IND vs NZ 3rd ODI: ಕಿವೀಸ್ ಕ್ಲೀನ್ಸ್ವೀಪ್, ಏಕದಿನ ಶ್ರೇಯಾಂಕದಲ್ಲಿ ಭಾರತದ ಅಧಿಪತ್ಯ
Updated on: Jan 24, 2023, 10:57 PM IST

IND vs NZ 3rd ODI: ಕಿವೀಸ್ ಕ್ಲೀನ್ಸ್ವೀಪ್, ಏಕದಿನ ಶ್ರೇಯಾಂಕದಲ್ಲಿ ಭಾರತದ ಅಧಿಪತ್ಯ
Updated on: Jan 24, 2023, 10:57 PM IST
ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿಯಲ್ಲಿ ಕ್ಲೀನ್ಸ್ವೀಪ್ ಸಾಧಿಸಿರುವ ಭಾರತ ಐಸಿಸಿ ಶ್ರೇಯಾಂಕದಲ್ಲಿ ನಂ.1 ಪಟ್ಟ ಅಲಂಕರಿಸಿದೆ.
ಇಂದೋರ್(ಮಧ್ಯಪ್ರದೇಶ): ಡೆವೊನ್ ಕಾನ್ವೇಯ ಶತಕದ ನಡುವೆಯೂ ಭಾರತೀಯ ಬೌಲರ್ಗಳ ಕರಾರುವಕ್ಕು ದಾಳಿಯಿಂದ 90ರನ್ಗಳ ಜಯ ಭಾರತದ್ದಾಗಿದೆ. ಕಿವೀಸ್ ಎದುರಿನ ಏಕದಿನ ಸರಣಿಯನ್ನು ವೈಟ್ವಾಶ್ ಮಾಡಿರುವ ಬ್ಲೂ ಬಾಯ್ಸ್ ಐಸಿಸಿ ರ್ಯಾಂಕಿಂಗ್ನಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿದೆ. ಭಾರತದ ಪರ ಇಬ್ಬರು ಆರಂಭಿಕರು ಶತಕ ಗಳಿಸಿ, ದ್ವಿಶತಕದ ಜೊತೆಯಾಟ ನೀಡಿದ್ದರು. ಅಲ್ಲದೇ ಉಪನಾಯಕ ಹಾರ್ದಿಕ್ ಪಾಂಡ್ಯರ ಅರ್ಧಶತಕದ ನೆರವಿನಿಂದ ಭಾರತ 385 ರನ್ ಗಳಿಸಿತ್ತು.
ಭಾರತ ನೀಡಿದ್ದ ಬೃಹತ್ ಮೊತ್ತವನ್ನು ಬೆನ್ನುಹತ್ತಿದ್ದ ಬ್ಲಾಕ್ಕ್ಯಾಪ್ಸ 41.2 ಓವರ್ಗೆ ತನ್ನೆಲ್ಲಾ ವಿಕೇಟ್ಗಳನ್ನು ಕೆಳೆದುಕೊಂಡು 295 ರನ್ ಗಳಿಸಿತ್ತು. ಭಾರತ 90 ರನ್ಗಳ ಅಂತರದ ಗೆಲುವು ಸಾಧಿಸಿತು. ಭಾರತದ ಪರ ಸ್ವಿನ್ನಲ್ಲಿ ಕುಲ್ಚಾ ಜೋಡಿ 5 ವಿಕೆಟ್ ತೆಗೆದು ಮೋಡಿ ಮಾಡಿದರು. ವೇಗದಲ್ಲಿ ಶಾರ್ದೂಲ್ ಠಾಕೂರ್ 3 ವಿಕೆಟ್ ಕಬಳಿಸಿ ಪಾರಮ್ಯ ಮೆರೆದರು.
