ETV Bharat / sports

ಶೀಘ್ರದಲ್ಲಿ ಬೌಲಿಂಗ್​ಗೆ ಮರಳಲಿದ್ದೇನೆ : ವಿಶ್ವಕಪ್​ಗೂ ಮುನ್ನ ಗುಡ್​ ನ್ಯೂಸ್​ ನೀಡಿದ ಪಾಂಡ್ಯ

author img

By

Published : Oct 2, 2021, 8:54 PM IST

Hardik Pandya
ಹಾರ್ದಿಕ್ ಪಾಂಡ್ಯ

ಪಾಂಡ್ಯ ಜೊತೆಗೆ ಯುವ ಆಟಗಾರರಾದ ಇಶಾನ್​ ಕಿಶನ್, ಸೂರ್ಯಕುಮಾರ್ ಯಾದವ್​ ಮತ್ತು ರಾಹುಲ್​ ಚಹಾರ್​ ಪ್ರದರ್ಶನ ಕೂಡ ಕಳಪೆಯಾಗಿದ್ದು, ಮೀಸಲು ಆಟಗಾರನಾಗಿರುವ ಶ್ರೇಯಸ್ ಅಯ್ಯರ್ ಹಾಗೂ ವಿಶ್ವಕಪ್ ತಂಡದಲ್ಲಿ ಅವಕಾಶವಂಚಿತರಾಗಿರುವ ಯುಜ್ವೇಂದ್ರ ಚಹಾಲ್​ರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕೆಂದು ಅಭಿಮಾನಿಗಳು ಬಿಸಿಸಿಐಗೆ ಮನವಿ ಮಾಡುತ್ತಿದ್ದಾರೆ..

ಶಾರ್ಜಾ : ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್​ ಆಲ್​ರೌಂಡರ್ ಹಾರ್ದಿಕ್​ ಪಾಂಡ್ಯ ಶೀಘ್ರದಲ್ಲೇ ಬೌಲಿಂಗ್​ಗೆ ಮರಳಲಿದ್ದೇನೆ ಎಂದು ತಿಳಿಸಿದ್ದಾರೆ. ಆಯ್ಕೆ ಸಮಿತಿ ಮತ್ತು ಟೀಂ ಮ್ಯಾನೇಜ್​ಮೆಂಟ್ ಪಾಂಡ್ಯ ಬೌಲಿಂಗ್​ ಮಾಡದಿದ್ದರೆ ಸ್ಪೆಷಲಿಸ್ಟ್ ಬ್ಯಾಟ್ಸ್​ಮನ್​ ಎಂದು ಪರಿಗಣಿಸುವುದಿಲ್ಲ ಎನ್ನುವ ವರದಿಗಳು ಹೊರ ಬರುತ್ತಿದ್ದಂತೆ ಪಾಂಡ್ಯ ಈ ಸಕಾರಾತ್ಮಕ ಸುದ್ದಿ ನೀಡಿದ್ದಾರೆ.

