ETV Bharat / sports

ಇಂಡಿಯಾ ವಿರುದ್ಧದ ODI ಸರಣಿಗೆ ಬಲಿಷ್ಠ ಕೆರಿಬಿಯನ್​​ ತಂಡ ಪ್ರಕಟ.. 18 ತಿಂಗಳ ಬಳಿಕ ಹೋಲ್ಡರ್​ಗೆ ಚಾನ್ಸ್​

author img

By

Published : Jul 18, 2022, 4:19 PM IST

India vs West Indies
India vs West Indies

ಭಾರತ ವಿರುದ್ಧದ ಏಕದಿನ ಸರಣಿಗೋಸ್ಕರ ವೆಸ್ಟ್ ಇಂಡೀಸ್ ತಂಡ ಪ್ರಕಟಗೊಂಡಿದ್ದು, 13 ಸದಸ್ಯರ ಬಳಗದಲ್ಲಿ ಆಲ್​ರೌಂಡರ್ ಜೇಸನ್ ಹೋಲ್ಡರ್ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ.

ಪೊರ್ಟ್​​ ಆಫ್​ ಸ್ಪೇನ್​: ಟೀಂ ಇಂಡಿಯಾ ವಿರುದ್ಧ ನಡೆಯಲಿರುವ ಮೂರು ಏಕದಿನ ಪಂದ್ಯಗಳ ಸರಣಿಗೋಸ್ಕರ ವೆಸ್ಟ್​ ಇಂಡೀಸ್ ತಂಡ ಪ್ರಕಟಗೊಂಡಿದೆ. 13 ಆಟಗಾರರ ಬಳಗದಲ್ಲಿ ಅನುಭವಿ ಆಲ್​ರೌಂಡರ್ ಜೇಸನ್​ ಹೋಲ್ಡರ್​ಗೆ ಅವಕಾಶ ನೀಡಲಾಗಿದೆ. ಈ ಮೂಲಕ 18 ತಿಂಗಳ ಬಳಿಕ ಏಕದಿನ ತಂಡಕ್ಕೆ ಕಮ್​​ಬ್ಯಾಕ್ ಮಾಡಿದ್ದಾರೆ.

ಜುಲೈ 22ರಿಂದ ಉಭಯ ತಂಡಗಳ ನಡುವೆ ಏಕದಿನ ಸರಣಿ ಆರಂಭಗೊಳ್ಳಲಿದ್ದು, ನಾಯಕನಾಗಿ ನಿಕೋಲಸ್ ಪೂರನ್​ ಹಾಗೂ ಉಪನಾಯಕನಾಗಿ ಶಾಯ್ ಹೋಪ್​​ ತಂಡ ಮುನ್ನಡೆಸಲಿದ್ದಾರೆ. ತಂಡದಿಂದ ಆ್ಯಂಡರ್ಸನ್ ಫಿಲಿಪ್ ಹಾಗೂ ರೊಮಾರಿಯೊ ಶೆಫರ್ಡ್​ಗೆ ಕೈಬಿಡಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಬಾಂಗ್ಲಾದೇಶದ ವಿರುದ್ಧ ನಡೆದ ಟಿ-20 ಸರಣಿಯಲ್ಲಿ ವೆಸ್ಟ್ ಇಂಡೀಸ್ 3-0 ಅಂತರದಿಂದ ಸೋಲು ಕಂಡು ಮುಖಭಂಗಕ್ಕೊಳಗಾಗಿದೆ.

India vs West Indies
18 ತಿಂಗಳ ಬಳಿಕ ಹೋಲ್ಡರ್​ಗೆ ತಂಡದಲ್ಲಿ ಚಾನ್ಸ್​

ವೆಸ್ಟ್​ ಇಂಡೀಸ್​ ತಂಡ ಇಂತಿದೆ: ನಿಕೋಲಸ್ ಪೂರನ್(ಕ್ಯಾಪ್ಟನ್), ಶಾಯ್ ಹೋಪ್​(ಉಪನಾಯಕ), ಶಮ್ರಾ ಬ್ರೂಕ್ಸ್​, ಕೆಸಿ ಕಾರ್ಟಿ,ಜೇಸನ್ ಹೋಲ್ಡರ್​, ಅಕಿಲ್​ ಹೊಸೈನ್​, ಅಲ್ಜಾರಿ ಜೋಸೆಫ್​, ಬ್ರೆಂಡನ್ ಕಿಂಗ್, ಕೈಲ್​ ಮೈಯರ್ಸ್​, ಗುಡಕೇಶಿ ಮೋತಿ, ಕೀಮೋ ಪಾಲ್​, ರೋವ್​ಮನ್ ಪೊವೆಲ್​, ಜೇಡನ್​ ಸಿಲ್ಸ್​

ಮೀಸಲು ಆಟಗಾರರು: ರೊಮಾರಿಯೊ ಶೆಫರ್ಡ್, ಹೇಡನ್​ ವಾಲ್ಷ್​

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೋಸ್ಕರ ಈಗಾಗಲೇ ಟೀಂ ಇಂಡಿಯಾ ಪ್ರಕಟಗೊಂಡಿದ್ದು, ತಂಡವನ್ನ ಶಿಖರ್ ಧವನ್ ಮುನ್ನಡೆಸಲಿದ್ದು, ಉಪನಾಯಕನಾಗಿ ರವೀಂದ್ರ ಜಡೇಜಾ ಆಯ್ಕೆಯಾಗಿದ್ದಾರೆ. ಈ ಸರಣಿಯಲ್ಲಿ ರೋಹಿತ್ ಶರ್ಮಾ, ಬುಮ್ರಾ, ಕೊಹ್ಲಿ, ಪಂತ್ ಸೇರಿದಂತೆ ಕೆಲ ಹಿರಿಯ ಪ್ಲೇಯರ್ಸ್​​ಗೆ ವಿಶ್ರಾಂತಿ ನೀಡಲಾಗಿದೆ.

ಇದನ್ನೂ ಓದಿರಿ: ವೆಸ್ಟ್​ ಇಂಡೀಸ್​ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ.. ಶಿಖರ್ ಧವನ್ ಕ್ಯಾಪ್ಟನ್​​

ಭಾರತ ಏಕದಿನ ತಂಡ ಇಂತಿದೆ: ಶಿಖರ್ ಧವನ್​(ಕ್ಯಾಪ್ಟನ್), ಋತುರಾಜ್ ಗಾಯಕ್ವಾಡ್​, ಶುಬ್ಮನ್ ಗಿಲ್​, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್​, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್(ವಿ.ಕೀ), ಸಂಜು ಸ್ಯಾಮ್ಸನ್​(ವಿ.ಕೀ), ರವೀಂದ್ರ ಜಡೇಜಾ(ಉಪನಾಯಕ), ಶಾರ್ದೂಲ್ ಠಾಕೂರ್. ಯಜುವೇಂದ್ರ ಚಹಲ್​​, ಅಕ್ಸರ್ ಪಟೇಲ್​, ಆವೇಶ್ ಖಾನ್​, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್​, ಅರ್ಷದೀಪ್ ಸಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.