ETV Bharat / sports

CSK vs GT : ಟಾಸ್​ ಗೆದ್ದು ಚೆನ್ನೈ ಬ್ಯಾಟಿಂಗ್ ಆಯ್ಕೆ​.. ಆರಂಭಿಕ ಕಾನ್ವೇ ವಿಕೆಟ್​ ಪತನ..

author img

By

Published : May 15, 2022, 4:10 PM IST

CSK vs GT toss
ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದ ಚೆನೈ

ವಾಂಖೆಡೆ ಸ್ಟೇಡಿಯಂನಲ್ಲಿ ಕೆಂಪು ಮಣ್ಣು ಎಂದರೆ ಸ್ಪಿನ್ನರ್‌ಗಳಿಗೆ ಸಾಕಷ್ಟು ತಿರುವು ಸಿಗುತ್ತದೆ. ಪಂದ್ಯವು ಹೇಗೆ ಹೊರಹೊಮ್ಮುತ್ತದೆ ಎಂಬುದರ ಮೇಲೆ ತೇವಾಂಶವು ಪಾತ್ರವನ್ನು ವಹಿಸುತ್ತದೆ. ಪಿಚ್​ ಬೌಲರ್​ಗಳಿಗೆ ಹೆಚ್ಚು ಸಹಕಾರಿಯಾಗಿದೆ. ಯಾರಿಗೆ ಅತೀ ಹೆಚ್ಚು ವಿಕೆಟ್​ ದೊರೆಯಲಿದೆ ಎಂಬುದೇ ಕುತೂಹಲ..

ಮುಂಬೈ : ಪ್ಲೇ ಆಫ್​ ಕನಸು ದೂರ ಆಗಿರುವ ಚೆನ್ನೈ ಮತ್ತು ಪ್ಲೇ ಆಫ್​ಗೆ ಎಂಟ್ರಿ ಕೊಟ್ಟಿರುವ ಗುಜರಾತ್‌ ನಡುವಿನ ಪಂದ್ಯದಲ್ಲಿ ಚೆನ್ನೈ ಟಾಸ್​ ಗೆದ್ದು ಬ್ಯಾಟಿಂಗ್​ ತೆಗೆದುಕೊಂಡಿದೆ. ಪಾಯಿಂಟ್​ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಗುಜರಾತ್​ ಈ ಪಂದ್ಯ ಗೆದ್ದಲ್ಲಿ ಅತೀ ಹೆಚ್ಚು ಅಂಕದೊಂದಿಗೆ ಸ್ಥಾನ ಭದ್ರಪಡಿಸಿಕೊಳ್ಳಲಿದೆ.

ಮುಂಬೈನ ವಾಂಖೆಡೆಯಲ್ಲಿ ಪಂದ್ಯ ಆರಂಭಗೊಂಡಿದೆ. 12 ಪಂದ್ಯಗಳಲ್ಲಿ 8ರಲ್ಲಿ ಸೋತಿರುವ ಚೆನ್ನೈ ಪ್ರತಿಷ್ಠೆಗಾಗಿ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಬೇಕಿದೆ. ಚೆನ್ನೈ ತಂಡ ನಾಲ್ಕು ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಿದೆ. ಗುಜರಾತ್​ ಲಖನೌ ಎದುರು ಗೆದ್ದಿದ್ದ ತಂಡದೊಂದಿಗೆ ಮುಂದುವರೆದಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಚೆನ್ನೈಗೆ ಶಮಿ ಆರಂಭಿಕ ಆಘಾತ ನೀಡಿದ್ದಾರೆ. ಕಳೆದೆರಡು ಪಂದ್ಯಗಳಿಂದ ಉತ್ತಮ ಬ್ಯಾಟಿಂಗ್​ ಪ್ರದರ್ಶನ ನೀಡುತ್ತಾ ಬಂದಿದ್ದ ಡೆವೊನ್ ಕಾನ್ವೇ ವಿಕೆಟ್(5)​ ಪತನವಾಗಿದೆ. ಗಾಯಕ್ವಾಡ್ ಮತ್ತು ಮೊಯಿನ್ ಅಲಿ ಉತ್ತಮ ಜೊತೆಯಾಟ ನೀಡುವ ನಿರೀಕ್ಷೆ ಇದೆ.

ಚೆನ್ನೈ :ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಮೊಯಿನ್ ಅಲಿ, ಶಿವಂ ದುಬೆ, ಎನ್ ಜಗದೀಶನ್, ಎಂಎಸ್ ಧೋನಿ (ನಾಯಕ ಮತ್ತು ವಿಕೇಟ್​ ಕೀಪರ್​), ಮಿಚೆಲ್ ಸ್ಯಾಂಟ್ನರ್, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ಮಥೀಶ ಪತಿರಾನ, ಮುಖೇಶ್ ಚೌಧರಿ

ಗುಜರಾತ್​ : ವೃದ್ಧಿಮಾನ್ ಸಹಾ(ವಿಕೇಟ್​ ಕೀಪರ್​), ಶುಭಮನ್ ಗಿಲ್, ಮ್ಯಾಥ್ಯೂ ವೇಡ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಮೊಹಮ್ಮದ್ ಶಮಿ

ಇದನ್ನೂ ಓದಿ: KKR vs SRH: ರಸೆಲ್ ಸ್ಫೋಟಕ ಆಟ: ಹೈದರಾಬಾದ್ ಗೆಲುವಿಗೆ 178 ರನ್ ಟಾರ್ಗೆಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.