ETV Bharat / sports

ಮುಂಬೈ ಇಂಡಿಯನ್ಸ್​ಗೆ "ಯಾರ್ಕರ್"​ ಪೆಟ್ಟು: ಪಂಜಾಬ್​ಗೆ 13 ರನ್​ ಗೆಲುವು

author img

By

Published : Apr 23, 2023, 7:37 AM IST

ಮುಂಬೈನ ವಾಖೆಂಡೆ ಕ್ರೀಡಾಂಗಣದಲ್ಲಿ ರನ್​ ಮಳೆ ಹರಿಯಿತು. ಪಂದ್ಯದಲ್ಲಿ ಪಂಜಾಬ್ ಗೆಲುವು ಸಾಧಿಸಿದರೂ, ಮುಂಬೈ ರೋಚಕ ಹೋರಾಟ ನೀಡಿತು.

ಪಂಜಾಬ್​ಗೆ 13 ರನ್​ ಗೆಲುವು
ಪಂಜಾಬ್​ಗೆ 13 ರನ್​ ಗೆಲುವು

ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ಬಲವೇ ಬಲಿಷ್ಠ ಬ್ಯಾಟಿಂಗ್​. ಬ್ಯಾಟರ್​ಗಳ ದಂಡೇ ಹೊಂದಿರುವ ತಂಡ ಶನಿವಾರ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಲಿಲ್ಲ. ನಾಯಕ ರೋಹಿತ್​ ಶರ್ಮಾ, ಕ್ಯಾಮರೂನ್​ ಗ್ರೀನ್​, ಸೂರ್ಯಕುಮಾರ್​ ಯಾದವ್​, ಟಿಮ್​ ಡೇವಿಡ್​​ ಅಬ್ಬರಿಸಿದರೂ, ಅರ್ಷದೀಪ್​ ಸಿಂಗ್​ರ ಬೌಲಿಂಗ್​ ಕರಾಮತ್ತಿನ ಮುಂದೆ ಗೆಲುವು ಸಾಧಿಸಲಾಗಲಿಲ್ಲ.

ರೋಚಕ ಕದನವಾಗಿ ಮಾರ್ಪಟ್ಟಿದ್ದ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈಗೆ ಕೊನೆಯ ಓವರ್​ನಲ್ಲಿ ಗೆಲ್ಲಲು 16 ರನ್​ ಬೇಕಿತ್ತು. ದಾಳಿಗೆ ಇಳಿದಿದ್ದು ಯುವ ವೇಗಿ ಅರ್ಶದೀಪ್​ ಸಿಂಗ್​. 6 ಎಸೆತಗಳಲ್ಲಿ 3 ರನ್​ ನೀಡಿ 2 ವಿಕೆಟ್​ ಗಳಿಸಿದರು. ಸಿಂಗ್​ ಕರಾರುವಾಕ್​ ದಾಳಿಗೆ ಮುಂಬೈ ಬೆಂಡಾಗಿ 13 ರನ್​ಗಳ ಸೋಲು ಕಂಡಿತು.

ಮುರಿದ ವಿಕೆಟ್​: ಯುವ ವೇಗಿ ಅರ್ಶದೀಪ್​ ಸಿಂಗ್​ ಕೊನೆಯ ಓವರ್​​​ ನಿಜಕ್ಕೂ ಇಡೀ ಕ್ರೀಡಾಂಗಣವನ್ನು ತುದಿಗಾಲ ಮೇಲೆ ನಿಲ್ಲಿಸಿತ್ತು. ಅಬ್ಬರಿಸುತ್ತಿದ್ದ ಟಿಮ್​ ಡೇವಿಡ್​ ಜೊತೆಗೆ ತಿಲಕ್​ ವರ್ಮಾ ಮೈದಾನದಲ್ಲಿದ್ದರು. ಗೆಲುವು ಸಿಗಲಿದೆ ಎಂದೇ ಭಾವಿಸಿದ್ದ ಮುಂಬೈಗೆ ಸಿಂಗ್​ ಆಸೆಯನ್ನೇ ಚಿವುಟಿ ಹಾಕಿದರು. ಯಾರ್ಕರ್​ ಬೌಲಿಂಗ್​ ಮಾಡಿದ ಸಿಂಗ್​ ವಿಕೆಟ್​ ಮುರಿದು ಹಾಕಿದರು. ಈ ಮೂಲಕ ಮುಂಬೈನ ಗೆಲುವನ್ನೂ ಮುರಿದರು.

