ETV Bharat / sports

ನಾಯಕ ವಿರಾಟ್​ ಕೊಹ್ಲಿ ಬೆನ್ನಿಗೆ ನಿಲ್ಲುವುದೇ ನನ್ನ ಕೆಲಸ : ಉಪನಾಯಕ ರಹಾನೆ

author img

By

Published : Feb 3, 2021, 9:32 PM IST

Rahane
ಉಪನಾಯಕ ರಹಾನೆ

ವಿರಾಟ್​ ಕೊಹ್ಲಿಗೆ ಸಲಹೆಗೆ ನೀಡುವ ಕೆಲಸ ನನ್ನದು. ಆದರೆ, ನನ್ನ ಕೆಲಸ ನಿಜವಾಗಿಯೂ ಸುಲಭ. ಅವರು ಕೆಲವು ವಿಷಯಗಳ ಕುರಿತು ನನ್ನನ್ನು ಕೇಳಿದಾಗಲೆಲ್ಲಾ ನನಗೆ ಗೊತ್ತಿರುವ ಸಲಹೆಗಳನ್ನು ನೀಡುತ್ತೇನೆ. ಅವರ ಮತ್ತು ತಂಡದ ಗೊಂದಲಗಳಿಗೆ ಸಲಹೆ ನೀಡುತ್ತೇನೆ..

ಚೆನ್ನೈ: ನನಗೆ ನಾಯಕ ವಿರಾಟ್ ಕೊಹ್ಲಿ. ನಾನು ಉಪನಾಯಕ. ವಿರಾಟ್​ ಕೇಳಿದಾಗ ಸಲಹೆ ನೀಡುವ ಮೂಲಕ ಅವರ ಮತ್ತು ತಂಡದ ಬೆನ್ನಿಗೆ ನಿಲ್ಲುತ್ತೇನೆ. ಉಪನಾಯಕನಾಗಿ ಕೊಡುಗೆ ನೀಡಲು ಇದಕ್ಕಿಂತ ಸಂತೋಷ ಬೇರೆ ಏನಿದೆ ಎಂದು ಭಾರತ ತಂಡದ ಉಪನಾಯಕ ಮತ್ತು ಐತಿಹಾಸಿಕ ಬಾರ್ಡರ್-ಗವಾಸ್ಕರ್​ ಟ್ರೋಫಿ ವಿಜೇತ ಅಜಿಂಕ್ಯಾ ರಹಾನೆ ಹೇಳಿದರು.

ಆಸ್ಟ್ರೇಲಿಯಾದ ವಿರುದ್ಧ ನಡೆದ ಟೆಸ್ಟ್​​ ಸರಣಿಯಲ್ಲಿ ಮೊದಲ ಪಂದ್ಯದ ನಂತರ ಪಿತೃತ್ವ ರಜೆ ಪಡೆದು ಭಾರತಕ್ಕೆ ಮರಳಿದ್ದ ವಿರಾಟ್​​ ಕೊಹ್ಲಿ, ತವರಿನಲ್ಲಿ ಫೆ.5ರಿಂದ ಪ್ರಾರಂಭವಾಗಲಿರುವ ಇಂಗ್ಲೆಂಡ್​ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್​ ಸರಣಿ ಮುನ್ನಡೆಸಲಿದ್ದಾರೆ. ಆಸ್ಟ್ರೇಲಿಯಾದಲ್ಲಿ ಉಳಿದ ಮೂರು ಪಂದ್ಯಗಳಿಗೆ ರಹಾನೆ ಹಂಗಾಮಿ ನಾಯಕತ್ವ ವಹಿಸಿಕೊಂಡಿದ್ದರು.

ಇದನ್ನೂ ಓದು...ಯರಾ ವ್ಯಾಲಿ ಕ್ಲಾಸಿಕ್ ಟೂರ್ನಿ.. ಕ್ವಾರ್ಟರ್​ ಫೈನಲ್ ಪ್ರವೇಶಿಸಿದ ಸೆರೆನಾ, ಆ್ಯಶ್ ಬಾರ್ಟಿ..

