ETV Bharat / sports

T20 World Cup: ವಿಂಡೀಸ್ ಎದುರು ಗೆದ್ದು ಬೀಗಿದ ಸ್ಕಾಟ್ಲೆಂಡ್

author img

By

Published : Oct 17, 2022, 3:46 PM IST

Updated : Oct 20, 2022, 10:09 AM IST

T20 World Cup: ವಿಂಡೀಸ್ ಎದುರು ಗೆದ್ದು ಬೀಗಿದ ಸ್ಕಾಟ್ಲೆಂಡ್
t20-world-cup-george-munsey-mark-watt-help-scotland-shock-west-indies-by-42-runs

ಓಪನರ್ ಜಾರ್ಜ್ ಮನ್ಸೆ ಅವರು ಇನ್ನಿಂಗ್ಸ್‌ನಲ್ಲಿ ಅಜೇಯ 66 ರನ್ ಗಳಿಸಿ ಸ್ಕಾಟ್ಲೆಂಡ್‌ 160/5 ಸ್ಕೋರ್ ಗಳಿಸಲು ನೆರವಾದರು. ಎಡಗೈ ಸ್ಪಿನ್ನರ್ ಮಾರ್ಕ್ ವ್ಯಾಟ್ ತಮ್ಮ 3/12 ರೊಂದಿಗೆ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಈ ಮೂಲಕ ವೆಸ್ಟ್ ಇಂಡೀಸ್ 18.3 ಓವರ್​ಗಳಲ್ಲಿ 118 ರನ್‌ಗಳಿಗೆ ಆಲ್ ಔಟ್ ಆಯಿತು.

ಹೋಬರ್ಟ್: ಶ್ರೀಲಂಕಾ ವಿರುದ್ಧ ನಮೀಬಿಯಾ 55 ರನ್‌ಗಳ ಭರ್ಜರಿ ಜಯ ದಾಖಲಿಸಿ ಪುರುಷರ T20 ವಿಶ್ವಕಪ್‌ಗೆ ಭರ್ಜರಿ ಚಾಲನೆ ನೀಡಿದ ಬೆನ್ನಲ್ಲೇ, ಸ್ಕಾಟ್ಲೆಂಡ್ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ವಿರುದ್ಧ 42 ರನ್‌ಗಳಿಂದ ಗೆದ್ದು ಬೀಗಿತು. ಸೋಮವಾರ ಬೆಲ್ಲೆರೀವ್ ಓವಲ್​ನಲ್ಲಿ ನಡೆದ ಗ್ರೂಪ್​ ಬಿ ಯ ಪ್ರಥಮ ಪಂದ್ಯ ಇದಾಗಿತ್ತು.

ಓಪನರ್ ಜಾರ್ಜ್ ಮನ್ಸೆ ಅವರು ಇನ್ನಿಂಗ್ಸ್‌ನಲ್ಲಿ ಅಜೇಯ 66 ರನ್ ಗಳಿಸಿ ಸ್ಕಾಟ್ಲೆಂಡ್‌ 160/5 ಸ್ಕೋರ್ ಗಳಿಸಲು ನೆರವಾದರು. ಎಡಗೈ ಸ್ಪಿನ್ನರ್ ಮಾರ್ಕ್ ವ್ಯಾಟ್ ತಮ್ಮ 3/12 ರೊಂದಿಗೆ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಈ ಮೂಲಕ ವೆಸ್ಟ್ ಇಂಡೀಸ್ 18.3 ಓವರ್​ಗಳಲ್ಲಿ 118 ರನ್‌ಗಳಿಗೆ ಆಲ್ ಔಟ್ ಆಯಿತು.

2021ರ ಟಿ 20 ವಿಶ್ವಕಪ್‌ನ ಓಮನ್‌ನ ಅಲ್ ಅಮೇರಾತ್​​ನಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಆರು ರನ್‌ಗಳಿಂದ ಸೋಲಿಸಿದ ಒಂದು ವರ್ಷದ ನಂತರ ಸ್ಕಾಟ್ಲೆಂಡ್ 42 ರನ್‌ಗಳಿಂದ ಗೆದ್ದಿದೆ.

ಸಂಕ್ಷಿಪ್ತ ಸ್ಕೋರ್: ಸ್ಕಾಟ್ಲೆಂಡ್ 20 ಓವರ್‌ಗಳಲ್ಲಿ 160/5 (ಜಾರ್ಜ್ ಮುನ್ಸಿ ಔಟಾಗದೆ 66, ಕ್ಯಾಲಮ್ ಮ್ಯಾಕ್‌ಲಿಯೊಡ್ 23; ಜೇಸನ್ ಹೋಲ್ಡರ್ 2/14, ಅಲ್ಜಾರಿ ಜೋಸೆಫ್ 2/28) ವೆಸ್ಟ್ ಇಂಡೀಸ್ ಅನ್ನು 18.3 ಓವರ್‌ಗಳಲ್ಲಿ 118 ಆಲೌಟ್ (ಜೇಸನ್ ಹೋಲ್ಡರ್ 38 ಮಾರ್ಕ್ ವ್ಯಾಟ್ 3/12, ಮೈಕಲ್ ಲೀಸ್ಕ್ 2/14) 42 ರನ್‌ಗಳಿಂದ ಸೋಲಿಸಿತು.

ಇದನ್ನೂ ಓದಿ: T20 ವಿಶ್ವಕಪ್‌: 5 ಅಗ್ರ ಭಾರತೀಯ ಬ್ಯಾಟ್ಸ್​​ಮನ್ ಇವರೇ ನೋಡಿ..

Last Updated :Oct 20, 2022, 10:09 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.