ETV Bharat / sports

31 ಸಿಕ್ಸ್​, ಬರೋಬ್ಬರಿ 514 ರನ್​​​ ಹೊಡೆಸಿಕೊಂಡ ಬೌಲರ್​: ಸಿರಾಜ್​ಗೆ ₹7 ಕೋಟಿ ನೀಡಿ ಕೈಸುಟ್ಟುಕೊಂಡ ಆರ್​ಸಿಬಿ!

author img

By

Published : May 28, 2022, 8:10 PM IST

Updated : May 28, 2022, 9:07 PM IST

Mohammed siraj bags unwanted record in IPL
Mohammed siraj bags unwanted record in IPL

15ನೇ ಆವೃತ್ತಿ ಐಪಿಎಲ್​ನಲ್ಲಿ ಬೆಂಗಳೂರು ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಕೆಟ್ಟ ದಾಖಲೆಗೆ ಪಾತ್ರರಾಗಿದ್ದಾರೆ. ಸೀಸನ್​​ನಲ್ಲಿ ತಾವು ಆಡಿರುವ 15 ಪಂದ್ಯಗಳಿಂದ ಬರೋಬ್ಬರಿ 31 ಸಿಕ್ಸರ್ ಹೊಡೆಸಿಕೊಂಡಿದ್ದಾರೆ.

ಅಹಮದಾಬಾದ್​​: ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಕ್ವಾಲಿಫೈಯರ್​ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಇದರ ಮಧ್ಯೆ ತಂಡದ ಪ್ರಮುಖ ವೇಗದ ಬೌಲರ್ ಎಂದು ಗುರುತಿಸಿಕೊಂಡಿದ್ದ ಮೊಹಮ್ಮದ್ ಸಿರಾಜ್​​ 15ನೇ ಆವೃತ್ತಿ ಐಪಿಎಲ್​​ನಲ್ಲಿ ಬರೋಬ್ಬರಿ 31 ಸಿಕ್ಸರ್​ ಬಿಟ್ಟುಕೊಟ್ಟು ಕೆಟ್ಟದಾದ ರೆಕಾರ್ಡ್​ಗೆ ಪಾತ್ರರಾಗಿದ್ದಾರೆ. ಇದರ ಜೊತೆಗೆ ಫ್ರಾಂಚೈಸಿ ನೀಡಿದ್ದ ಬರೋಬ್ಬರಿ 7 ಕೋಟಿ ರೂಪಾಯಿಗೆ ನ್ಯಾಯ ದೊರಕಿಸಿಕೊಟ್ಟಿಲ್ಲ ಎಂದು ಕ್ರೀಡಾಭಿಮಾನಿಗಳು ಮಾತನಾಡಿಕೊಳ್ಳಲು ಶುರು ಮಾಡಿದ್ದಾರೆ.

