ETV Bharat / sports

IND vs SA 2nd Test: 2ನೇ ಇನ್ನಿಂಗ್ಸ್​​ನಲ್ಲಿ 85/2, 58ರನ್​ ಮುನ್ನಡೆ ಪಡೆದ ರಾಹುಲ್​ ಪಡೆ

author img

By

Published : Jan 4, 2022, 10:11 PM IST

IND vs SA 2nd Test: ಹರಿಣಗಳ ವಿರುದ್ಧದ ಎರಡನೇ ಟೆಸ್ಟ್​​ ಪಂದ್ಯದಲ್ಲಿ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್​​ನಲ್ಲಿ ಬ್ಯಾಟಿಂಗ್​ ಆರಂಭಿಸಿದ್ದು, 85ರನ್​ಗಳಿಕೆ ಮಾಡುವಷ್ಟರಲ್ಲಿ ಎರಡು ವಿಕೆಟ್​ ಕಳೆದುಕೊಂಡಿದ್ದು, 58ರನ್​​ ಮುನ್ನಡೆ ಪಡೆದುಕೊಂಡಿದೆ.

India vs South Africa 2nd Test Match
India vs South Africa 2nd Test Match

ಜೋಹಾನ್ಸ್​​​​​ಬರ್ಗ್​​(ದಕ್ಷಿಣ ಆಫ್ರಿಕಾ): ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್​​​ ಪಂದ್ಯದಲ್ಲಿ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್​​ನಲ್ಲೂ ಬ್ಯಾಟಿಂಗ್​ ವೈಫಲ್ಯಕ್ಕೊಳಗಾಗಿದೆ. ಎರಡನೇ ದಿನದಾಟದ ಅಂತ್ಯಕ್ಕೆ 85ರನ್​​ಗಳಿಸುವ ಮೂಲಕ ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿದೆ.

ಇಲ್ಲಿನ ವಾಂಡರರ್ಸ್​​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ 202 ರನ್​​ಗಳಿಕೆ ಮಾಡಿ ಮೊದಲ ದಿನವೇ ಆಲೌಟ್ ಆಯಿತು. ಭಾರತದ ಇನ್ನಿಂಗ್ಸ್​​ಗೆ ಪ್ರತಿಯಾಗಿ ಬ್ಯಾಟಿಂಗ್​ ನಡೆಸಿದ ಆಫ್ರಿಕಾ ತಂಡ ಪೀಟರ್ಸನ್​​ ಹಾಗೂ ತೆಂಬಾ ಬವುಮಾ ಅವರ ಅರ್ಧಶತಕದ ನೆರವಿನಿಂದ ತನ್ನೆಲ್ಲ ವಿಕೆಟ್ ಕಳೆದುಕೊಂಡು 229 ರನ್​ಗಳಿಕೆ ಮಾಡಿದ್ದು, 27ರನ್​​ಗಳ ಮುನ್ನಡೆ ಸಾಧಿಸಿತು. ಭಾರತದ ಪರ ಶಾರ್ದೂಲ್ ಠಾಕೂರ್ 7 ವಿಕೆಟ್ ಪಡೆದರೆ, ಇವರಿಗೆ ಸಾಥ್​ ನೀಡಿರುವ ಮೊಹಮ್ಮದ್ ಶಮಿ 2 ವಿಕೆಟ್ ಹಾಗೂ ಬುಮ್ರಾ 1 ವಿಕೆಟ್ ಕಬಳಿಸಿದರು.

ಇದನ್ನೂ ಓದಿರಿ: ಒಂದಲ್ಲ, ಎರಡಲ್ಲ, ಬರೋಬ್ಬರಿ 11 ಸಲ ಕೋವಿಡ್​ ಲಸಿಕೆ ಪಡೆದ ವೃದ್ಧ: ಹೇಳಿದ್ದೇನು ಗೊತ್ತಾ?

ಇದೀಗ ಎರಡನೇ ಇನ್ನಿಂಗ್ಸ್​ ಆರಂಭ ಮಾಡಿರುವ ಟೀಂ ಇಂಡಿಯಾ ನಾಯಕ ರಾಹುಲ್​​(8) ಹಾಗೂ ಮಯಾಂಕ್​​ ಅಗರವಾಲ್​​ 23ರನ್​​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದ್ದಾರೆ. ಇವರ ವಿಕೆಟ್ ಪಡೆದುಕೊಳ್ಳುವಲ್ಲಿ ಜಾನ್ಸೆನ್​ ಹಾಗೂ ಒಲಿವಿರ್​ ಯಶಸ್ವಿಯಾಗಿದ್ದಾರೆ.

ಬ್ಯಾಟಿಂಗ್ ಕಾಯ್ದುಕೊಂಡ ರಹಾನೆ, ಪೂಜಾರೆ

ಮೊದಲ ಇನ್ನಿಂಗ್ಸ್​​ನಲ್ಲಿ ಬ್ಯಾಟಿಂಗ್​ ವೈಫಲ್ಯ ಅನುಭವಿಸಿರುವ ರಹಾನೆ ಹಾಗೂ ಚೇತೇಶ್ವರ್​ ಪೂಜಾರಾ ನಾಳೆಗೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ. ರಹಾನೆ 7 ಬೌಂಡರಿ ಸೇರಿದಂತೆ ಅಜೇಯ 35ರನ್​ಗಳಿಕೆ ಮಾಡಿದ್ದು, ರಹಾನೆ 11ರನ್​ಗಳಿಕೆ ಮಾಡಿದ್ದಾರೆ. ತಂಡ 20 ಓವರ್​​ಗಳಲ್ಲಿ 2 ವಿಕೆಟ್​ನಷ್ಟಕ್ಕೆ 85ರನ್​​ಗಳಿಸಿದೆ. ಮೂರು ದಿನಗಳ ಆಟ ಬಾಕಿ ಉಳಿದಿದ್ದು, ಟೆಸ್ಟ್​​ ಮತ್ತಷ್ಟು ಕುತೂಹಲ ಮೂಡಿಸಿದೆ.

ವಿಶೇಷ ದಾಖಲೆ ಬರೆದ ಶಾರ್ದೂಲ್

ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ 7 ವಿಕೆಟ್​ ಪಡೆದುಕೊಂಡಿರುವ ಶಾರ್ದೂಲ್ ಠಾಕೂರ್ ವಿಶೇಷ ದಾಖಲೆ ಬರೆದಿದ್ದಾರೆ. ಹರಿಣಗಳ ನಾಡಲ್ಲಿ ಇಷ್ಟೊಂದು ವಿಕೆಟ್​ ಪಡೆದುಕೊಂಡಿರುವ ಭಾರತದ ಮೊದಲ ವೇಗಿ ಎಂಬ ಸಾಧನೆ ಸಹ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.