ETV Bharat / sports

ಅಕ್ಷರ್​, ಬಿಷ್ಣೋಯ್ ಸ್ಪಿನ್​ಗೆ ನಲುಗಿದ ಕಾಂಗರೂ ಪಡೆ: ಭಾರತಕ್ಕೆ ಸರಣಿ ಜಯ

author img

By ETV Bharat Karnataka Team

Published : Dec 1, 2023, 10:39 PM IST

Updated : Dec 1, 2023, 11:03 PM IST

India vs Australia
India vs Australia

ಆಸ್ಟ್ರೇಲಿಯಾದ ವಿರುದ್ಧದ 4ನೇ ಟಿ-20 ಪಂದ್ಯವನ್ನು ಗೆದ್ದ ಭಾರತ 3-1 ರಿಂದ 5 ಪಂದ್ಯಗಳ ಸರಣಿಯನ್ನು ವಶಪಡಿಸಿಕೊಂಡಿದೆ.

ರಾಯಪುರ (ಛತ್ತೀಸ್‌ಗಢ): ವಿಶ್ವಕಪ್​ ಟ್ರೋಫಿ ಗೆದ್ದು ಬೀಗಿದ ಆಸ್ಟ್ರೇಲಿಯಾ ಪಡೆ ಐಪಿಎಲ್​ ಸ್ಟಾರ್​​ ಆಟಗಾರರ ತಂಡದ ಮುಂದೆ ಮಂಡಿಯೂರಿದ್ದು, ಒಂದು ಪಂದ್ಯ ಬಾಕಿ ಇರುವಂತೆ ಸರಣಿಯನ್ನು 3-1ರಿಂದ ಕಳೆದುಕೊಂಡಿದೆ. ರಾಯ್‌ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ 4ನೇ ಟಿ20 ಪಂದ್ಯವನ್ನು ಭಾರತ 20 ರನ್​​ಗಳಿಂದ ಗೆದ್ದು ಸರಣಿ ತನ್ನದಾಗಿಸಿಕೊಂಡಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಭಾರತ ರಿಂಕು ಸಿಂಗ್​ (46), ಯಶಸ್ವಿ ಜೈಸ್ವಾಲ್ (37)​, ಜಿತೇಶ್​ ಶರ್ಮಾ (35) ಮತ್ತು ರುತುರಾಜ್​ ಗಾಯಕ್ವಾಡ್​ (32) ಅವರ ಬ್ಯಾಟಿಂಗ್​ ನೆರವಿನಿಂದ ನಿಗದಿತ ಓವರ್​ ಅಂತ್ಯಕ್ಕೆ 9 ವಿಕೆಟ್​ ಕಳೆದುಕೊಂಡು 175 ರನ್​ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿತು.

ಗುರಿ ಬೆನ್ನಟ್ಟಿದ ಆಸೀಸ್​ ಪಡೆ ಉತ್ತಮ ಆರಂಭವನ್ನೇನೋ ಪಡೆಯಿತು. ಆದರೆ ಭಾರತೀಯ ಸ್ಪಿನ್​ ದಾಳಿಯ ಮುಂದೆ ಮಂಕಾಯಿತು. ನಾಯಕ ಸೂರ್ಯಕುಮಾರ್​ ಯಾದವ್​ ಪವರ್​ ಪ್ಲೇ ವೇಳೆಯೇ ಸ್ಪಿನ್ನರ್​ಗಳಿಗೆ ಬೌಲಿಂಗ್​ ನೀಡಿ ಪ್ರಯೋಗಕ್ಕೆ ಮುಂದಾದರು ಮತ್ತು ಯಶಸ್ಸು ಕಂಡರು. 4ನೇ ಓವರ್​ಗೆ ದಾಳಿಗೆ ಬಂದ ರವಿ ಬಿಷ್ಣೋಯ್ ಆರಂಭಿಕ ಜೋಶ್ ಫಿಲಿಪ್ ವಿಕೆಟ್​ ಉರಿಳಿಸಿದರು. ಅಲ್ಲದೇ ಆ ಓವರ್​​ನಲ್ಲಿ ಕೇವಲ 2 ರನ್​ ಬಿಟ್ಟುಕೊಟ್ಟು ನಿಯಂತ್ರಣ ಸಾಧಿಸಿದರು. 5ನೇ ಓವರ್​ ಮಾಡಿದ ಅಕ್ಷರ್​ 3 ರನ್​ ಕೊಟ್ಟರೆ, ಪವರ್​ ಪ್ಲೇಯ ಕೊನೆ ಓವರ್​​ ಮಾಡಿದ ರವಿ 7 ರನ್​ ಕೊಟ್ಟು ಬಿರುಸಿನಿಂದ ಆಡುತ್ತಿದ್ದ ಆಸೀಸ್​ ವೇಗಕ್ಕೆ ಕಡಿವಾಣ ಹಾಕಿದರು.

ಟ್ರಾವಿಸ್ ಹೆಡ್ (31), ಬೆನ್ ಮೆಕ್‌ಡರ್ಮಾಟ್ (19) ಮತ್ತು ಆರನ್ ಹಾರ್ಡಿ (8) ವಿಕೆಟ್​ನ್ನು ಅಕ್ಷರ್​​ ಪಡೆದರು. ಮಧ್ಯಮ ಕ್ರಮಾಂಕದ ಟಿಮ್ ಡೇವಿಡ್ (19) ಮತ್ತು ಮ್ಯಾಥ್ಯೂ ಶಾರ್ಟ್ (22) ಅವರನ್ನು ದೀಪಕ್ ಚಾಹರ್ ಕಿತ್ತರು. ಬೆನ್ ದ್ವಾರ್ಶುಯಿಸ್ ವಿಕೆಟ್​ ಅವೇಶ್ ಖಾನ್ ಪಾಲಾಯಿತು. ನಾಯಕ ಮ್ಯಾಥ್ಯೂ ವೇಡ್ ಅವರ 36 ರನ್​ಗಳ ಪರಿಶ್ರಮ ಜಯಕ್ಕೆ ಸಹಾಯ ಮಾಡಲಿಲ್ಲ.

ಭಾರತದ ಪರ ಮೂರು ವಿಕೆಟ್​ ಕಿತ್ತು ಆಸೀಸ್​ಗೆ ಒತ್ತಡ ಉಂಟುಮಾಡಿದ ಅಕ್ಷರ್​ ಪಟೇಲ್​ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಡಿಸೆಂಬರ್​ 3ರಂದು ಬೆಂಗಳೂರಿನಲ್ಲಿ ಕೊನೆಯ ಔಪಚಾರಿಕ ಪಂದ್ಯ ನಡೆಯಲಿದೆ.

ಇದನ್ನೂ ಓದಿ: "ಆ ಫೋಟೋದಲ್ಲಿ ಯಾವುದೇ ಅಗೌರವ ಇಲ್ಲ" ವಿಶ್ವಕಪ್ ಮೇಲೆ ಕಾಲಿಟ್ಟ ನಡೆ ಸಮರ್ಥಿಸಿಕೊಂಡ ಮಿಚೆಲ್​ ಮಾರ್ಷ್

Last Updated :Dec 1, 2023, 11:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.