ಐಪಿಎಲ್ ಹರಾಜು ಪ್ರಕ್ರಿಯೆಲ್ಲಿ ಬರೋಬ್ಬರಿ 7 ಕೋಟಿ ರೂಪಾಯಿ ನೀಡಿ, ವೇಗದ ಬೌಲರ್ ಮೊಹಮ್ಮದ್​ ಸಿರಾಜ್​ಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ರಿಟೈನ್​ ಮಾಡಿಕೊಂಡಿತ್ತು. ಆದರೆ, 15ನೇ ಆವೃತ್ತಿ ಐಪಿಎಲ್​​ನಲ್ಲಿ ಸಿರಾಜ್​​ 15 ಪಂದ್ಯಗಳಿಂದ 10.07 ಎಕಾನಮಿಯಲ್ಲಿ ಬರೋಬ್ಬರಿ 514 ರನ್​ ಬಿಟ್ಟುಕೊಟ್ಟಿದ್ದಾರೆ. ಜೊತೆಗೆ ಬರೋಬ್ಬರಿ 31 ಸಿಕ್ಸರ್ ಹೊಡೆಸಿಕೊಂಡಿದ್ದಾರೆ. ಈ ಆಟಗಾರನಿಗೆ ಆರ್​​ಸಿಬಿ ಬರೋಬ್ಬರಿ 7 ಕೋಟಿ ರೂಪಾಯಿ ಖರ್ಚು ಮಾಡಿದ್ದು, ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಪಂದ್ಯದಲ್ಲಿ ಕೈಕೊಟ್ಟ ಸಿರಾಜ್​: ಕ್ವಾಲಿಫೈಯರ್​ 2 ಪಂದ್ಯದಲ್ಲೂ ಕಳಪೆ ಬ್ಯಾಟಿಂಗ್​ ಪ್ರದರ್ಶನ ನೀಡಿದ ಮೊಹಮ್ಮದ್ ಸಿರಾಜ್​ ತಂಡದ ಸೋಲಿಗೆ ಪ್ರಮುಖ ಕಾರಣವಾದರು. ರಾಜಸ್ಥಾನ ರಾಯಲ್ಸ್​ ವಿರುದ್ಧದ ಪಂದ್ಯದಲ್ಲಿ ತಾವು ಎಸೆದ ಎರಡು ಓವರ್​ಗಳಲ್ಲಿ ಬರೋಬ್ಬರಿ 31 ರನ್​ ಬಿಟ್ಟುಕೊಟ್ಟರು. ಆದರೆ, ಯಾವುದೇ ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ.

ಇದನ್ನೂ ಓದಿ: ಡ್ರೆಸ್ಸಿಂಗ್ ರೂಮ್​​ನಲ್ಲಿ ನೀರವ ಮೌನ: RCB ವಿಜಯಗೀತೆ ಹಾಡಿ, ಟ್ರೋಫಿಗಾಗಿ ನಿರಂತರ ಹೋರಾಟ ಎಂದ ತಂಡ!

ಒಂದೇ ಸೀಸನ್​​ನಲ್ಲಿ ಅತಿ ಹೆಚ್ಚು ಸಿಕ್ಸರ್ ಹೊಡೆಸಿಕೊಂಡ ಬೌಲರ್​: ಪ್ರಸಕ್ತ ಸಾಲಿನ ಐಪಿಎಲ್​ನಲ್ಲಿ ಮೊಹಮ್ಮದ್ ಸಿರಾಜ್​ ಬರೋಬ್ಬರಿ 31 ಸಿಕ್ಸರ್​ ಹೊಡೆಸಿಕೊಂಡಿದ್ದಾರೆ. ಈ ಮೂಲಕ ಒಂದೇ ಸೀಸನ್​​ನಲ್ಲಿ ಅತಿ ಹೆಚ್ಚು ಸಿಕ್ಸ್​ ಹೊಡೆಸಿಕೊಂಡ ಬೌಲರ್​ ಎಂಬ ಅಪಖ್ಯಾತಿಗೆ ಪಾತ್ರರಾಗಿದ್ದಾರೆ. ಜೊತೆಗೆ ಟೂರ್ನಿ ಉದ್ದಕ್ಕೂ ಕೇವಲ 9 ವಿಕೆಟ್​ ಮಾತ್ರ ಪಡೆದುಕೊಂಡಿದ್ದಾರೆ.

ತಂಡದ ಮತ್ತೊರ್ವ ಬೌಲರ್ ಹಸರಂಗ 30 ಸಿಕ್ಸರ್ ಹೊಡೆಸಿಕೊಂಡಿದ್ದಾರೆ. ಆದರೆ, 26 ವಿಕೆಟ್​ ಪಡೆದು ಗಮನ ಸೆಳೆದರು. 2018ರ ಆವೃತ್ತಿಯಲ್ಲಿ ವೆಸ್ಟ್​ ಇಂಡೀಸ್ ಬೌಲರ್ ಡ್ವೇನ್​ ಬ್ರಾವೋ ಸೀಸನ್​ವೊಂದರಲ್ಲಿ 29 ಸಿಕ್ಸರ್ ಹೊಡೆಸಿಕೊಂಡಿದ್ದರು.

Last Updated :May 28, 2022, 9:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.