4 ಓವರ್​ಗಳಲ್ಲಿ 29 ರನ್ ಬಿಟ್ಟುಕೊಟ್ಟ ಸಿಂಗ್​ 4 ವಿಕೆಟ್​ ಗಳಿಸಿದರು. ಕೊನೆಯ ರೋಚಕ ಓವರ್​ನಲ್ಲಿ ತಿಲಕ್ ವರ್ಮಾ ಮತ್ತು ನೆಹಾಲ್ ವಧೇರಾ ಅವರನ್ನು ಅರ್ಷದೀಪ್ ಸಿಂಗ್ ಕ್ಲೀನ್ ಬೌಲ್ಡ್ ಮಾಡಿದರು. ಎರಡೂ ಬಾರಿ ವಿಕೆಟ್ ಮುರಿದು ಹೋಯಿತು. ಅಷ್ಟರಮಟ್ಟಿಗೆ ಸಿಂಗ್​ ಯಾರ್ಕರ್​ ಕೆಲಸ ಮಾಡಿತು.

ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ಇಂದು ಆರ್​ಸಿಬಿ Vs ಆರ್​ಆರ್ ಪಂದ್ಯಕ್ಕೆ ಮಳೆ ಭೀತಿ: ಹಸಿರು ಜರ್ಸಿಯಲ್ಲಿ ಮಿಂಚಲಿದೆ ಡು ಪ್ಲೆಸಿಸ್ ಟೀಂ

ಪಂಜಾಬ್​ ನೀಡಿದ್ದ ಬೃಹತ್ ಮೊತ್ತವನ್ನು ಬೆನ್ನತ್ತಿದ ನಾಯಕ ರೋಹಿತ್ ಶರ್ಮಾ 44, ಕ್ಯಾಮರೂನ್ ಗ್ರೀನ್ 67 ಮತ್ತು ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ 57 ರನ್, ಟಿಮ್ ಡೇವಿಡ್ ಔಟಾಗದೆ 25 ರನ್ ಗೆಲುವು ಕಾಣಲು ಸಾಧ್ಯವಾಗಲಿಲ್ಲ. ಪಂಜಾಬ್ ಪರ ಬಿಗಿ ಬೌಲಿಂಗ್ ದಾಳಿ ನಡೆಸಿದ ಅರ್ಷದೀಪ್ ಸಿಂಗ್ ಗೆಲುವಿನ ರೂವಾರಿ ಎನಿಸಿಕೊಂಡರು.

ಪಂಜಾಬ್​ಗೆ ನಾಯಕನ ಆಸರೆ: ಇದಕ್ಕೂ ಮೊದಲು ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮ್ಯಾಥ್ಯೂ ಶಾರ್ಟ್11, ಚಪ್ರಭ್‌ಸಿಮ್ರಾನ್ 26, ಲಿವಿಂಗ್‌ಸ್ಟೋನ್ 10, ಅಥರ್ವ ಟೈಡೆ 29, ಹರ್‌ಪ್ರೀತ್ ಸಿಂಗ್ 41 ರನ್​ ಮಾಡಿ ತಂಡದ ರನ್​ ಕಲೆ ಹಾಕಿದರು. ಮಧ್ಯಮ ಕ್ರಮಾಂಕದಲ್ಲಿ ಸಿಡಿದ ನಾಯಕ ಸ್ಯಾಮ್ ಕರ್ರನ್ 55, ಜಿತೇಶ್ ಶರ್ಮಾ 25, ಹರ್‌ಪ್ರೀತ್ ಬ್ರಾರ್ 5 ರನ್ ಕೊಡುಗೆ ನೀಡಿದರು. ಇದರಿಂದ ಪಂಜಾಬ್ 8 ವಿಕೆಟ್ ನಷ್ಟಕ್ಕೆ ಬರೋಬ್ಬರಿ 214 ರನ್​ಗಳ ಬೃಹತ್​ ಮೊತ್ತ ಕಲೆ ಹಾಕಿತು.

ಇದನ್ನೂ ಓದಿ: ಟಿ20ಯಲ್ಲಿ ವೇಗವಾಗಿ 7000 ರನ್ ಗಡಿ ಮುಟ್ಟಿದ ಕೆಎಲ್​ ರಾಹುಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.