-
The new No.1 team in the @MRFWorldwide ICC Men's ODI Team Rankings 🤩
— ICC (@ICC) January 24, 2023
More 👉 https://t.co/sye7IF4Y6f pic.twitter.com/hZq89ZPO31
ಬ್ಯಾಟಿಂಗ್ನಲ್ಲಿ ಅರ್ಧ ಶತಕ ಗಳಿಸಿ ಮಿಂಚಿದ್ದ ಉಪನಾಯಕ ಹಾರ್ದಿಕ್ ಇಂದು ಮೊದಲ ಓವರ್ ಮಾಡಿದರು. ಪ್ರಥಮ ಓವರ್ನ ಎರಡನೇ ಎಸೆತದಲ್ಲೇ ಫಿನ್ ಅಲೆನ್ ಅವರನ್ನು ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ದಾರಿ ಹಿಡಿದರು. ನಂತರ ಬಂದ ಹೆನ್ರಿ ನಿಕೋಲ್ಸ್ ಆರಂಭಿಕ ಡೆವೊನ್ ಕಾನ್ವೇಯೊಂದಿಗೆ ಉತ್ತಮ ಜೊತೆಯಾಟ ಮಾಡಿದರು. 42 ರನ್ ಗಳಿಸಿ ಆಡುತ್ತಿದ್ದ ಹೆನ್ರಿ ನಿಕೋಲ್ಸ್ ಕುಲ್ದೀಪ್ಗೆ ಎಲ್ಬಿಡ್ಬ್ಯೂಗೆ ಬಲಿಯಾದರು.
ಮೂರನೇ ವಿಕೆಟ್ ಆಗಿ ಬಂದ ಡೇರಿಲ್ ಮಿಚೆಲ್ 24 ರನ್ಗೆ ಠಾಕೂರ್ಗೆ ವಿಕೆಟ್ ಒಪ್ಪಿಸಿರು. ನಂತರ ಬಂದ ಬ್ಲಾಕ್ಕ್ಯಾಪ್ಸ್ ನಾಯಕ ಟಾಮ್ ಲ್ಯಾಥಮ್ ಶಾರ್ದೂಲ್ ಠಾಕೂರ್ಗೆ ಗೋಲ್ಡನ್ ಡಕ್ ಆದರು. ಎರಡನೇ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದ ಗ್ಲೆನ್ ಫಿಲಿಪ್ಸ್ 5ರನ್ಗೆ ಪೆವಿಲಿಯನ್ ಹಾದಿ ಹಿಡಿದರು. ಮೊದಲ ಪಂದ್ಯದಲ್ಲಿ ಶತಕ ಗಳಿಸಿ ತಂಡವನ್ನು ಗೆಲುವಿನ ಹಂತಕ್ಕೆ ತೆಗೆದುಕೊಂಡು ಹೋಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮೈಕೆಲ್ ಬ್ರೇಸ್‌ವೆಲ್ ಇಂದು ಹೆಚ್ಚಿನ ಪ್ರದರ್ಶನ ನೀಡುವಲ್ಲಿ ವಿಫಲವಾಗಿ 26 ರನ್ಗೆ ಔಟ್ ಆದರು.
-
Captain @ImRo45 collects the trophy as #TeamIndia clinch the #INDvNZ ODI series 3⃣-0️⃣ 👏🏻👏🏻
— BCCI (@BCCI) January 24, 2023
Scorecard ▶️ https://t.co/ojTz5RqWZf…@mastercardindia pic.twitter.com/5D5lO6AryG
ಒಂದೆಡೆ ವಿಕೆಟ್ ಪತನವಾದರೂ ಡೆವೊನ್ ಕಾನ್ವೇ ಸ್ಥಿರ ಪ್ರದರ್ಶನ ಮುಂದುವರೆಸಿದ್ದರು. 100 ಎಸೆತಗಳನ್ನು ಎದುರಿಸಿದ ಅವರು 8 ಸಿಕ್ಸರ್ ಮತ್ತು 12 ಬೌಂಡರಿಗಳಿಂದ 138 ರನ್ ಗಲಿಸಿದರು. ನ್ಯೂಜಿಲೆಂಡ್ನ್ನು ಗೆಲುವಿನ ದಡಕ್ಕೆ ಸೇರಿಸುತ್ತಾರೆ ಎನ್ನುವ ಹೊತ್ತಿಗೆ ಉಮ್ರಾನ್ ಮಲಿಕ್ಗೆ ವಿಕೆಟ್ ಒಪ್ಪಿಸಿದರು. ಮಿಚೆಲ್ ಸ್ಯಾಂಟ್ನರ್ ಆಲ್ ರೌಂಡ್ ಆಟಕ್ಕೆ ಮುಂದಾದರು ಆದರೆ ಚಹಾಲ್ ಬೌಲನ್ನು ಬೌಂಡರಿ ದಾಟಿಸುವ ವೇಗದಲ್ಲಿ ವಿರಾಟ್ಗೆ ಕ್ಯಾಚ್ನೀಡಿದರು. ನಂತರ ಬಂದ ಜಾಕೋಬ್ ಡಫಿ(0) ಮತ್ತು ಲಾಕಿ ಫರ್ಗುಸನ್(7) ಔಟ್ ಆದರು.
