ETV Bharat / sports

14 ಪಂದ್ಯಗಳ ಬಳಿಕ ಐಪಿಎಲ್​ನಲ್ಲಿ ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿ!

author img

By

Published : Apr 30, 2022, 5:06 PM IST

ವಿರಾಟ್​ ಕೊಹ್ಲಿ 2021, ಸೆಪ್ಟೆಂಬರ್​ 26ರಂದು ಆರ್​ಸಿಬಿಯ 11ನೇ ಪಂದ್ಯದಲ್ಲಿ ವಿರಾಟ್​ ಮುಂಬೈ ಇಂಡಿಯನ್ಸ್ ವಿರುದ್ಧ 51 ರನ್​ಗಳಿಸಿದ್ದರು. ಅದಾದ ನಂತರ ಸತತ 14 ಇನ್ನಿಂಗ್ಸ್​ಗಳಲ್ಲಿ ಕೊಹ್ಲಿ ಅರ್ಧಶತಕ ಗಡಿ ದಾಟಿರಲಿಲ್ಲ. ಈ ಆವೃತ್ತಿಯಲ್ಲಿ ಅವರು ಕಳೆದ 9 ಪಂದ್ಯಗಳಲ್ಲಿ ಕ್ರಮವಾಗಿ 41*,12, 5, 48,1,12,0,0, 9 ರನ್​ಗಳಿಗೆ ವಿಕೆಟ್​ ಒಪ್ಪಿಸಿದ್ದರು.

Virat Kohli hit first  fifty after 14 IPL innings
ವಿರಾಟ್ ಕೊಹ್ಲಿ ಅರ್ಧಶತಕ

ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಿರಿಯ ಬ್ಯಾಟರ್​ ವಿರಾಟ್​ ಕೊಹ್ಲಿ ಕೊನೆಗೂ ತಮ್ಮ ರನ್​ಗಳ ಬರ ನೀಗಿಸಿಕೊಂಡಿದ್ದಾರೆ. ಪ್ರಸ್ತುತ ಆವೃತ್ತಿಯಲ್ಲೂ ಇದೇ ಮೊದಲ ಅರ್ಧಶತಕ ಸಿಡಿಸಿದ್ದಾರೆ.

ವಿರಾಟ್​ ಕೊಹ್ಲಿ 2021, ಸೆಪ್ಟೆಂಬರ್​ 26ರಂದು ಆರ್​ಸಿಬಿಯ 11ನೇ ಪಂದ್ಯದಲ್ಲಿ ವಿರಾಟ್​ ಮುಂಬೈ ಇಂಡಿಯನ್ಸ್ ವಿರುದ್ಧ 51 ರನ್​ಗಳಿಸಿದ್ದರು. ಅದಾದ ನಂತರ ಸತತ 14 ಇನ್ನಿಂಗ್ಸ್​ಗಳಲ್ಲಿ ಕೊಹ್ಲಿ ಅರ್ಧಶತಕದ ಗಡಿ ದಾಟಿರಲಿಲ್ಲ. ಈ ಆವೃತ್ತಿಯಲ್ಲಿ ಅವರು ಕಳೆದ 9 ಪಂದ್ಯಗಳಲ್ಲಿ ಕ್ರಮವಾಗಿ 41*,12, 5, 48,1,12,0,0, 9 ರನ್​ಗಳಿಗೆ ವಿಕೆಟ್​ ಒಪ್ಪಿಸಿದ್ದರು. ಕಳೆದ ಪಂದ್ಯದಿಂದ ಆರಂಭಿಕರಾಗಿ ಕಣಕ್ಕಿಳಿದಿದ್ದ ಅವರು ಇಂದು ಗುಜರಾತ್​ ವಿರುದ್ಧ ಕೊನೆಗೂ ಅರ್ಧಶತಕ ಸಿಡಿಸುವಲ್ಲಿ ಸಫಲರಾದರು.

ಆದರೆ ಈ ಅರ್ಧಶತಕಕ್ಕಾಗಿ ಅವರು ಬರೋಬ್ಬರಿ 45 ಎಸೆತಗಳನ್ನು ತೆಗೆದುಕೊಂಡರು. ಇವರ ಇನ್ನಿಂಗ್ಸ್​ನಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್​ ಸೇರಿದೆ. ವಿರಾಟ್​ ಕೊಹ್ಲಿ 217ನೇ ಪಂದ್ಯವನ್ನಾಡುತ್ತಿದ್ದು, ಇದು ಅವರ 43 ನೇ ಅರ್ಧಶತಕವಾಗಿದೆ. ಒಟ್ಟಾರೆ ಅವರು 5 ಶತಕಗಳ ಸಹಿತ 6467 ರನ್​ಗಳಿಸಿದ್ದಾರೆ.

ಇದನ್ನೂ ಓದಿ: ಡ್ರೀಮ್​ ಫಾರ್ಮ್​ ಚೇತೇಶ್ವರ್​.. ಕೌಂಟಿಯಲ್ಲಿ ಹ್ಯಾಟ್ರಿಕ್ ಶತಕ ಸಿಡಿಸಿದ ಪೂಜಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.