ETV Bharat / sports

IND vs SA: ಹರಿಣಗಳ ಬೌಲಿಂಗ್​ ದಾಳಿಗೆ ರಾಹುಲ್​ ಪಡೆ ತತ್ತರ, ಮೊದಲ ಇನ್ನಿಂಗ್ಸ್​​ನಲ್ಲಿ 202 ರನ್​ಗಳಿಗೆ ಆಲೌಟ್​

author img

By

Published : Jan 3, 2022, 8:01 PM IST

India vs South Africa 2nd Test: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್​​ ಪಂದ್ಯದಲ್ಲಿ ಬ್ಯಾಟಿಂಗ್​ ವೈಫಲ್ಯ ಅನುಭವಿಸಿರುವ ಕೆ.ಎಲ್‌.ರಾಹುಲ್​ ಪಡೆ ಮೊದಲ ಇನ್ನಿಂಗ್ಸ್​​ನಲ್ಲಿ ಕೇವಲ 202 ರನ್​ಗಳಿಗೆ ಆಲೌಟ್​​ ಆಗಿದೆ.

India vs South Africa 2nd Test
India vs South Africa 2nd Test

ಜೋಹಾನ್ಸ್​ಬರ್ಗ್​: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದೆ. ಮೊದಲ ಇನ್ನಿಂಗ್ಸ್​​ನಲ್ಲಿ ಕೇವಲ 202 ರನ್​ಗಳಿಗೆ ಸರ್ವಪತನಗೊಂಡಿತು.

ಇಲ್ಲಿನ ವಾಂಡರರ್ಸ್​​​ ಮೈದಾನದಲ್ಲಿ ಆರಂಭಗೊಂಡಿರುವ ಎರಡನೇ ಟೆಸ್ಟ್​ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​​ ಆರಂಭಿಸಿದ ಟೀಂ ಇಂಡಿಯಾ 36 ರನ್ ​ಗಳಿಸುವಷ್ಟರಲ್ಲೇ ಆರಂಭಿಕ ಆಟಗಾರ ಮಯಾಂಕ್​ ಅಗರವಾಲ್ ​​(26) ವಿಕೆಟ್ ಕಳೆದುಕೊಂಡಿತು. ಇದರ ಬೆನ್ನಲ್ಲೇ ಬಂದ ಪೂಜಾರಾ (3), ರಹಾನೆ(0) ಮತ್ತೊಮ್ಮೆ ನಿರಾಸೆ ಮೂಡಿಸಿದರು.

ಒಂದೆಡೆ ವಿಕೆಟ್​​ ಪತನಗೊಳ್ಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಆಕರ್ಷಕ ಇನ್ನಿಂಗ್ಸ್ ಕಟ್ಟಿದ ರಾಹುಲ್​ ಟೆಸ್ಟ್​ ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲೇ ಅರ್ಧಶತಕ ಸಾಧನೆ ಮಾಡಿದರು.

ಬಳಿಕ, ಹನುಮ ವಿಹಾರಿ 20 ರನ್​, ರಿಷಭ್ ಪಂತ್ ​17 ರನ್ ​​ಗಳಿಸಿ ಪೆವಿಲಿಯನ್​​​ ಸೇರಿಕೊಂಡರು. ಈ ವೇಳೆ ಮೈದಾನಕ್ಕೆ ಬಂದ ಆರ್​.ಅಶ್ವಿನ್​​ ತಾವು ಎದುರಿಸಿದ 50 ಎಸೆತಗಳಲ್ಲಿ 46 ರನ್​ಗಳಿಕೆ ಮಾಡಿ ತಂಡದ ಮೊತ್ತ ಹಿಗ್ಗಿಸುವಲ್ಲಿ ಯಶಸ್ವಿಯಾದರು. ಆದರೆ ಆಲ್​ರೌಂಡರ್​​​ ಶಾರ್ದೂಲ್ ಠಾಕೂರ್ ​ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು.

ಬೌಲರ್​ಗಳಾದ ಮೊಹಮ್ಮದ್ ಶಮಿ 9 ರನ್, ಸಿರಾಜ್​ 1 ರನ್​ ಹಾಗೂ ಉಪನಾಯಕ ಜಸ್ಪ್ರೀತ್ ಬುಮ್ರಾ ಸಿಕ್ಸರ್​ ಸಮೇತ 14 ರನ್​ಗಳಿಸಿ ಅಜೇಯರಾಗುಳಿದರು. ತಂಡ ಕೊನೆಯದಾಗಿ 63.1 ಓವರ್​​ಗಳಲ್ಲಿ ತನ್ನೆಲ್ಲ ವಿಕೆಟ್​ ಕಳೆದುಕೊಂಡು 202 ರನ್​ಗಳಿಕೆ ಮಾಡಿತು. ದಕ್ಷಿಣ ಆಫ್ರಿಕಾ ಪರ ಬೌಲಿಂಗ್​ನಲ್ಲಿ ಮಿಂಚಿದ ಮಾರ್ಕೋ ಜಾನ್ಸೆನ್​ 4 ವಿಕೆಟ್​, ರಬಾಡಾ, ಒಲಿವಿರ್ ತಲಾ​ 3 ವಿಕೆಟ್ ಪಡೆದುಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.