ETV Bharat / sports

ಟಿ-20 ವಿಶ್ವಕಪ್​: ಆಸ್ಟ್ರೇಲಿಯಾ ಪರ ಆರಂಭಿಕರಾಗಿ ಡೇವಿಡ್ ವಾರ್ನರ್-ಫಿಂಚ್​​ ಕಣಕ್ಕೆ

author img

By

Published : Oct 6, 2021, 1:06 PM IST

icc-t20-wc-finch-confirms-warner-as-his-opening-partner
ಡೇವಿಡ್ ವಾರ್ನರ್-ಫಿಂಚ್

ಟಿ-20 ವಿಶ್ವಕಪ್​​ಗಾಗಿ ಈಗಾಗಲೇ ಆಸಿಸ್ ತಂಡ ಪ್ರಕಟವಾಗಿದ್ದು, ಆರಂಭಿಕರಾಗಿ ಯಾರು ಮೈದಾನಕ್ಕಿಳಿಯಲಿದ್ದಾರೆ ಎಂಬ ಕುತೂಹಲಕ್ಕೆ ನಾಯಕ ಫಿಂಚ್ ಉತ್ತರಿಸಿದ್ದಾರೆ.

ಮೆಲ್ಬೋರ್ನ್​ (ಆಸ್ಟ್ರೇಲಿಯಾ): ಮುಂಬರುವ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡದ ಪರ ಆರಂಭಿಕರಾಗಿ ಡೇವಿಡ್ ವಾರ್ನರ್​ ಮೈದಾನಕ್ಕಿಳಿಯಲಿದ್ದಾರೆ ಎಂದು ಟಿ-20 ತಂಡದ ನಾಯಕ ಆ್ಯರನ್ ಫಿಂಚ್ ಹೇಳಿದ್ದಾರೆ.

2020ರ ಸೆಪ್ಟೆಂಬರ್‌ನಿಂದ ವಾರ್ನರ್​ ಆಸ್ಟ್ರೇಲಿಯಾ ಪರವಾಗಿ ಒಂದೇ ಒಂದು ಟಿ-20 ಪಂದ್ಯವಾಡಿಲ್ಲ. ಜೊತೆಗೆ ಗಾಯದ ಸಮಸ್ಯೆ ಹಾಗೂ ಬೇರೆ ಪಂದ್ಯಗಳ ಕಾರಣದಿಂದಾಗಿಯೂ ಅವರು 14 ಪಂದ್ಯಗಳಿಂದ ಹೊರಗುಳಿದಿದ್ದರು.

ಈ ನಡುವೆ ಐಪಿಎಲ್​ ಟೂರ್ನಿಯಲ್ಲಿ ಕಳಪೆ ಪ್ರದರ್ಶನದಿಂದಾಗಿ ಹೈದರಾಬಾದ್ ತಂಡದಿಂದಲೂ ಹೊರಗುಳಿಯಬೇಕಾಯಿತು. ಅವರ ಫಾರ್ಮ್ ಕುರಿತು ಟೀಕೆಗಳು ಕೇಳಿಬಂದ ನಡುವೆಯೂ ಇದೀಗ ಆಸ್ಟ್ರೇಲಿಯಾ ಆರಂಭಿಕರಾಗಿ ವಾರ್ನರ್‌ ಮೈದಾನಕ್ಕಿಳಿಯಲಿದ್ದಾರೆ ಎಂದು ಫಿಂಚ್ ದೃಢಪಡಿಸಿದ್ದಾರೆ.

ಫಿಂಚ್ ಸಹ ಗಾಯದ ಸಮಸ್ಯೆಯಿಂದ ಹೊರಬಂದು ಟಿ-20 ವಿಶ್ವಕಪ್ ಆಡಲಿದ್ದಾರೆ. ಇದಕ್ಕೂ ಮೊದಲು ಮೊಣಕಾಲು ನೋವಿನ ಸಮಸ್ಯೆಯಿಂದ ಬಾಂಗ್ಲಾದೇಶ ವಿರುದ್ಧದ ಪ್ರವಾಸದಲ್ಲೂ ಭಾಗಿಯಾಗಲಿಲ್ಲ.

'ಕಳೆದೆರಡು ವಾರದಿಂದ ನಾನು ಚೇತರಿಸಿಕೊಳ್ಳುತ್ತಿದ್ದೇನೆ. ಈಗ ಹೆಚ್ಚು ಫಿಟ್ ಮತ್ತು ಫೈನ್ ಎನಿಸುತ್ತಿದೆ. ಟಿ-20 ತಂಡ ಸೇರಿಕೊಳ್ಳಲು ಉತ್ಸುಕನಾಗಿದ್ದೇನೆ. ಮೊಣಕಾಲಿನ ಸಮಸ್ಯೆಯಿಂದ ಹೊರಬಂದಿದ್ದೇನೆ. ಈಗ ಯಾವುದೇ ಸಮಸ್ಯೆ ಇಲ್ಲ' ಎಂದು ಅವರು ತಿಳಿಸಿದ್ದಾರೆ.

ಟಿ-20 ಟೂರ್ನಿಗೆ ಆಸ್ಟ್ರೇಲಿಯಾ ತಂಡ ಹೀಗಿದೆ..

ಆ್ಯರನ್ ಫಿಂಚ್ (ನಾ), ಆಷ್ಟನ್ ಅಗರ್, ಪ್ಯಾಟ್ ಕಮಿನ್ಸ್ (ವಿ.ಕೀ), ಜೋಶ್ ಹ್ಯಾಜಲ್‌ವುಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮಿಚೆಲ್ ಸ್ವೇಪ್ಸನ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್ ಹಾಗು ಆಡಮ್ ಜಂಪಾ.

ಇದನ್ನೂ ಓದಿ: ಟಿ20 ವಿಶ್ವಕಪ್ ಆಯೋಜನೆಯಿಂದ ಬಿಸಿಸಿಐ ಪಡೆಯುವ ಲಾಭ ಎಷ್ಟು ಕೋಟಿ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.