಯಾರಿಯಲ್ಲಿರುವ ಭಾರತ ತಂಡದ ಆಟಗಾರರಿಗೆ ಯೋ-ಯೋ ಪರೀಕ್ಷೆ ಮಾಡಲಾಗಿದ್ದು, ಇದರಲ್ಲಿ ಶುಭ್‌ಮನ್‌ ಗಿಲ್​ ಅತಿ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. ಈ ಟೂರ್ನಿಗೆ ಆಯ್ಕೆಯಾದ ಆಟಗಾರರೆಲ್ಲರೂ ಭಾರತೀಯ ಕ್ರಿಕೆಟ್​ ಮಂಡಳಿ (ಬಿಸಿಸಿಐ) ನಿಗದಿಪಡಿಸಿದ್ದ ಅರ್ಹತಾ ಅಂಕವನ್ನು (16.5) ಸಾಧಿಸಿದ್ದಾರೆ ಎಂದು ತಿಳಿದುಬಂದಿದೆ.

ಆದರೆ, ತಂಡಕ್ಕೆ ಆಯ್ಕೆಯಾಗಿ ನಂತರ ಯೋ-ಯೋ ಪರೀಕ್ಷೆಯಲ್ಲಿ ಫೇಲ್​ ಆಗುವ ಮೂಲಕ ಸ್ಥಾನ ಕಳೆದುಕೊಂಡ ಹಲವರಿದ್ದಾರೆ. ಈ ಪೈಕಿ ಕೆಲವು ಆಟಗಾರರು ದೇಶೀ ಸೀಸನ್ ಮತ್ತು ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದರು. ಆದರೆ ನಂತರ ಫಿಟ್​ನೆಸ್​ ಕಾಪಾಡಿಕೊಳ್ಳಲು ವಿಫಲರಾಗಿದ್ದಕ್ಕೆ ಯೋ-ಯೋ ಟೆಸ್ಟ್​ನಲ್ಲಿ ಫೇಲ್​ ಆಗಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದರು. ಅಂತಹ ಆಟಗಾರರು ಇವರು.

ಅಂಬಟಿ ರಾಯುಡು
ಅಂಬಟಿ ರಾಯುಡು

ಅಂಬಟಿ ರಾಯುಡು: ಇಂಡಿಯನ್​ ಪ್ರೀಮಿಯರ್​ ಲೀಗ್ (ಐಪಿಎಲ್‌)​- 2018ರಲ್ಲಿ ಅಂಬಟಿ ರಾಯುಡು ಉತ್ತಮ ಪ್ರದರ್ಶನ ನೀಡಿದ್ದರು. ಇದರಿಂದಾಗಿ ರಾಷ್ಟ್ರೀಯ ತಂಡ ಸೇರಿಕೊಳ್ಳುವ ಅವಕಾಶವೂ ಸಿಕ್ಕಿತ್ತು. ಆದರೆ ಯೋ-ಯೋ ಟೆಸ್ಟ್​ನಲ್ಲಿ ವಿಫಲರಾದರು. ಹೀಗಾಗಿ ತಂಡದಿಂದ ಹೊರಗಿಡಲಾಯಿತು. ನಂತರ ಅವರ ಸ್ಥಾನಕ್ಕೆ ಸುರೇಶ್​ ರೈನಾ ಆಯ್ಕೆಯಾದರು. ದೇಹ ದಂಡಿಸಿ ಯೋ-ಯೋ ಪರೀಕ್ಷೆ ಪಾಸ್​ ಆದ ರಾಯುಡು 2018ರ ಏಷ್ಯಾಕಪ್​ನಲ್ಲಿ ಸ್ಥಾನ ಪಡೆದುಕೊಂಡರು.