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರಾಟ್​ ಕೊಹ್ಲಿಗೆ ಸಲಹೆಗೆ ನೀಡುವ ಕೆಲಸ ನನ್ನದು. ಆದರೆ, ನನ್ನ ಕೆಲಸ ನಿಜವಾಗಿಯೂ ಸುಲಭ. ಅವರು ಕೆಲವು ವಿಷಯಗಳ ಕುರಿತು ನನ್ನನ್ನು ಕೇಳಿದಾಗಲೆಲ್ಲಾ ನನಗೆ ಗೊತ್ತಿರುವ ಸಲಹೆಗಳನ್ನು ನೀಡುತ್ತೇನೆ. ಅವರ ಮತ್ತು ತಂಡದ ಗೊಂದಲಗಳಿಗೆ ಸಲಹೆ ನೀಡುತ್ತೇನೆ.

ವಿರಾಟ್​ ನಾಯಕನಾಗಿರುವ ಸಂದರ್ಭದಲ್ಲಿ ಅವರ ಹಿಂದೆ ನಿಲ್ಲುವುದೇ ನನ್ನ ಕೆಲಸ ಎಂದು ವರದಿಗಾರರೊಬ್ಬರ ಪ್ರಶ್ನೆಗೆ ಉತ್ತರಿಸಿದರು. ನನಗೆ ವಿರಾಟ್​ ಕೊಹ್ಲಿಯೇ ನಾಯಕ. ನಾನು ಉಪನಾಯಕ. ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಮೊದಲ ಪಂದ್ಯದ ನಂತರ ಕೌಟುಂಬಿಕ ಕಾರಣಗಳಿಂದ ಅವರು ಭಾರತಕ್ಕೆ ಮರಳಿದರು.

ಹೀಗಾಗಿ, ನಾಯಕತ್ವ ವಹಿಸಿಕೊಂಡೆ. ಈಗ ವಿರಾಟ್​ ತಂಡಕ್ಕೆ ಮರಳಿರುವುದು ಸಂತಸದ ಸಂಗತಿ. ನಾವು ಒಟ್ಟಾಗಿ ಮತ್ತು ನಮ್ಮ ಸಾಮರ್ಥ್ಯ ತೋರಿಸಲು ಪ್ರಯತ್ನಿಸುತ್ತೇವೆ ಎಂದು ನಾಯಕತ್ವ ಬದಲಾವಣೆ ಕುರಿತ ಊಹಾಪೋಹಗಳಿಗೆ ತೆರೆ ಎಳೆದರು. ವಿರಾಟ್​ ಅನುಪಸ್ಥಿತಿಯಲ್ಲಿ ಆಸೀಸ್​ ವಿರುದ್ಧದ ಎರಡನೇ ಪಂದ್ಯಕ್ಕೆ ನಾಯಕತ್ವ ವಹಿಸಿಕೊಂಡಿದ್ದ 32 ವರ್ಷದ ರಹಾನೆ, ಆಕರ್ಷಕ ಶತಕ ಬಾರಿಸಿ ಪಂದ್ಯ ಗೆಲ್ಲಿಸಿಕೊಟ್ಟರು.

ನಂತರ ಸರಣಿಯನ್ನು ಉಳಿಸಿಕೊಂಡರು. ಆ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಸ್ಥಾನದಲ್ಲಿ (4ನೇ ಸ್ಥಾನ) ಕಣಕ್ಕಿಳಿದರು. ಅದಕ್ಕೂ ಮೊದಲು 5ನೇ ಸ್ಥಾನದಲ್ಲಿ ಕ್ರೀಸ್​ಗೆ ಬರುತ್ತಿದ್ದರು. ಉಳಿದ ಎರಡು ಪಂದ್ಯಗಳಲ್ಲಿ 1 ಡ್ರಾ ಸಾಧಿಸಿದರೆ, ಮತ್ತೊಂದು ಪಂದ್ಯ 32 ವರ್ಷಗಳ ದಾಖಲೆ ಮುರಿದಿದ್ದಲ್ಲದೆ, ಸರಣಿಯನ್ನೂ ಕೈವಶ ಮಾಡಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.