ಡೆಲ್ಲಿ ಪಂದ್ಯಕ್ಕೂ ಮುನ್ನ ಮಾಧ್ಯಮದೊಂದಿಗೆ ಮಾತನಾಡಿದ ಹಾರ್ದಿಕ್​, ಆದಷ್ಟು ಬೇಗ ಬೌಲಿಂಗ್​ ಮಾಡಲಿದ್ದೇನೆ. ಈಗಾಗಲೇ ಅದಕ್ಕಾಗಿ ಸಾಕಷ್ಟು ಪ್ರಯತ್ನ ನಡೆದಿದೆ ಎಂದು ತಿಳಿಸಿದ್ದಾರೆ. ಶುಕ್ರವಾರ ಮುಂಬೈ ಇಂಡಿಯನ್ಸ್ ತಂಡದ ಕೋಚ್​ ಮಹೇಲ ಜಯವರ್ದನೆ ಹಾರ್ದಿಕ್​ಗೆ ಏಕೆ ಬೌಲಿಂಗ್ ನೀಡುತ್ತಿಲ್ಲ ಎಂದು ಕೇಳಿದ್ದಕ್ಕೆ, ಅವರು ಬ್ಯಾಟಿಂಗ್​ನಲ್ಲಿ ಉತ್ತಮ ಪ್ರದರ್ಶನವನ್ನು ತೋರಲು ವಿಫಲರಾಗುತ್ತಿದ್ದಾರೆ. ಹಾಗಾಗಿ, ಈ ಸಂದರ್ಭದಲ್ಲಿ ಅವರನ್ನು ಬೌಲಿಂಗ್ ಮಾಡಲು ಒತ್ತಾಯಿಸುವುದು ಅವರಿಗೆ ಮತ್ತಷ್ಟು ಒತ್ತಡವನ್ನುಂಟು ಮಾಡುತ್ತದೆ ಎಂದು ಸ್ಪಷ್ಟಪಡಿಸಿದರು.

ಆದರೆ, ಆಯ್ಕೆ ಸಮಿತಿ ಈಗಾಗಲೇ ಪಾಂಡ್ಯ ಬೌಲಿಂಗ್​ ಮಾಡದಿರುವುದರ ಬಗ್ಗೆ ತಲೆಕೆಡಿಸಿಕೊಂಡಿದೆ. ಅದಕ್ಕಾಗಿ ಈಗಾಗಲೇ ಹಾರ್ದಿಕ್ ಒಂದು ವೇಳೆ ಬೌಲಿಂಗ್ ಮಾಡದಿದ್ದರೆ ವಿಶ್ವಕಪ್‌ನಲ್ಲಿ ಆಡುವ 11ರ ಬಳಗದಲ್ಲಿ ಅವರಿಗೆ ಅವಕಾಶ ನೀಡುವುದು ಕಷ್ಟ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದೆ.

ಪಾಂಡ್ಯ ಜೊತೆಗೆ ಯುವ ಆಟಗಾರರಾದ ಇಶಾನ್​ ಕಿಶನ್, ಸೂರ್ಯಕುಮಾರ್ ಯಾದವ್​ ಮತ್ತು ರಾಹುಲ್​ ಚಹಾರ್​ ಪ್ರದರ್ಶನ ಕೂಡ ಕಳಪೆಯಾಗಿದ್ದು, ಮೀಸಲು ಆಟಗಾರನಾಗಿರುವ ಶ್ರೇಯಸ್ ಅಯ್ಯರ್ ಹಾಗೂ ವಿಶ್ವಕಪ್ ತಂಡದಲ್ಲಿ ಅವಕಾಶವಂಚಿತರಾಗಿರುವ ಯುಜ್ವೇಂದ್ರ ಚಹಾಲ್​ರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕೆಂದು ಅಭಿಮಾನಿಗಳು ಬಿಸಿಸಿಐಗೆ ಮನವಿ ಮಾಡುತ್ತಿದ್ದಾರೆ. ಐಸಿಸಿ ಸೂಪರ್​ 12 ತಂಡಗಳು ತಮ್ಮ ಅಂತಿಮ ತಂಡವನ್ನು ಖಚಿತಪಡಿಸಲು ಅಕ್ಟೋಬರ್​ 16ರವರೆಗೆ ಅವಕಾಶ ನೀಡಿದ್ದು, ಬಿಸಿಸಿಐ ಇಷ್ಟರಲ್ಲಿ ಬಿಸಿಸಿಐ ಕೆಲವು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿದೆ.

ಇದನ್ನು ಓದಿ:ಕ್ರಿಸ್​ಗೇಲ್​ ಬಯೋಬಬಲ್ ಬಿಡಲು ಕಾರಣ ಬಿಚ್ಚಿಟ್ಟ ಪೀಟರ್​ಸನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.