ETV Bharat / sports

ಹಸರಂಗ ಮಾರಕ ಬೌಲಿಂಗ್ ದಾಳಿ: ಆರ್​ಸಿಬಿ ಗೆಲುವಿಗೆ 129 ರನ್ ಟಾರ್ಗೆಟ್ ನೀಡಿದ ಕೋಲ್ಕತ್ತಾ

author img

By

Published : Mar 30, 2022, 9:18 PM IST

Wanindu Hasaranga
Wanindu Hasaranga

ಮೊದಲ ಪಂದ್ಯದಲ್ಲಿ ಬೌಲಿಂಗ್ ವೈಫಲ್ಯ ಅನುಭವಿಸಿದ್ದ ಆರ್​ಸಿಬಿ ತಂಡ ಎರಡನೇ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, ಎದುರಾಳಿ ತಂಡವನ್ನು 128 ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ.

ಮುಂಬೈ: ಬೆಂಗಳೂರು ತಂಡದ ಆಲ್​ರೌಂಡರ್ ವನಿದು ಹಸರಂಗ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿರುವ ಕೋಲ್ಕತ್ತಾ ನೈಟ್​ ರೈಡರ್ಸ್​​ ಬೆಂಗಳೂರು ತಂಡದ ಗೆಲುವಿಗೆ 129 ರನ್​ಗಳ ಸುಲಭ ಟಾರ್ಗೆಟ್ ನೀಡಿದೆ. ಡಿ.ವೈ.ಪಾಟೀಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಶ್ರೇಯಸ್ ಅಯ್ಯರ್ ಪಡೆ, ಆರ್​ಸಿಬಿ ಬೌಲಿಂಗ್ ದಾಳಿಗೆ ಸಂಪೂರ್ಣವಾಗಿ ತತ್ತರಿಸಿ ಹೋಯಿತು.

ಆರಂಭಿಕರಾಗಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್(10)​ ಹಾಗೂ ರಹಾನೆ(9) ಮೊದಲ ಮೂರು ಓವರ್​ಗಳಲ್ಲೇ ವಿಕೆಟ್ ಕಳೆದುಕೊಂಡರು. ಅಯ್ಯರ್​ ವಿಕೆಟ್ ಕೀಳುವಲ್ಲಿ ಆಕಾಶ್ ದೀಪ್ ಯಶಸ್ವಿಯಾದರೆ, ರಹಾನೆ ವಿಕೆಟ್ ಸಿರಾಜ್​ ಪಡೆದುಕೊಂಡರು. ಇದಾದ ಬಳಿಕ ಯಾವುದೇ ಆಟಗಾರ ಹೇಳಿಕೊಳ್ಳುವಂತಹ ಆಟ ಪ್ರದರ್ಶನ ನೀಡಲಿಲ್ಲ. ಕ್ಯಾಪ್ಟನ್ ರಹಾನೆ(13), ನಿತೀಶ್ ರಾಣಾ(10), ಸುನಿಲ್ ನರೈನ್​​(12), ಬಿಲ್ಲಿಂಗ್ಸ್​​​​(14)ರನ್​ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು. ಹೀಗಾಗಿ ಮೊದಲ 10 ಓವರ್​ಗಳಲ್ಲಿ ಪ್ರಮುಖ 6 ವಿಕೆಟ್ ಕಳೆದುಕೊಂಡು 76ರನ್​ಗಳಿಕೆ ಮಾಡಿತು.

ಕೆಕೆಆರ್​ಗೆ ಮಾರಕವಾದ ಹಸರಂಗ: ಕೋಲ್ಕತ್ತಾ ನೈಟ್ ರೈಡರ್ಸ್​ ಬ್ಯಾಟಿಂಗ್​ ಪಡೆಗೆ ಮಾರಕವಾಗಿ ಕಾಡಿದ ವನಿದು ಹಸರಂಗ ಪ್ರಮುಖ ನಾಲ್ಕು ವಿಕೆಟ್ ಕಿತ್ತರು. ಕ್ಯಾಪ್ಟನ್ ಶ್ರೇಯಸ್​ ಅಯ್ಯರ್​, ಸುನಿಲ್ ನರೈನ್​, ಜಾಕ್ಸನ್​, ಸೌಥಿ ವಿಕೆಟ್ ಕಬಳಿಸಿ, ತಂಡಕ್ಕೆ ಮೇಲುಗೈ ತಂದುಕೊಟ್ಟರು. ಇವರಿಗೆ ಸಾಥ್ ನೀಡಿದ ಆಕಾಶ್ ದೀಪ್ 3 ವಿಕೆಟ್​, ಹರ್ಷಲ್ ಪಟೇಲ್ 2 ವಿಕೆಟ್ ಪಡೆದುಕೊಂಡರೆ, ಸಿರಾಜ್ 1 ವಿಕೆಟ್ ಪಡೆದು ಗಮನ ಸೆಳೆದರು.

ಬಾಲಂಗೋಚಿಗಳಾದ ಉಮೇಶ್ ಯಾದವ್(18)​, ವರುಣ್​ ಚಕ್ರವರ್ತಿ(10) ಕೊನೆಯಲ್ಲಿ ಅಲ್ಪಮಟ್ಟದ ವಿರೋಧ ತೋರಿದ್ದರಿಂದ ಕೆಕೆಆರ್ ತಂಡ 18.5 ಓವರ್​​ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 128ರನ್​ಗಳಿಕೆ ಮಾಡಿದೆ. ತಂಡದ ಪರವಾಗಿ ಆಲ್​ರೌಂಡರ್​ ರಸೆಲ್​​ 25ರನ್​ಗಳಿಕೆ ಮಾಡಿರುವುದು ವೈಯಕ್ತಿಕ ಗರಿಷ್ಠ ಸ್ಕೋರ್​​ ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.