ಸಂಜು ಸ್ಯಾಮ್ಸನ್
ಸಂಜು ಸ್ಯಾಮ್ಸನ್

ಸಂಜು ಸ್ಯಾಮ್ಸನ್: 2018ರಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಎ ತಂಡ ಪ್ರಕಟಿಸಿದಾಗ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಲಾಗಿತ್ತು. ಸ್ಯಾಮ್ಸನ್ ಯೋ-ಯೋ ಪರೀಕ್ಷೆಯಲ್ಲಿ ವಿಫಲವಾದ್ದಕ್ಕೆ ಇಶಾನ್ ಕಿಶನ್‌ಗೆ ಅವಕಾಶ ಸಿಕ್ಕಿತು. ಒಂದು ತಿಂಗಳ ಕಠಿಣ ಪರಿಶ್ರಮದ ನಂತರ ಸ್ಯಾಮ್ಸನ್ ಯೋ-ಯೋ ಪರೀಕ್ಷೆಯಲ್ಲಿ ಪಾಸ್​ ಆಗಿ ಮತ್ತೆ ಭಾರತ ಎ ತಂಡಕ್ಕೆ ಮರಳಿದ್ದರು. ಇದಾದ ಒಂದು ವರ್ಷದ ನಂತರ ಹಿರಿಯ ತಂಡ ಪ್ರತಿನಿಧಿಸಿದರು.

ಯುವರಾಜ್ ಸಿಂಗ್
ಯುವರಾಜ್ ಸಿಂಗ್

ಯುವರಾಜ್ ಸಿಂಗ್: 2017ರಲ್ಲಿ ಶ್ರೀಲಂಕಾ ವಿರುದ್ಧದ ಸರಣಿಗೂ ಮುನ್ನ ಯುವರಾಜ್ ಸಿಂಗ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಇವರು ಯೋ-ಯೋ ಪರೀಕ್ಷೆಯಲ್ಲಿ ವಿಫಲರಾಗಿದ್ದರು. ಇತರ ಆಟಗಾರರಂತೆ ಯುವಿ ಕೂಡ ಕಠಿಣ ಪ್ರರಿಶ್ರಮದಿಂದ ಟೆಸ್ಟ್​ ಪಾಸ್​ ಆಗಿ ತಂಡಕ್ಕೆ ಮರಳಿದ್ದರು.

ಮೊಹಮ್ಮದ್ ಶಮಿ
ಮೊಹಮ್ಮದ್ ಶಮಿ

ಮೊಹಮ್ಮದ್ ಶಮಿ: ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ಇದೇ ಟೆಸ್ಟ್‌ನಲ್ಲಿ ಫೇಲ್​ ಆದ ಕಾರಣ ಕೊನೆಯ ಕ್ಷಣದಲ್ಲಿ ನವದೀಪ್ ಸೈನಿ ಟೀಂ ಇಂಡಿಯಾ ಸೇರಿಕೊಂಡಿದ್ದರು. ಇದರ ನಂತರ ಶಮಿ ಒಂದು ತಿಂಗಳ ನಂತರ ಯೋ-ಯೋ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಇಂಗ್ಲೆಂಡ್ ಸರಣಿಗಾಗಿ ರಾಷ್ಟ್ರೀಯ ತಂಡಕ್ಕೆ ಮರಳಿದ್ದರು.

ವಾಷಿಂಗ್ಟನ್ ಸುಂದರ್
ವಾಷಿಂಗ್ಟನ್ ಸುಂದರ್

ವಾಷಿಂಗ್ಟನ್ ಸುಂದರ್: ಟೀಂ ಇಂಡಿಯಾದಲ್ಲಿ ಆಡಿದ್ದ ಆಫ್-ಸ್ಪಿನ್ನರ್, ಆಲ್-ರೌಂಡರ್ ವಾಷಿಂಗ್ಟನ್ ಸುಂದರ್ 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20ಗೆ ತಂಡಕ್ಕೆ ಆಯ್ಕೆಯಾಗುವ ಮೊದಲು ಯೋ-ಯೋ ಟೆಸ್ಟ್‌ನಲ್ಲಿ ವಿಫಲರಾಗಿದ್ದರು. ಇದರ ನಂತರ ಫಿಟ್​ನೆಸ್ ಸಾಧಿಸಿ ಶ್ರೀಲಂಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದರು.

ಇದನ್ನೂ ಓದಿ: ಕರ್ನಾಟಕ ತೊರೆದ ಕರುಣ್ ನಾಯರ್.. ದೇಶೀಯ ಋತುವಿನಲ್ಲಿ ವಿದರ್ಭ ಪ್ರತಿನಿಧಿಸಲಿದ್ದಾರೆ ಬಲಗೈ ಬ್ಯಾಟರ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.