ETV Bharat / sports

ಇಂಗ್ಲೆಂಡ್ vs ನ್ಯೂಜಿಲ್ಯಾಂಡ್: ಅಲಸ್ಟೈರ್ ಕುಕ್ ದಾಖಲೆ ಮುರಿದ ಜೇಮ್ಸ್​ ಆ್ಯಂಡರ್ಸನ್

author img

By

Published : Jun 10, 2021, 5:22 PM IST

ಅಲಸ್ಟೈರ್ ಕುಕ್ ಇಂಗ್ಲೆಂಡ್ ಪರ 161 ಟೆಸ್ಟ್​ ಪಂದ್ಯಗಳನ್ನಾಡಿದ್ದಾರೆ. ಅವರು 33 ಶತಕಗಳ ಸಹಿತ 12,472 ರನ್ ಗಳಿಸಿದ್ದಾರೆ. ಇನ್ನು ಜೇಮ್ಸ್​ ಆ್ಯಂಡರ್ಸನ್​ 162 ಪಂದ್ಯಗಳನ್ನಾಡುವ ಮೂಲಕ ಇಂಗ್ಲೆಂಡ್ ಪರ ಗರಿಷ್ಠ ಟೆಸ್ಟ್ ಪಂದ್ಯಗಳಲ್ಲಿ ಪ್ರತಿನಿಧಿಸಿ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. ಅವರು 616 ವಿಕೆಟ್​ ಪಡೆದಿರುವ ವಿಶ್ವದ ಏಕೈಕ ವೇಗದ ಬೌಲರ್ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ.

ಜೇಮ್ಸ್​ ಆ್ಯಂಡರ್ಸನ್​
ಜೇಮ್ಸ್​ ಆ್ಯಂಡರ್ಸನ್​

ಬರ್ಮಿಂಗ್​ಹ್ಯಾಮ್: ವೇಗದ ಬೌಲರ್​ ಜೇಮ್ಸ್​ ಆ್ಯಂಡರ್ಸನ್​ ಇಂಗ್ಲೆಂಡ್ ತಂಡದ ಪರ ಗರಿಷ್ಠ ಟೆಸ್ಟ್​ ಪಂದ್ಯಗಳನ್ನಾಡಿದ ದಾಖಲೆಗೆ ಪಾತ್ರರಾಗಿದ್ದಾರೆ. ನ್ಯೂಜಿಲ್ಯಾಂಡ್​ ವಿರುದ್ಧದ 2ನೇ ಟೆಸ್ಟ್​ ಪಂದ್ಯದಲ್ಲಿ 11ರ ಬಳಗದಲ್ಲಿ ಅವಕಾಶ ಪಡೆಯುವ ಮೂಲಕ ಲೆಜೆಂಡರಿ ಇಂಗ್ಲಿಷ್​ ಬ್ಯಾಟ್ಸ್​ಮನ್ ಅಲಸ್ಟೈರ್ ಕುಕ್​ ಅವರನ್ನು ಹಿಂದಿಕ್ಕಿದ್ದಾರೆ.

ಅಲಸ್ಟೈರ್ ಕುಕ್ ಇಂಗ್ಲೆಂಡ್ ಪರ 161 ಟೆಸ್ಟ್​ ಪಂದ್ಯಗಳನ್ನಾಡಿದ್ದಾರೆ. ಅವರು 33 ಶತಕಗಳ ಸಹಿತ 12,472 ರನ್ ಗಳಿಸಿದ್ದಾರೆ. ಇನ್ನು ಜೇಮ್ಸ್​ ಆ್ಯಂಡರ್ಸನ್​ 162 ಪಂದ್ಯಗಳನ್ನಾಡುವ ಮೂಲಕ ಇಂಗ್ಲೆಂಡ್ ಪರ ಗರಿಷ್ಠ ಟೆಸ್ಟ್ ಪಂದ್ಯಗಳಲ್ಲಿ ಪ್ರತಿನಿಧಿಸಿ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. ಅವರು 616 ವಿಕೆಟ್​ ಪಡೆದಿರುವ ವಿಶ್ವದ ಏಕೈಕ ವೇಗದ ಬೌಲರ್ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ.

ಆ್ಯಂಡರ್ಸನ್(163)​ ಟೆಸ್ಟ್​ ಕ್ರಿಕೆಟ್​ನಲ್ಲಿ ಗರಿಷ್ಠ ಪಂದ್ಯಗಳನ್ನಾಡಿರುವ ವೇಗದ ಬೌಲರ್ ಆಗಿದ್ದಾರೆ. ಇಂಗ್ಲೆಂಡ್​ ಸ್ಟುವರ್ಟ್​ ಬ್ರಾಡ್​(148), ವಿಂಡೀಸ್​ನ ಕರ್ಟ್ನಿ ವಾಲ್ಶ್​(132), ಭಾರತದ ಕಪಿಲ್ ದೇವ್​(131) ಆಸ್ಟ್ರೇಲಿಯಾದ ಗ್ಲೇನ್ ಮೆಕ್​ಗ್ರಾತ್​ 124 ಟೆಸ್ಟ್​ ಪಂದ್ಯಗಳನ್ನಾಡಿದ್ದಾರೆ.

ಅಲ್ಲದೇ ಆ್ಯಂಡರ್ಸನ್ ಈ ಪಂದ್ಯದಲ್ಲಿ 2 ವಿಕೆಟ್​ ಪಡೆದರೆ ಭಾರತ ತಂಡದ ಲೆಜೆಂಡರಿ ಸ್ಪಿನ್ನರ್ ಅನಿಲ್ ಕುಂಬ್ಳೆ(619) ದಾಖಲೆಯನ್ನು ಹಿಂದಿಕ್ಕಲಿದ್ದಾರೆ. ​ಶ್ರೀಲಂಕಾದ ಮುತ್ತಯ್ಯ ಮುರಳೀದರನ್​(800) ಮತ್ತು ಆಸ್ಟ್ರೇಲಿಯಾದ ಶೇನ್ ವಾರ್ನ್​(708) ವಿಕೆಟ್ ಪಡೆದು ಮೊದಲೆರಡು ಸ್ಥಾನದಲ್ಲಿದ್ದಾರೆ. ​

ಇದನ್ನು ಓದಿ:ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್: 5 ಪೀಳಿಗೆಯ 10 ದಿಗ್ಗಜರಿಗೆ ಹಾಲ್ ಆಫ್​ ಫೇಮ್ ಗೌರವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.