ETV Bharat / sports

ಆಂಗ್ಲರ ನೆಲದಲ್ಲಿ ಕನ್ನಡಿಗನ ಆರ್ಭಟ! ಕೌಂಟಿ ಚಾಂಪಿಯನ್‌ಶಿಪ್​ ಕ್ರಿಕೆಟ್​ನಲ್ಲಿ ಶತಕ ಸಿಡಿಸಿದ ಕರುಣ್​ ನಾಯರ್​

author img

By PTI

Published : Sep 21, 2023, 12:07 PM IST

ಕರುಣ್​ ನಾಯರ್​
ಕರುಣ್​ ನಾಯರ್​

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್‌ಶಿಪ್ ಡಿವಿಷನ್ ಒನ್ ಕ್ರಿಕೆಟ್​ನಲ್ಲಿ ಕರುಣ್​ ನಾಯರ್​ ಶತಕದಾಟವಾಡಿದರು.

ಲಂಡನ್​: ಇಲ್ಲಿನ ಓವಲ್‌ನಲ್ಲಿ ನಡೆದ ಕೌಂಟಿ ಚಾಂಪಿಯನ್‌ಶಿಪ್ ಡಿವಿಷನ್ ಒನ್ ಕ್ರಿಕೆಟ್​ ಪಂದ್ಯದಲ್ಲಿ ಕನ್ನಡಿಗ ಕರುಣ್ ನಾಯರ್ ಸರ್ರೆ ವಿರುದ್ಧದ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿದರು. ಆಂಗ್ಲರ ನೆಲದಲ್ಲಿ ನಾರ್ಥಾಂಪ್ಟನ್‌ಶೈರ್‌ ಪರ ಆಡುತ್ತಿರುವ ನಾಯರ್,​ ಅಜೇಯ 144 ರನ್​ಗಳಿಸಿ ಪರಾಕ್ರಮ ಮೆರೆದರು.

ಬುಧವಾರ ಎರಡನೇ ದಿನದಾಟವನ್ನು 51 ರನ್​ಗಳಿಂದ ಪುನರಾರಂಭಿಸಿದ ನಾಯರ್​ 238 ಎಸೆತಗಳಲ್ಲಿ 22 ಬೌಂಡರಿ ಮತ್ತು ಎರಡು ಸಿಕ್ಸರ್‌ಸಮೇತ 144 ರನ್ ಕಲೆಹಾಕಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ನಾಯರ್​ ಬ್ಯಾಟಿಂಗ್​ಗೆ ಆಗಮಿಸಿದ ವೇಳೆ ನಾರ್ಥಾಂಪ್ಟನ್‌ಶೈರ್‌ 151 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.

  • HUNDRED FOR KARUN NAIR....!!!

    Northamptonshire under big trouble with 151 for 6, against an attack led by Roach - Karun smashed a brilliant hundred in his 2nd match of the season. pic.twitter.com/JcJKDxu9bb

    — Johns. (@CricCrazyJohns) September 20, 2023 " class="align-text-top noRightClick twitterSection" data=" ">

ಕ್ರೀಸ್​ಗಿಳಿದ ನಾಯರ್,​ ಟಾಮ್ ಟೇಲರ್ ಅವರೊಂದಿಗೆ 114 ರನ್​ಗಳ ಆಕರ್ಷಕ ಜೊತೆಯಾಟವಾಡಿ ತಂಡದ ಮೊತ್ತ ಹೆಚ್ಚಿಸತೊಡಗಿದರು. 66 ರನ್​ಗಳಿಸಿದ ಟಾಮ್​ ಓವರ್‌ಟನ್ ಅವರು ಟೇಲರ್​ಎಸೆತದಲ್ಲಿ ವಿಕೆಟ್​ ಒಪ್ಪಿಸಿ ಹೊರನಡೆದರು. ಸಮಯೋಚಿತ ಆಟ ಮುಂದುವರೆಸಿದ ನಾಯರ್​​ ಸೊಗಸಾದ ಶತಕ ಪೂರೈಸುವ ಮೂಲಕ ತಂಡದ ಸ್ಕೋರ್​ ಅನ್ನು 351ಕ್ಕೆ ಕೊಂಡೊಯ್ದರು. ಆ ಬಳಿಕ ಮಳೆಯಿಂದಾಗಿ ಎರಡನೇ ದಿನದಾಟ ನಿಲ್ಲಿಸಲಾಯಿತು.

ಸದ್ಯ ತಂಡ 9 ವಿಕೆಟ್​ ನಷ್ಟಕ್ಕೆ 351 ರನ್​ ಪೇರಿಸಿದೆ. ಕಳೆದ ವಾರ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ವಾರ್ವಿಕ್‌ಷೈರ್ ವಿರುದ್ಧ ಪಂದ್ಯದಲ್ಲಿ 31ರ ಹರೆಯದ ನಾಯರ್​ ಅರ್ಧಶತಕ ಸಿಡಿಸಿ ಮಿಂಚಿದ್ದರು. ಈ ಪಂದ್ಯದಲ್ಲಿ​ ಒಟ್ಟು 78 ರನ್​ಗಳನ್ನು ಅವರು ಕಲೆ ಹಾಕಿದ್ದರು.

ಇಂಗ್ಲೆಂಡ್​ ವಿರುದ್ಧ ನಾಯರ್​ 'ಟ್ರಿಪಲ್​ ಸೆಂಚ್ಯುರಿ': ಕರುಣ್ ನಾಯರ್ ಭಾರತ ಪರ ಈವರೆಗೆ ಆರು ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. 2016ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ತ್ರಿಶತಕ (303*) ಸಿಡಿಸಿ ಅಬ್ಬರಿಸಿದ್ದರು. ತಮ್ಮ ಕೊನೆಯ ಟೆಸ್ಟ್ 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ್ದರು. ನಂತರ ಕಳಪೆ ಪ್ರದರ್ಶನದಿಂದಾಗಿ ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯವಲ್ಲಿ ವಿಫಲರಾದರು. ಎರಡು ಏಕದಿನ ಪಂದ್ಯವಾಡಿರುವ ನಾಯರ್​ ಗರಿಷ್ಠ ಸ್ಕೋರ್‌ 39 ರನ್ ಆಗಿದೆ.​ 76 ಐಪಿಎಲ್​ ಪಂದ್ಯಗಳನ್ನು ಆಡಿರುವ ನಾಯರ್ 1,496 ರನ್​ಗಳನ್ನು ಕಲೆಹಾಕಿದ್ದಾರೆ. 83 ಇವರ ಹೈಸ್ಕೋರ್​ ಆಗಿದೆ. ಇತ್ತೀಚೆಗೆ ನಡೆದ ಮಹಾರಾಜ ಟ್ರೋಫಿಯಲ್ಲೂ ನಾಯರ್​ ಉತ್ತಮ ಪ್ರದರ್ಶನ ತೋರುವ ಮೂಲಕ ತಾವು ಫಾರ್ಮ್​ಗೆ ಕಮ್‌ಬ್ಯಾಕ್​ ಮಾಡಿರುವುದಾಗಿ ತೋರಿಸಿದ್ದಾರೆ.

ಇದನ್ನೂ ಓದಿ: ಇಂಪಾಸಿಬಲ್ ನಹೀ ಯೇ ಸಪ್ನಾ, 3 ಕಾ ಡ್ರೀಮ್ ಹೈ ಅಪ್ನಾ.. ವಿಶ್ವಕಪ್​ ಜರ್ಸಿ ಅನಾವರಣಕ್ಕೆ ಉತ್ಸಾಹಭರಿತ ಹಾಡು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.