ETV Bharat / sports

ಮ್ಯಾಕ್ಸ್​ವೆಲ್-ಕಾರ್ತಿಕ್​ ಸಿಡಿಲಬ್ಬರದ ಅರ್ಧಶತಕ: ಡೆಲ್ಲಿಗೆ 190 ರನ್​ಗಳ ಸವಾಲಿನ ಗುರಿ ನೀಡಿದ ಆರ್​ಸಿಬಿ

author img

By

Published : Apr 16, 2022, 7:30 PM IST

Updated : Apr 16, 2022, 9:37 PM IST

Delhi Capitals vs Royal Challengers Bangalore
Delhi Capitals vs Royal Challengers Bangalore

ಅಗ್ರಕ್ರಮಾಂಕದ ವೈಫಲ್ಯದ ಹೊರತಾಗಿಯೂ ಗ್ಲೆನ್ ಮ್ಯಾಕ್ಸ್​ವೆಲ್ ಮತ್ತು ದಿನೇಶ್ ಕಾರ್ತಿಕ್​ ಅವರ ಅಬ್ಬರದ ಅರ್ಧಶತಕಗಳ ನೆರವಿನಿಂದ ರಾಯಲ್​ ಚಾಲೆಂಜರ್ಸ್ ಬೆಂಗಳೂರು 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 189ರನ್​ಗಳಿಸಿದೆ.

ಮುಂಬೈ:ಗ್ಲೆನ್ ಮ್ಯಾಕ್ಸ್​ವೆಲ್ ಮತ್ತು ದಿನೇಶ್​ ಕಾರ್ತಿಕ್​ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 189 ರನ್​ಗಳ ಸವಾಲಿನ ಮೊತ್ತ ಪೇರಿಸಿದೆ.

ಮುಂಬೈನ ವಾಂಖೆಡೆ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು, ಆರ್​ಸಿಬಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಯಲ್ಪಟ್ಟಿತ್ತು. ಆದರೆ ಆರಂಭಿಕರಾದ ಅನುಜ್ ರಾವತ್(0)​ ಮತ್ತು ನಾಯಕ ಫಾಫ್​ ಡುಪ್ಲೆಸಿಸ್(8)​ ಹಾಗೂ ವಿರಾಟ್​ ಕೊಹ್ಲಿ(12) ತಂಡದ ಮೊತ್ತ 40ರನ್​ ಆಗುವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡರು.

ವಿಕೆಟ್ ಬೀಳುತ್ತಿದ್ದರು ಅಬ್ಬರದ ಬ್ಯಾಟಿಂಗ್ ಮ್ಯಾಕ್ಸ್​ವೆಲ್ 34 ಎಸೆತಗಳಲ್ಲಿ 7 ಬೌಂಡರಿ 2 ಸಿಕ್ಸರ್​ಗಳ ಸಹಿತ 55 ರನ್​ಗಳಿಸಿದರು. ಇವರು ಕುಲ್ದೀಪ್ ಯಾದವ್​ ಎಸೆದ 9ನೇ ಓವರ್​ನಲ್ಲಿ 23 ರನ್​ ಚಚ್ಚಿದರು. ಆದರೆ ಅವರ ಮುಂದಿನ ಓವರ್​​ನಲ್ಲಿ ವಿಕೆಟ್​ ಒಪ್ಪಿಸಿದರು. ಕಳೆದ ಪಂದ್ಯದಲ್ಲಿ ಗಮನ ಸೆಳೆದಿದ್ದ ಪ್ರಭುದೇಸಾಯಿ ಇಂದು 4 ರನ್​ಗಳಿಗೆ ವಿಕೆಟ್ ಒಪ್ಪಿಸಿದರು.

