ETV Bharat / sports

ಇಶಾನ್ ಕಿಶನ್ ಅಷ್ಟು ವೇತನಕ್ಕೆ ಯೋಗ್ಯರಲ್ಲ, ಜೋಫ್ರಾ ಮೇಲೆ ಹಣ ಹೂಡಿದ್ದು ವ್ಯರ್ಥ: ಶೇನ್​ ವಾಟ್ಸನ್ ಟೀಕೆ

author img

By

Published : Apr 16, 2022, 10:39 PM IST

Ishan Kishan not worth for 15 crore
ಇಶಾನ್ ಕಿಶನ್ 15 ಕೋಟಿ ರೂ

ಇಶಾನ್​ ಕಿಶನ್​ಗೆ 15.25 ಕೋಟಿ ರೂ ನೀಡಿದ್ದು, ಮತ್ತು ಭುಜದ ನೋವಿನಿಂದ ಬಳಲುತ್ತಿರುವ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್​ ಐಪಿಎಲ್​ ಆಡುವುದು ಖಚಿತವಲ್ಲದಿದ್ದರು 8 ಕೋಟಿ ರೂ ನೀಡಿ ಖರೀದಿಸಿದೆ. ಹಾಗಾಗಿ ಪ್ರಸ್ತುತ ಸರಿಯಾದ ತಂಡದ ಸಂಯೋಜನೆ ಮಾಡಲಾಗದೆ ಸತತ 6 ಪಂದ್ಯಗಳಲ್ಲಿ ಸೋಲು ಕಂಡು ವೈಫಲ್ಯ ಅನುಭವಿಸುತ್ತಿದೆ.

ನವದೆಹಲಿ: ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಯುವ ಆರಂಭಿಕ ಬ್ಯಾಟರ್​ ಇಶಾನ್ ಕಿಶನ್​ಗೆ 15 ಕೋಟಿ ರೂಪಾಯಿಗಿಂತ ಹೆಚ್ಚಿನ ಹಣ ನೀಡಿ ಖರೀಸಿದ್ದಕ್ಕೆ ಆಸ್ಟ್ರೇಲಿಯಾದ ಮಾಜಿ ಆಲ್​ರೌಂಡರ್​ ಟೀಕಿಸಿದ್ದು, ಯುವ ಆರಂಭಿಕ ಬ್ಯಾಟರ್​ ಫ್ರಾಂಚೈಸಿ ನೀಡಿದಷ್ಟು ವೇತನಕ್ಕೆ ಯೋಗ್ಯರಲ್ಲ ಎಂದು ಅಭಿಪ್ರಾಯ​ ಪಟ್ಟಿದ್ದಾರೆ.

ಇಶಾನ್​ ಕಿಶನ್​ಗೆ 15.25 ಕೋಟಿ ರೂ ನೀಡಿದ್ದು, ಮತ್ತು ಭುಜದ ನೋವಿನಿಂದ ಬಳಲುತ್ತಿರುವ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್​ ಐಪಿಎಲ್​ ಆಡುವುದು ಖಚಿತವಲ್ಲದಿದ್ದರು 8 ಕೋಟಿ ರೂ ನೀಡಿ ಖರೀದಿಸಿದೆ. ಹಾಗಾಗಿ ಪ್ರಸ್ತುತ ಸರಿಯಾದ ತಂಡದ ಸಂಯೋಜನೆ ಮಾಡಲಾಗದೆ ಸತತ 6 ಪಂದ್ಯಗಳಲ್ಲಿ ಸೋಲು ಕಂಡು ವೈಫಲ್ಯ ಅನುಭವಿಸುತ್ತಿದೆ.

5 ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ, ಜಸ್​ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್​, ಕೀರನ್ ಪೊಲಾರ್ಡ್​ರನ್ನು ರಿಟೈನ್ ಮಾಡಿಕೊಂಡಿತ್ತು.

ದಿ ಗ್ರೇಡ್​ ಕ್ರಿಕೆಟರ್​ ಪೋಡ್​ಕಾಸ್ಟ್​ನಲ್ಲಿ ಮಾತನಾಡಿರುವ ವಾಟ್ಸನ್​, ನನಗೆ ಮುಂಬೈ ಇಂಡಿಯನ್ಸ್​ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವುದಕ್ಕೆ ಆಶ್ಚರ್ಯವಾಗುತ್ತಿಲ್ಲ. ಏಕೆಂದರೆ ಅವರು ಹರಾಜನಲ್ಲಿ ಕೆಲವು ಆಶ್ಚರ್ಯಕರ ರೀತಿಯಲ್ಲಿ ಆಟಗಾರರನ್ನು ಖರೀದಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇಶಾನ್ ಕಿಶನ್​ ಮೇಲೆ ಸಿಕ್ಕಾಬಟ್ಟೆ ಹಣ ಹೂಡಿದ್ದಾರೆ.. ಆತನ ಒಬ್ಬ ಉತ್ತಮ ಪ್ರತಿಭಾವಂತ ಮತ್ತು ಕೌಶಲ್ಯವುಳ್ಳ ಆಟಗಾರ. ಆದರೆ ನೀವು ನೀಡಿರುವಷ್ಟು ವೇತನಕ್ಕೆ ಯೋಗ್ಯನಲ್ಲ. ಮತ್ತೆ ನೀವು ಜೋಫ್ರಾ ಆರ್ಚರ್​ ಮೇಲೆ ಹಣ ಹೂಡಿರುವುದು, ಆತ ಯಾವಾಗ ಮರಳುತ್ತಾರೆ ಎನ್ನುವುದರ ಬಗ್ಗೆ ಗೊತ್ತಿಲ್ಲದೆ ಖರೀದಿಸಲಾಗಿದೆ. ಮೊದಲಾಗಿ ಆತ ಕೆಲವು ಸಮಯಗಳಿಂದ ಕ್ರಿಕೆಟ್​ ಆಡಿಲ್ಲ. ಇಷ್ಟೇ ಅಲ್ಲದೆ ಅವರು ತಂಡದಲ್ಲಿ ಕೆಲವೊಂದು ನ್ಯೂನತೆಗಳನ್ನು ಹೊಂದಿದ್ದಾರೆ ಎಂದು ವಾಟ್ಸನ್​ ತಿಳಿಸಿದ್ದಾರೆ.

ಇದನ್ನೂ ಓದಿ:IPL ಇತಿಹಾಸದಲ್ಲಿ ಮೊದಲ 6 ಪಂದ್ಯಗಳಲ್ಲಿ ಸೋಲು.. ಮುಂಬೈ ಇಂಡಿಯನ್ಸ್ ಈ ಬೇಡದ ದಾಖಲೆ ಪಟ್ಟಿಗೆ ಸೇರಿದ 3ನೇ ತಂಡ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.