ETV Bharat / sports

ರೋಹಿತ್, ಕಾರ್ತಿಕ್ ಸ್ಫೋಟಕ ಆಟ.. ವೆಸ್ಟ್ ಇಂಡೀಸ್ ಗೆಲುವಿಗೆ 191ರನ್​ಗಳ ಟಾರ್ಗೆಟ್​

author img

By

Published : Jul 29, 2022, 10:24 PM IST

India vs West Indies
India vs West Indies

ರೋಹಿತ್ ಶರ್ಮಾ(64) ಹಾಗೂ ದಿನೇಶ್ ಕಾರ್ತಿಕ್​(41) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ 190ರನ್​ಗಳಿಕೆ ಮಾಡಿದ್ದು, ಎದುರಾಳಿ ತಂಡಕ್ಕೆ ಬೃಹತ್ ರನ್​ಗಳ ಟಾರ್ಗೆಟ್ ಮುಂದಿಟ್ಟಿದೆ.

ತರೊಬಾ(ವೆಸ್ಟ್ ಇಂಡೀಸ್​): ಆತಿಥೇಯ ವೆಸ್ಟ್ ಇಂಡೀಸ್​ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಟಾಸ್​ ಸೋತ ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ 20 ಓವರ್​​​ಗಳಲ್ಲಿ 6 ವಿಕೆಟ್​ನಷ್ಟಕ್ಕೆ 190ರನ್​​ಗಳಿಕೆ ಮಾಡಿದೆ. ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯದ ಹೊರತಾಗಿ ಮಿಂಚಿದ ರೋಹಿತ್ ಶರ್ಮಾ ಹಾಗೂ ದಿನೇಶ್ ಕಾರ್ತಿಕ್ ತಂಡಕ್ಕೆ ಉತ್ತಮ ಕಾಣಿಕೆ ನೀಡಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟಿಂಗ್​ ನಡೆಸಲು ಕಣಕ್ಕಿಳಿದ ಭಾರತಕ್ಕೆ ರೋಹಿತ್ ಶರ್ಮಾ(64), ಸೂರ್ಯಕುಮಾರ್ ಯಾದವ್​​​(24) ಉತ್ತಮ ಜೊತೆಯಾಟವಾಡಿದರು. ಈ ಜೋಡಿ ಮೊದಲ ವಿಕೆಟ್​ನಷ್ಟಕ್ಕೆ 44ರನ್​​ಗಳಿಕೆ ಮಾಡಿತು. 24ರನ್​​ಗಳಿಕೆ ಮಾಡಿದ್ದ ವೇಳೆ ಹೋಲ್ಡರ್ ಓವರ್​ನಲ್ಲಿ ಯಾದವ್ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಬಂದ ಅಯ್ಯರ್​(0) ಔಟಾದರೆ, ಪಂತ್​ 14ರನ್​​ಗಳಿಸಿ ಪೆವಿಲಿಯನ್​ ಸೇರಿಕೊಂಡರು. ಇದರ ಬೆನ್ನಲ್ಲೇ ಪಾಂಡ್ಯ(1) ನಿರಾಸೆ ಮೂಡಿಸಿದರು.

ಸ್ಫೋಟಕ ಆಟವಾಡಿದ ಕಾರ್ತಿಕ್​: ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾಗೆ ಕೊನೆಯದಾಗಿ ಹಿರಿಯ ಆಟಗಾರ ದಿನೇಶ್ ಕಾರ್ತಿಕ್​(41) ಆಧಾರವಾದರು. ತಾವು ಎದುರಿಸಿದ 19 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್​ ಸೇರಿ 41ರನ್​ಗಳಿಸಿ ಅಜೇಯರಾಗಿ ಉಳಿದರು. ಇವರಿಗೆ ಸಾಥ್ ನೀಡಿದ ಅಶ್ವಿನ್​ ಅಜೇಯ 13ರನ್​ಗಳಿಕೆ ಮಾಡಿದರು.

ಹೊಸ ದಾಖಲೆ ಬರೆದ ರೋಹಿತ್: ಟೀಂ ಇಂಡಿಯಾ ಕ್ರಿಕೆಟ್​ನಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಹೊಸದೊಂದು ದಾಖಲೆ ಬರೆದಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ ರೋಹಿತ್ ಶರ್ಮಾ 129 ಪಂದ್ಯಗಳನ್ನಾಡಿ​ ಅತಿ ಹೆಚ್ಚು ರನ್​ಗಳಿಕೆ ಮಾಡಿರುವ ಸಾಧನೆ ಮಾಡಿದ್ದು, ಈ ಮೂಲಕ ಮಾರ್ಟಿನ್ ಗಪ್ಟಿಲ್ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.

ಇದನ್ನೂ ಓದಿರಿ: ಟಿ-20 ಪಂದ್ಯ ನಡೆಯುತ್ತಿದ್ದಾಗ ಮೈದಾನದಲ್ಲಿ ಬಾಂಬ್​​ ಸ್ಫೋಟ.. ನಾಲ್ವರಿಗೆ ಗಾಯ

ವೆಸ್ಟ್ ಇಂಡೀಸ್ ಪರ ಜೋಸೆಪ್ 2 ವಿಕೆಟ್ ಪಡೆದರೆ, ಹೋಲ್ಡರ್, ಒಬ್ಡೆ, ಕಿಮೋ ತಲಾ 1 ವಿಕೆಟ್ ಪಡೆದುಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.