ತಂಡದ ಮೊತ್ತ 93 ರನ್​ಗಳಾಗುವಷ್ಟರಲ್ಲಿ 5 ವಿಕೆಟ್​ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕ್ರೀಸ್​ಗೆ ಆರ್​​ಸಿಬಿಯಾ ಆಪತ್ಪಾಂಧವ ದಿನೇಶ್ ಕಾರ್ತಿಕ್ ಆಲ್​ರೌಂಡರ್​ ಮೊಹಮ್ಮದ್ ಶಹಬಾಜ್​ ಜೊತೆಗೂಡಿ 6ನೇ ವಿಕೆಟ್​ಗೆ 97ರನ್​ಗಳ ಜೊತೆಯಾತ ನೀಡಿ 190ರನ್​ಗಳ ಸವಾಲಿನ ಗುರಿ ನೀಡಲು ನೆರವಾದರು.

ದಿನೇಶ್ ಕಾರ್ತಿಕ್ 34 ಎಸೆತಗಳಲ್ಲಿ ತಲಾ 5 ಬೌಂಡರಿ ಮತ್ತು 5 ಸಿಕ್ಸರ್​ಗಳ ಸಹಿತ ಅಜೇಯ 66 ರನ್​ ಸಿಡಿಸಿದರು. ಅವರು ಬಾಂಗ್ಲಾದೇಶದ ಮುಸ್ತಫಿಜುರ್ ರಹಮಾನ್​ ಎಸೆದ 18ನೇ ಓವರ್​​ನಲ್ಲಿ 4 ಬೌಂಡರಿ 2 ಸಿಕ್ಸರ್​ ಸಹಿತ 28 ರನ್​ ಸಿಡಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಮೊಹಮ್ಮದ್ ಶಹಬಾಜ್​ 21 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ ಅಜೇಯ 32 ರನ್​ಗಳಿಸಿದರು.

ಡೆಲ್ಲಿ ಕ್ಯಾಪಿಟಲ್ಸ್ ಪರ ಶಾರ್ದೂಲ್ ಠಾಕೂರ್ 27ಕ್ಕೆ 1,ಖಲೀಲ್ ಅಹ್ಮದ್​ 36ಕ್ಕೆ1, ಅಕ್ಷರ್ ಪಟೇಲ್ 29ಕ್ಕೆ1 ಮತ್ತು ಕುಲ್ದೀಪ್ ಯಾದವ್​ 46ಕ್ಕೆ 1 ವಿಕೆಟ್ ಪಡೆದರು.

ವಾಂಖೆಡೆಯಲ್ಲಿ ಚೇಸಿಂಗ್ ಹೆಚ್ಚು ಅನುಕೂಲ ಇರುವುದರಿಂದ ಟಾಸ್​ ಗೆದ್ದ ಡಿಸಿ ನಾಯಕ ಪಂತ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದೆರು. ಆಸ್ಟ್ರೇಲಿಯಾ ಆಲ್​ರೌಂಡರ್​ ಮಿಚೆಲ್ ಮಾರ್ಷ್ ಮತ್ತು ಆರ್​ಸಿಬಿಗೆ​ ಹರ್ಷಲ್ ಪಟೇಲ್ ಕಮ್​ಬ್ಯಾಕ್ ಮಾಡಿದ್ದರು. ಆಕಾಶ್ ದೀಪ್ ತಂಡದಿಂದ ಹೊರಬಿದ್ದಿದ್ದಾರೆ.

ಮುಖಾಮುಖಿ : ಎರಡೂ ತಂಡಗಳೂ 26 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಆರ್​ಸಿಬಿ 16-10ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೀ), ಸುಯಶ್ ಪ್ರಭುದೇಸಾಯಿ, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್

ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಪೃಥ್ವಿ ಶಾ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ರಿಷಭ್ ಪಂತ್(ನಾಯಕ.ವಿಕೀ), ರೋವ್ಮನ್ ಪೊವೆಲ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮುಸ್ತಾಫಿಜುರ್ ರೆಹಮಾನ್, ಖಲೀಲ್ ಅಹ್ಮದ್

Last Updated :Apr 16, 2022, 9:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.