ETV Bharat / sports

ಕೇವಲ 11 ರನ್​ ಗಳಿಸಿದರೆ ಕೊಹ್ಲಿ ವಿಶ್ವದಾಖಲೆ ಗಪ್ಟಿಲ್ ಪಾಲು

author img

By

Published : Nov 18, 2021, 8:29 PM IST

Updated : Nov 19, 2021, 7:47 PM IST

Just 11 runs need for Martin Guptill to become leading run-scorer in T20Is
ಮಾರ್ಟಿನ್ ಗಪ್ಟಿಲ್- ವಿರಾಟ್​ ಕೊಹ್ಲಿ

ಭಾರತ ತಂಡದ ಮಾಜಿ ನಾಯಕ ವಿರಾಟ್​ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 95 ಪಂದ್ಯಗಳನ್ನಾಡಿದ್ದು 52ರ ಸರಾಸರಿಯಲ್ಲಿ 29 ಅರ್ಧಶತಕಗಳ ಸಹಿತ 3227 ರನ್​ಗಳಿಸಿದ್ದಾರೆ.

ರಾಂಚಿ(ಜಾರ್ಖಂಡ್‌): ಭಾರತದ ವಿರುದ್ಧ ರಾಂಚಿಯಲ್ಲಿ ಶುಕ್ರವಾರ ನಡೆಯಲಿರುವ 2ನೇ ಟಿ20 ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ನ ಆರಂಭಿಕ ಮಾರ್ಟಿನ್ ಗಪ್ಟಿಲ್​ ಕೇವಲ 11 ರನ್​ಗಳಿಸಿದರೆ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಹೆಚ್ಚು ರನ್​ಗಳಿಸಿ ಬ್ಯಾಟರ್​ ​ಎನಿಸಿಕೊಳ್ಳಲಿದ್ದಾರೆ.

ಭಾರತ ತಂಡದ ಮಾಜಿ ನಾಯಕ ವಿರಾಟ್​ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 95 ಪಂದ್ಯಗಳನ್ನಾಡಿದ್ದು 52ರ ಸರಾಸರಿಯಲ್ಲಿ 29 ಅರ್ಧಶತಕಗಳ ಸಹಿತ 3227 ರನ್​ ಸಂಪಾದಿಸಿದ್ದಾರೆ. ನಾಳೆ ನಡೆಯುವ ಪಂದ್ಯದಲ್ಲಿ ಮಾರ್ಟಿನ್ ಗಪ್ಟಿಲ್​ ಕೇವಲ 11 ರನ್ ​ಗಳಿಸಿದರೆ ಕೊಹ್ಲಿ ಹಿಂದಿಕ್ಕಿ ಟಿ20 ಕ್ರಿಕೆಟ್​ನ ಸಾರ್ವಕಾಲಿಕ ಗರಿಷ್ಠ ಸ್ಕೋರರ್​ ಆಗಲಿದ್ದಾರೆ.

ಮಾರ್ಟಿನ್ ಗಪ್ಟಿಲ್ 110 ಪಂದ್ಯಗಳನ್ನಾಡಿದ್ದು 3217 ರನ್​ಗಳಿಸಿದ್ದಾರೆ. ಗಪ್ಟಿಲ್​ 19 ಅರ್ಧಶತಕ ಮತ್ತು 2 ಶತಕ ಬಾರಿಸಿದ್ದಾರೆ. 3ನೇ ಸ್ಥಾನದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಇದ್ದು, ಅವರು 117 ಪಂದ್ಯಗಳಿಂದ 3096 ರನ್​ ಗಳಿಸಿದ್ದಾರೆ. ಅವರ ಖಾತೆಯಲ್ಲಿ 24 ಅರ್ಧಶತಕ ಮತ್ತು 4 ಶತಕಗಳು ಸೇರಿವೆ.

ಆಸ್ಟ್ರೇಲಿಯಾ ನಾಯಕ ಆ್ಯರೋನ್ ಫಿಂಚ್​ 83 ಪಂದ್ಯಗಳಿಂದ 2608 ಐರ್ಲೆಂಡ್​ನ ಪಾಲ್ ಸ್ಟಿರ್ಲಿಂಗ್ 92 ಪಂದ್ಯಗಳಿಂದ 2570, ಡೇವಿಡ್ ವಾರ್ನರ್​ 88 ಪಂದ್ಯಗಳಿಂದ 2554, ಪಾಕಿಸ್ತಾನ ಮೊಹಮ್ಮದ್ ಹಫೀಜ್ 119 ಪಂದ್ಯಗಳಿಂದ 2514, ಬಾಬರ್​ ಅಜಮ್ 67 ಪಂದ್ಯಗಳಿಂದ 2507 ರನ್ ​ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ:ಎರಡು ದೇಶಗಳ ಪರ ಆಡಿ ಅರ್ಧಶತಕ ಬಾರಿಸಿ ದಾಖಲೆ ನಿರ್ಮಿಸಿದ ಕಿವೀಸ್ ಬ್ಯಾಟರ್​

Last Updated :Nov 19, 2021, 7:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.