-
3⃣6⃣0⃣ runs in three matches 🙌@ShubmanGill becomes the Player of the Series for his sensational performance with the bat, including a double-hundred in the #INDvNZ ODI series👏👏
— BCCI (@BCCI) January 24, 2023
Scorecard ▶️ https://t.co/ojTz5RqWZf…@mastercardindia pic.twitter.com/77HJHLgJoL
ಭಾರತದ ಪರ ಮತ್ತೆ ಕುಲ್ಚಾ ಜೋಡಿ ಮೋಡಿ ಮಾಡಿತು. ಕುಲ್ದೀಪ್ ಯಾದವ್ 3 ಮತ್ತು ಚಹಾಲ್ ಎರಡು ಪ್ರಮುಖ ವಿಕೆಟ್ ಪಡೆಯುವ ಮೂಲಕ ಮತ್ತೆ ತಮ್ಮ ಕೈಚಳಕ ಮೆರೆದರು. ವೇಗದ ಬೌಲಿಂಗ್ ವಿಭಾಗದಲ್ಲಿ ಶಾರ್ದೂಲ್ ಠಾಕೂರ್ 3 ವಿಕೆಟ್ ಮತ್ತು ಹಾರ್ದಿಕ್, ಉಮ್ರಾನ್ ತಲಾ ಒಂದು ವಿಕೆಟ್ ಪಡೆದರು.
ಇಂದಿನ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಮಿಂಚಿದ ಶಾರ್ದೂಲ್ ಠಾಕೂರ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಮತ್ತು ಮೊದಲ ಪಂದ್ಯದಲ್ಲಿ ದ್ವಿಶತಕ, ಎರಡನೇ ಪಂದ್ಯದಲ್ಲಿ 41 ರನ್ ಹಾಗೇ ಇಂದಿನ ಪಂದ್ಯದಲ್ಲಿ 112 ರನ್ಗಳಿಸಿ ಸರಣಿಯಲ್ಲಿ ಒಟ್ಟು 360 ರನ್ಗಳಿಸಿದ ಗಿಲ್ಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.
ಸಂಕ್ಷಿಪ್ತ ಸ್ಕೋರ್‌ಗಳು : ಭಾರತ 50 ಓವರ್‌ಗಳಲ್ಲಿ 385/9 (ಶುಬ್‌ಮನ್ ಗಿಲ್ 112, ರೋಹಿತ್ ಶರ್ಮಾ 101; ಬ್ಲೇರ್ ಟಿಕ್ನರ್ 76ಕ್ಕೆ 3) ನ್ಯೂಜಿಲೆಂಡ್ 295 (ಡೆವೊನ್ ಕಾನ್ವೆ 138; ಶಾರ್ದೂಲ್ ಠಾಕೂರ್ 3-45) ಫಲಿತಾಂಶ: ಭಾರತಕ್ಕೆ 90 ರನ್‌ಗಳಿಂದ ಗೆಲುವು.
ಇದನ್ನೂ ಓದಿ: IND vs NZ 3rd ODI: ಭಾರತದ ಆರಂಭಿಕರ ದ್ವಿಶತಕದ ದಾಖಲೆಯ ಜೊತೆಯಾಟ: ಕಿವೀಸ್ಗೆ 386 ರನ್ಗಳ ಬೃಹತ್ ಗುರಿ
