ETV Bharat / sports

ಭಾರತ ತಂಡವನ್ನು ಕೊಹ್ಲಿ ಹಿಂದೆ ತಿರುಗಿ ನೋಡದ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ: ರೋಹಿತ್ ಶರ್ಮಾ ಶ್ಲಾಘನೆ

author img

By

Published : Dec 13, 2021, 3:25 PM IST

ನಾವು ಅವರ ನಾಯಕತ್ವದಲ್ಲಿ ಉತ್ತಮ ಆಟ ಆಡಿದ್ದೇವೆ. ನಾನು ಅವರ ನಾಯಕತ್ವದಲ್ಲಿ ಸಾಕಷ್ಟು ಕ್ರಿಕೆಟ್​ ಆಡಿದ್ದೇನೆ ಮತ್ತು ಪ್ರತಿಯೊಂದು ಕ್ಷಣವನ್ನು ಆನಂದಿಸಿದ್ದೇನೆ. ಈಗಲೂ ಅದನ್ನೇ ಮಾಡುತ್ತೇನೆ ಎಂದು ರೋಹಿತ್​ ಹೇಳಿದ್ದಾರೆ.

Rohit Sharma virat kohli
ರೋಹಿತ್ ಶರ್ಮಾ ವಿರಾಟ್​ ಕೊಹ್ಲಿ

ನವದೆಹಲಿ: ವಿರಾಟ್​ ಕೊಹ್ಲಿ ಕಳೆದ 5 ವರ್ಷಗಳಿಂದ ಭಾರತ ತಂಡವನ್ನು ಮುಂದೆ ನಿಂತು ನಡೆಸಿದ್ದಾರೆ. ಇಂದು ಭಾರತ ತಂಡ ಹಿಂದೆ ತಿರುಗಿ ನೋಡದಂತಹ ಪರಿಸ್ಥಿತಿಯಲ್ಲಿದೆ ಎಂದರೆ ಅದರಲ್ಲಿ ಅವರ ಪಾತ್ರ ಮಹತ್ವವಾಗಿದೆ ಎಂದು ಭಾರತ ತಂಡದ ನೂತನ ಸೀಮಿತ ಓವರ್​ಗಳ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

"ಅವರು (ಕೊಹ್ಲಿ) ತಂಡವನ್ನು ಹಿಂತಿರುಗಿ ನೋಡದ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಈ ಐದು ವರ್ಷಗಳಲ್ಲಿ ನಾವು ಪ್ರತಿ ಬಾರಿ ಮೈದಾನಕ್ಕೆ ಕಾಲಿಟ್ಟಾಗಲೂ ಅವರು ತಂಡವನ್ನು ಮುಂದೆ ನಿಂತು ಮುನ್ನಡೆಸಿದ್ದಾರೆ. ಅವರಲ್ಲಿ ಪ್ರತಿಯೊಂದು ಪಂದ್ಯವನ್ನು ಗೆಲ್ಲುವುದಕ್ಕೆ ಶ್ರದ್ಧೆ ಮತ್ತು ದೃಢ ನಿರ್ಣಯವಿತ್ತು ಮತ್ತು ಅದು ಇಡೀ ತಂಡಕ್ಕೆ ಸಂದೇಶವಾಗಿತ್ತು" ಎಂದು ರೋಹಿತ್ ಬಿಸಿಸಿಐ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿ ವಿಡಿಯೋದಲ್ಲಿ ಹೇಳಿದ್ದಾರೆ.

ನಾವು ಅವರ ನಾಯಕತ್ವದಲ್ಲಿ ಉತ್ತಮ ಆಟ ಆಡಿದ್ದೇವೆ. ನಾನು ಅವರ ನಾಯಕತ್ವದಲ್ಲಿ ಸಾಕಷ್ಟು ಕ್ರಿಕೆಟ್​ ಆಡಿದ್ದೇನೆ ಮತ್ತು ಪ್ರತಿಯೊಂದು ಕ್ಷಣವನ್ನು ಆನಂದಿಸಿದ್ದೇನೆ. ಈಗಲೂ ಅದನ್ನೇ ಮಾಡುತ್ತೇನೆ ಎಂದು ರೋಹಿತ್​ ಹೇಳಿದ್ದಾರೆ.

ನಾವು ತಂಡವಾಗಿ ಇನ್ನು ಉತ್ತಮವಾಗುತ್ತಿರಬೇಕು ಮತ್ತು ವೈಯಕ್ತಿಯವಾಗಿಯೂ ಕೂಡ ಉತ್ತಮವಾಗಿರುತ್ತಲೇ ಇರಬೇಕು. ಇದು ನನಗೆ ಮಾತ್ರವಲ್ಲದೆ ಇಡೀ ತಂಡ ಯಾವಾಗಲೂ ಉತ್ತಮಗೊಳ್ಳುವುದರ ಕಡೆ ಗಮನ ನೀಡಿ ಮುಂದುವರಿಯಬೇಕಾಗಿದೆ ಎಂದು ಅವರು ಹೇಳಿದ್ದಾರೆ. ಇನ್ನು ಭಾರತ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿರುವುದು ನನಗೆ ಸಿಕ್ಕಿರುವ ದೊಡ್ಡ ಗೌರವ. ಈ ಪಯಣದಲ್ಲಿ ಸಾಗಲು ಉತ್ಸಾಹದಿಂದ ಕಾಯುತ್ತಿದ್ದೇನೆ ಎಂದಿದ್ದಾರೆ.

ರೋಹಿತ್ ಶರ್ಮಾ ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಜೊತೆಗೆ ಟೆಸ್ಟ್​ ತಂಡದಲ್ಲೂ ವಿರಾಟ್​ ಕೊಹ್ಲಿಗೆ ಉಪನಾಯಕನಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಇದನ್ನೂ ಓದಿ:'ತಂಡ ಕಟ್ಟುವುದು ತುಂಬಾ ಕಷ್ಟ, ಆದರೆ ನಾಶ ಮಾಡುವುದು ಸುಲಭ': ನಾಯಕತ್ವ ಬದಲಾವಣೆಗೆ ಮಾಜಿ ಆಟಗಾರ ತರಾಟೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.