ETV Bharat / sports

ಟಿ-20 ವಿಶ್ವಕಪ್: ಟಾಸ್ ಗೆದ್ದ ಸೌತ್ ಆಫ್ರಿಕಾ ಬೌಲಿಂಗ್ ಆಯ್ಕೆ.. ಬ್ಯಾಟಿಂಗ್​​​ನಲ್ಲಿ​​ ಅಬ್ಬರಿಸುತ್ತಾ ವೆಸ್ಟ್ ಇಂಡೀಸ್​

author img

By

Published : Oct 26, 2021, 3:26 PM IST

south-africa-have-won-the-toss-and-have-opted-to-field
ಟಾಸ್ ಗೆದ್ದ ಸೌತ್ ಆಫ್ರಿಕ ಬೌಲಿಂಗ್ ಆಯ್ಕೆ

ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ವೆಸ್ಟ್​ ಇಂಡೀಸ್ ತಂಡ ಕೇವಲ 55ರನ್​ಗಳಿಗೆ ಸರ್ವಪತನಗೊಂಡು ಸೋಲು ಅನುಭವಿಸಿದ್ದರೆ, ಮತ್ತೊಂದು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್​ಗಳ ಸೋಲು ಕಂಡಿದೆ.

ದುಬೈ: ಐಸಿಸಿ ಟಿ-20 ವಿಶ್ವಕಪ್​ನ ಸೂಪರ್​-12 ಹಂತದ ಗ್ರೂಪ್​​ 1ರಲ್ಲಿ ಇಂದು ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್​ ಇಂಡೀಸ್​ ತಂಡಗಳು ಮುಖಾಮುಖಿಯಾಗಲಿವೆ. ಇದೀಗ ಟಾಸ್​ ಗೆದ್ದ ದಕ್ಷಿಣ ಆಫ್ರಿಕ ತಂಡ ಬೌಲಿಂಗ್ ಆಯ್ದುಕೊಂಡಿದೆ.

ಈಗಾಗಲೇ ಆಡಿರುವ ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ಉಭಯ ತಂಡಗಳು ಇಂದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡುವ ಇರಾದೆಯೊಂದಿಗೆ ಕಣಕ್ಕಿಳಿಯಲಿವೆ.

ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ವೆಸ್ಟ್​ ಇಂಡೀಸ್ ತಂಡ ಕೇವಲ 55ರನ್​ಗಳಿಗೆ ಸರ್ವಪತನಗೊಂಡು ಸೋಲು ಅನುಭವಿಸಿದ್ದರೆ, ಮತ್ತೊಂದು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್​ಗಳ ಸೋಲು ಕಂಡಿದೆ.

ಸಂಭವನೀಯ ಆಟಗಾರರು

ದಕ್ಷಿಣ ಆಫ್ರಿಕಾ: ಕ್ವಿಂಟನ್​ ಡಿಕಾಕ್​(ವಿ.ಕೀ), ಬುವಂ(ಕ್ಯಾಪ್ಟನ್), ದುಸ್ಸೆನ್​, ಮಾರ್ಕ್ರಾಮ್​, ಡೆವಿಡ್ ಮಿಲ್ಲರ್​, ಹೆನ್ರಿಚ್ ಕ್ಲೆಸೆನ್​,ಕೇಶವ್ ಮಹಾರಾಜ್,ಡ್ವೇನಿ ಪ್ರಿಟೋರಿಸ್, ಕಾಗಿಸೊ ರಬಾಡಾ, ಅನ್ರಿಚ್​ ನೊರ್ಟ್ಜ್​, ಶಮ್ಸಿ.

ವೆಸ್ಟ್​​ ಇಂಡೀಸ್: ಸಿಮನ್ಸ್​, ಲಿವಿಸ್​, ಕ್ರಿಸ್ ಗೇಲ್​, ಶಿಮ್ರಾನ್ ಹೆಟ್ಮಾಯರ್​, ಡ್ವೇನ್​ ಬ್ರಾವೋ, ಪೂರನ್​(ವಿ.ಕೀ), ಕಿರಣ್ ಪೊಲಾರ್ಡ್​(ಕ್ಯಾಪ್ಟನ್​​),ಆಂಡ್ರೊ ರೆಸೆಲ್​,ಹೊಸೆನ್, ರವಿ ರಾಂಪಾಲ್​, ಒಬ್ಡಿ ಮ್ಯಾಕೊ.

ಸ್ಥಳ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ, ದುಬೈ

ಇದನ್ನೂ ಓದಿ: ಪಂದ್ಯ ಸೋತಾಗ ಕೊಹ್ಲಿ ತೋರಿಸಿದ ನಡವಳಿಕೆ ಪುಟಿದೇಳುವ ವಿಶ್ವಾಸ ತೋರಿಸುತ್ತದೆ: ಸನಾ ಮೀರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.